For Quick Alerts
  ALLOW NOTIFICATIONS  
  For Daily Alerts

  ಅಬ್ಬಬ್ಬಾ ಶಾರುಖ್ ಖಾನ್ ಧರಿಸಿದ್ದ ವಾಚ್ ಬೆಲೆ 4 ಕೋಟಿ: ರೇಟ್ ಕೇಳಿ ಫ್ಯಾನ್ಸ್ ಏನಂದ್ರು ಗೊತ್ತಾ?

  |

  ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ 'ಪಠಾಣ್' ಸಿನಿಮಾ ಮೂಲಕವೇ ಇತ್ತೀಚೆಗೆ ಸುದ್ದಿಯಲ್ಲಿದ್ದರು. 'ಪಠಾಣ್' ಸಿನಿಮಾದಲ್ಲಿನ ಕಿಂಗ್ ಖಾನ್ ಲುಕ್ ಹಾಗೂ ಬಟ್ಟೆ ಬಗ್ಗೆ ಅಭಿಮಾನಿಗಳು ಹೊಗಳುತ್ತಿದ್ದಾರೆ. ನಟ ಶಾರುಖ್ ಖಾನ್ ಅವರ ದುಬಾರಿ ಲೈಫ್ ಸ್ಟೈಲ್ ಹಾಗೂ ವಾಚ್ ಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದ್ರೀಗ ಅವರು ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಧರಿಸಿದ್ದ ವಾಚ್ ಬೆಲೆ ಸಖತ್ ಸುದ್ದಿಯಾಗ್ತಿದೆ.

  ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ನಾಲ್ಕು ವರ್ಷಗಳ ದೊಡ್ಡ ಬ್ರೇಕ್ ನ ನಂತರ ಶಾರುಖ್ 'ಪಠಾಣ್' ಆಗಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಈ ಮಧ್ಯೆ ವಾಚ್ ವಿಷಯದಿಂದ ನಟ ಶಾರುಖ್ ಖಾನ್ ಸುದ್ದಿಯಾಗಿದ್ದಾರೆ. ಎಸ್ ಆರ್ ಕೆ ಇತ್ತೀಚೆಗಷ್ಟೇ ಟಿ 20 ಉಧ್ಘಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಸಮಾರಂಭದಲ್ಲಿ ದುಬಾರಿ ಬೆಲೆಯ ವಾಚ್ ಧರಿಸಿದ್ದರು. ಸದ್ಯ ಈ ವಾಚ್ ಬೆಲೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

  ಕಿಂಗ್ ಖಾನ್ ವಾಚ್ ಬೆಲೆ 4 ಕೋಟಿ

  ಅಂದಹಾಗೆ, ಶಾರುಖ್ ಧರಿಸಿದ್ದ ದುಬಾರಿ ವಾಚ್ ಬೆಲೆ 4 ಕೋಟಿ 74 ಲಕ್ಷದ 47 ಸಾವಿರ ರೂಪಾಯಿ. ಬಾಲಿವುಡ್ ಬಾದ್ ಶಾನ ಅಭಿಮಾನಿಯೊಬ್ಬ ಈ ವಾಚ್ ನ ಬೆಲೆ ಕಂಡುಹಿಡಿದಿದ್ದಾನೆ. ಕಿಂಗ್ ಖಾನ್ ಧರಿಸಿದ್ದ ವಾಚ್ ಆಡೇಮರ್ಸ್ ಪಿಜುಯೆಟ್ ಬ್ರಾಂಡ್ ನದ್ದಾಗಿದ್ದು, ಅದನ್ನು ರಾಯಲ್ ಓಕ್ ಪರ್ಚುವಲ್ ಕ್ಯಾಲೆಂಡರ್ ಎಂದು ಕಳೆಯಲಾಗುತ್ತೆ. ನಟನ ವಾಚ್ ಬೆಲೆ ತಿಳಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ತರೇಹವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಓರ್ವ 'ಟೈಮ್ ಎಲ್ಲಾ ಕೈಗಡಿಯಾರದಲ್ಲೂ ಒಂದೇ ರೀತಿ ಕಾಣುತ್ತದೆ. ಅದರಲ್ಲಿ ಸ್ಪೆಷಲ್ ಏನು? ಎಂದು ಹೇಳಿದ್ದಾನೆ.

  Shah Rukh Khan wears a high-end watch worth a whopping Rs 4 core

  ಕಿಂಗ್ ಖಾನ್ 'ಪಠಾಣ್' ಹೇಗಿದೆ?

  ಶಾರುಖ್ ನಟನೆಯ 'ಪಠಾಣ್' ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. 58 ವರ್ಷದ ಕಿಂಗ್ ಖಾನ್ ನಾಲ್ಕು ವರ್ಷಗಳ ನಂತರ ಗ್ರ್ಯಾಂಡ್ ಆಗಿ ಎಂಟ್ರಿಕೊಟ್ಟಿದ್ದಾರೆ. ಪಠಾಣ್ ರಿಲೀಸ್ ಅನ್ನು ಶಾರುಖ್ ಅಭಿಮಾನಿಗಳು ಹಬ್ಬದಂತೆ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಪಠಾಣ್ ಪಕ್ಕಾ ಮಸಾಲಾ ಎಂಟರ್‌ಟೈನರ್ ಸಿನಿಮಾ. ದುಬಾರಿ ಆಕ್ಷನ್ ಸೀಕ್ವೆನ್ಸ್, ಹೀರೊ ವಿಲನ್ ನಡುವಿನ ಘರ್ಷಣೆ, ರೊಮ್ಯಾನ್ಸ್ ಈ ಸಿನಿಮಾದ ಹೈಲೈಟ್.

  ಸಿನಿಮಾದಲ್ಲಿ ಶಾರುಖ್ ಖಾನ್ ಎಂಟ್ರಿ ಮೊಟ್ಟ ಮೊದಲ ದೃಶ್ಯದಿಂದ ಗಮನ ಸೆಳೆಯುತ್ತೆ. 58 ವರ್ಷದ ನಟ ಫಿಟ್ನೆಸ್, ಸಿಕ್ಸ್ ಪ್ಯಾಕ್ ಬಾಡಿ, ಪವರ್‌ಫುಲ್ ಕಣ್ಣುಗಳು ಪ್ರೇಕ್ಷಕರಿಗೆ ಕಿಕ್ ಕೊಡುತ್ತವೆ. ಶಾರುಖ್ ಖಾನ್ ಜೊತೆ ಸಿನಿಪ್ರಿಯರಿಗೆ ಕಿಕ್ ಕೊಡುವ ಮತ್ತೊಬ್ಬ ನಟ ಜಾನ್ ಅಬ್ರಾಹಂ. ಜಿಮ್ ಪಾತ್ರದಲ್ಲಿ ಮಸಲ್‌ಮ್ಯಾನ್ ಜಾನ್ ಅಬ್ರಾಹಂ ಗಮನ ಸೆಳೆಯುತ್ತಾರೆ. ಕೆಲವೊಮ್ಮೆ ಶಾರುಖ್ ಖಾನ್ ಪಾತ್ರಕ್ಕೆ ಸೈಡು ಹೊಡೆಯುವಂತೆ ನಟಿಸಿದ್ದಾರೆ. ದೀಪಿಕಾ ಪಡುಕೋಣೆ ಈ ಸಿನಿಮಾದಲ್ಲಿ ತುಂಬಾನೇ ಸುಂದರವಾಗಿ ಕಾಣಿಸುತ್ತಾರೆ. ಶಾರುಖ್ ಹಾಗೂ ದೀಪಿಕಾ ಕೆಮಿಸ್ಟ್ರಿ ಮತ್ತೊಮ್ಮೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

  English summary
  Shah Rukh Khan wears a high-end watch worth a whopping Rs 4 core, Know More.
  Wednesday, January 25, 2023, 20:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X