Don't Miss!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Pathaan Trailer: 'ವನವಾಸ' ಮುಗಿಸಿದ ಶಾರುಕ್: ದೇಶಕ್ಕಾಗಿ ಪ್ರಾಣದ ಹಂಗು ತೊರೆದು ಹೋರಾಡುವ ಸೈನಿಕ 'ಪಠಾಣ್'
ಮೋಸ್ಟ್ ಎಕ್ಸ್‌ಪೆಕ್ಟೆಡ್ 'ಪಠಾಣ್' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸಂಚಲನ ಸೃಷ್ಟಿಸಿದೆ. 'ಬೇಷರಂ' ಹಾಡಿನ ಕಾರಣಕ್ಕೆ ಭಾರೀ ವಿವಾದ ಸೃಷ್ಟಿಸಿದ್ದ ಸಿನಿಮಾ ಅದನ್ನೆಲ್ಲಾ ಮೀರಿ ಬಾಕ್ಸಾಫೀಸ್ ಶೇಕ್ ಮಾಡುವ ಸುಳಿವು ಸಿಕ್ತಿದೆ. ದೇಶ ಕಾಯುವ ಯೋಧನಾಗಿ ಶಾರುಕ್ ಖಾನ್ ಬರ್ತಿದ್ದಾರೆ.
ಯಶ್ ರಾಜ್ ಫಿಲ್ಮ್ಸ್ ಬ್ಯಾನರ್‌ನಲ್ಲಿ 'ಪಠಾಣ್' ಸಿನಿಮಾ ನಿರ್ಮಾಣ ಆಗಿದ್ದು ಜನವರಿ 25ಕ್ಕೆ ತೆರೆಗಪ್ಪಳಿಸಲಿದೆ. ಚಿತ್ರದಲ್ಲಿ ವಿಲನ್ ಆಗಿ ಜಾನ್ ಅಬ್ರಹಾಂ ಅಬ್ಬರಿಸಿದ್ದರೆ ನಾಯಕಿಯಾಗಿ ದೀಪಿಕಾ ಸಾಥ್ ಸಿಕ್ಕಿದೆ. ಮೈ ಜುಮ್ ಎನ್ನಿಸುವ ಆಕ್ಷನ್ ಸೀಕ್ವೆನ್ಸ್ ಹೈಲೆಟ್ ಮಾಡಿ ಟ್ರೈಲರ್ ಕಟ್ ಮಾಡಿದ್ದಾರೆ. 4 ವರ್ಷಗಳ ನಂತರ ಶಾರುಕ್ ಖಾನ್ ಬಣ್ಣ ಹಚ್ಚಿದ್ದು ಭರ್ಜರಿ ಕಂಬ್ಯಾಕ್ ನೀಡುವ ಸುಳಿವು ಸಿಕ್ತಿದೆ. ಸಿದ್ಧಾರ್ಥ್ ಆನಂದ್ ಪ್ರತಿಫ್ರೇಮ್ ಅನ್ನು ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ತಿದ್ದಿ ತೀಡಿದ್ದಾರೆ. ಟ್ರೈಲರ್ ಸಖತ್ ಕಿಕ್ ಕೊಡ್ತಿದ್ದು ಸಿನಿಮಾ ಪಕ್ಕಾ ಹಿಟ್ ಆಗುತ್ತೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಒತ್ತಾಯಕ್ಕೆ
ಮಣಿದು
'ಪಠಾಣ್'
ಸಿನಿಮಾಕ್ಕೆ
ಸೆನ್ಸಾರ್:
ಟಿ.ಎಸ್
ನಾಗಾಭರಣ
ಅಸಮಾಧಾನ
2 ವರ್ಷಗಳ ಹಿಂದೆ ಅನೌನ್ಸ್ ಆಗಿದ್ದ 'ಪಠಾಣ್' ಸಿನಿಮಾ ಕೊನೆಗೂ ರಿಲೀಸ್‌ಗೆ ರೆಡಿಯಾಗಿದೆ. ಸೆನ್ಸಾರ್ ಮಂಡಳಿ ಒಂದಷ್ಟು ಸೀನ್‌ಗಳಿಗೆ ಕತ್ತರಿ ಹಾಕಿದೆ. ಎಲ್ಲಾ ವಿವಾದಗಳಿಗೂ ಸಿನಿಮಾ ಮೂಲಕವೇ ಶಾರುಕ್ ಖಾನ್ ಉತ್ತರ ಕೊಡುವ ಸುಳಿವು ಸಿಕ್ತಿದೆ.

ವನವಾಸ ಮುಗಿಸಿದ 'ಪಠಾಣ್'
ಡಿಂಪಲ್ ಕಪಾಡಿಯಾ ವಾಯ್ಸ್ ಓವರ್ ಜೊತೆಗೆ 'ಪಠಾಣ್' ಟ್ರೈಲರ್ ಶುರುವಾಗುತ್ತದೆ. ಔಟ್ ಫಿಟ್ ಎಕ್ಸ್ ಎನ್ನುವ ಒಂದು ಖಾಸಗಿ ಟೆರರ್ ಗ್ರೂಪ್ ಭಾರತದ ಮೇಲೆ ವಿಧ್ವಂಸಕ ದಾಳಿಗೆ ಪ್ರಯತ್ನಿಸುತ್ತಿರುವ ಮಾಹಿತಿ ಸಿಗುತ್ತದೆ. ಆ ದಾಳಿಯ ಪ್ರಮುಖ ರುವಾರಿ ಆಗಿ ಜಾನ್ ಅಬ್ರಹಾಂ ಕಾಣಿಸಿಕೊಂಡಿದ್ದಾರೆ. ಆ ದಾಳಿಯನ್ನು ತಡೆಯಲು ವನವಾಸದಲ್ಲಿರುವ ರಾ ಫೀಲ್ಡ್ ಏಜೆಂಟ್ 'ಪಠಾಣ್' ಆಗಮನವಾಗುತ್ತದೆ. ಪಠಾಣ್ ಆ ದಾಳಿಯನ್ನು ಹೇಗೆ ಎದುರಿಸುತ್ತಾನೆ, ಆ ಹಾದಿಯಲ್ಲಿ ಜೊತೆಯಾಗುವ ನಾಯಕಿ ಹೀಗೆ ಕಥೆ ಮುಂದುವರೆಯುತ್ತದೆ.

ಸೈನಿಕನಾಗಿ ಶಾರುಕ್ ಖಾನ್
'ಜೀರೊ' ಸಿನಿಮಾ ಸೋಲಿನ ನಂತರ ಶಾರುಕ್ ಖಾನ್ ಮತ್ತೆ ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. ಬರೋಬ್ಬರಿ 4 ವರ್ಷಗಳ ನಂತರ ವಾಪಸ್ ಬರ್ತಿದ್ದಾರೆ. ಅದನ್ನು ಪರೋಕ್ಷವಾಗಿ ಪಠಾಣ್ ವನವಾಸ ಮುಗಿಸಿ ಬರ್ತಿದ್ದಾನೆ ಎಂದು ಹೇಳಲಾಗಿದೆ. ಕೊಂಚ ಉದ್ದನೆಯ ಕೂದಲು ಬಿಟ್ಟು ಸಿಕ್ಕಪಟ್ಟೆ ಸ್ಟೈಲಿಶ್ ಲುಕ್‌ನಲ್ಲಿ ಶಾರುಕ್ ಮಿಂಚಿದ್ದಾರೆ. "ಒಬ್ಬ ಸೈನಿಕ ತನ್ನ ದೇಶ ತನಗಾಗಿ ಏನು ಮಾಡಿದೆ ಎಂದು ಕೇಳುವುದಿಲ್ಲ. ದೇಶಕ್ಕಾಗಿ ತಾನು ಏನು ಮಾಡಬಹುದು ಎಂದು ಯೋಚಿಸುತ್ತಾನೆ" ಎನ್ನುವ ಡೈಲಾಗ್ ಹೈಲೆಟ್ ಆಗಿದೆ.

ಶಾರುಕ್- ಜಾನ್ ಫೈಟ್
'ಪಠಾಣ್' ಜಾನ್ ಅಬ್ರಹಾಂ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಯಾವುದೇ ಸಿದ್ದಾಂತ ಇಲ್ಲದೇ ಕಾಂಟ್ರಾಕ್ಟ್‌ಗಾಗಿ ದಾಳಿಯನ್ನು ನಡೆಸುವ ಗುಂಪಿನ ನಾಯಕನಾಗಿ ಜಾನ್ ದರ್ಶನ ಕೊಟ್ಟಿದ್ದಾರೆ. ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿರೋ ಜಾನ್ ಬೇರ್ ಬಾಡಿ ದರ್ಶನ ಕೂಡ ಮಾಡಿಸುತ್ತಾರೆ. ಶಾರುಕ್ ಖಾನ್ ಜೊತೆ ಜಾನ್ ಏಟು ಎದಿರೇಟು ನೋಡುಗರಿಗೆ ಸಖತ್ ಕಿಕ್ ಕೊಡಲಿದೆ. ಸ್ಪೈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಏರಿಯಲ್ ಆಕ್ಷನ್ ಸೀಕ್ವೆನ್ಸ್‌ಗೆ ಹೆಚ್ಚಿನ ಮಹತ್ವ ಕೊಡಲಾಗಿದೆ. ಆಗಸದಲ್ಲಿ ಶಾರುಕ್- ಜಾನ್ ಸಾಹಸಗಳು ಮೈಜುಮ್ ಎನಿಸುವಂತಿದೆ. ಕೆಲ ದೃಶ್ಯಗಳು ಹಾಲಿವುಡ್ ಆಕ್ಷನ್ ಸಿನಿಮಾಗಳನ್ನು ನೆನಪಿಸುತ್ತವೆ.

ಜನವರಿ 25ಕ್ಕೆ ಸಿನಿಮಾ ರಿಲೀಸ್
ಇನ್ನು ಚಿತ್ರದಲ್ಲಿ ದೀಪಿಕಾ ಪಡುಕೋಣೆ ಸೈನಿಕ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ. ಪಠಾಣ್ ಜೊತೆ ಸೇರಿ ನಾನಾ ವೇಷಗಳಲ್ಲಿ ಟೆರರ್ ಅಟ್ಯಾಕ್ ತಡೆಯಲು ಪ್ರಯತ್ನಿಸುವ ದೃಶ್ಯಗಳನ್ನು ಟ್ರೈಲರ್‌ನಲ್ಲಿ ನೋಡಬಹುದು. ಬಿಕಿನಿಯಲ್ಲೂ ದೀಪಿಕಾ ಕಾಣಿಸಿಕೊಂಡು ಹುಬ್ಬೇರಿಸಿದ್ದಾರೆ. ಸಿಕ್ಕಾಪಟ್ಟೆ ಅದ್ಧೂರಿಯಾಗಿ 'ಪಠಾಣ್' ಚಿತ್ರವನ್ನು ಕಟ್ಟಿಕೊಡಲಾಗಿದೆ. ಶಾರುಕ್ ಖಾನ್ ಅಭಿಮಾನಿಗಳಿಗೆ ಟ್ರೈಲರ್ ಇಷ್ಟವಾಗಿದೆ. ಕೆಲವೇ ನಿಮಿಷಗಳಲ್ಲಿ ಲಕ್ಷ ಲಕ್ಷ ವೀವ್ಸ್ ಸಾಧಿಸಿ ಟ್ರೈಲರ್ ಸದ್ದು ಮಾಡ್ತಿದೆ. ಚಿತ್ರದಲ್ಲಿ ಟೈಗರ್ ರಾಥೋರ್ ಆಗಿ ಸಲ್ಮಾನ್ ಖಾನ್ ಕೂಡ ಗೆಸ್ಟ್ ಅಪ್ಪಿಯರೆನ್ಸ್ ಮಾಡಿದ್ದಾರೆ. ಆದರೆ ಟ್ರೈಲರ್‌ನಲ್ಲಿ ಸಲ್ಲು ಕಾಣಿಸಿಕೊಂಡಿಲ್ಲ. ಮತ್ತೊಂದು ಟ್ರೈಲರ್ ಬರುವ ಸಾಧ್ಯತೆಯಿದೆ.