Don't Miss!
- Finance
Budget 2023: ಕೇಂದ್ರ ಬಜೆಟ್ನ ಇತಿಹಾಸ, ಕುತೂಹಲಕಾರಿ ಸಂಗತಿ ತಿಳಿಯಿರಿ
- News
ನಾನು ಯಾರನ್ನೋ ನಂಬಿ ಪಕ್ಷ ಸ್ಥಾಪಿಸಿಲ್ಲ, ಯಾರಿಗೂ ಹೆದರಿಲ್ಲ: ಜನಾರ್ಧನ ರೆಡ್ಡಿ
- Technology
Budget 2023: ಈ ಆಪ್ನಲ್ಲಿ ಪಡೆಯಿರಿ ಬಜೆಟ್ 2023 ರ ಸಂಪೂರ್ಣ ವಿವರ!
- Automobiles
ಭಾರತದದಲ್ಲಿ ಟ್ರೆಂಡಿಂಗ್ನಲ್ಲಿರುವ ಜನಪ್ರಿಯ ಕಾರುಗಳು: ಇವುಗಳಿಗೆ ಸರಿಸಾಟಿಯೇ ಇಲ್ಲ..!
- Sports
ಈ ಹಿಂದಿನಂತೆ ಈ ತಂಡ ಈಗ ಬಲಿಷ್ಠ ತಂಡವಲ್ಲ: ಆಕಾಶ್ ಚೋಪ್ರ ಹೇಳಿದ ಆ ತಂಡ ಯಾವುದು?
- Lifestyle
Shani Asta 2023 : ಶನಿ ಅಸ್ತ 2023: ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವ ಹಾಗೂ ಪರಿಹಾರ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತಮಿಳು ನಟನಿಗಾಗಿ ಹಣ ಪಡೆಯದೇ ಸಿನಿಮಾದಲ್ಲಿ ನಟಿಸಿದ ಶಾರುಖ್ ಖಾನ್!
ಹಿಂದಿ ಚಿತ್ರರಂಗದ ದೊಡ್ಡ ಸ್ಟಾರ್ ನಟ ಶಾರುಖ್ ಖಾನ್. ಹಲವಾರು ಹಿಟ್ ಹಿಂದಿ ಸಿನಿಮಾಗಳಲ್ಲಿ ಶಾರುಖ್ ಖಾನ್ ನಟಿಸಿದ್ದಾರೆ. ಹಿಂದಿ ಚಿತ್ರರಂಗದ ಬಾದ್‌ಷಾ ಆಗಿರುವ ಶಾರುಖ್, ಇತರೆ ಚಿತ್ರೋದ್ಯಮಗಳಲ್ಲಿಯೂ ಸಾಕಷ್ಟು ಗೆಳೆಯರನ್ನು ಹೊಂದಿದ್ದಾರೆ.
ಈ ವರೆಗೆ ಹಲವಾರು ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಶಾರುಖ್ ಖಾನ್, ಕಮಲ್ ಹಾಸನ್ ಜೊತೆ ಒಂದು ತಮಿಳು ಸಿನಿಮಾದಲ್ಲಿಯೂ ನಟಿಸಿದ್ದಾರೆ. ಆದರೆ ಆ ಸಿನಿಮಾಕ್ಕೆ ಅವರು ಹಣ ಪಡೆದಿರಲಿಲ್ಲ. ಈಗ ತಮಿಳಿನ ಸ್ಟಾರ್ ನಟರೊಬ್ಬರಿಗಾಗಿ ಮತ್ತೊಮ್ಮೆ ಹಣ ಪಡೆಯದೆ ಸಿನಿಮಾದಲ್ಲಿ ನಟಿಸಿದ್ದಾರೆ.
ತಮಿಳಿನ ಸ್ಟಾರ್ ನಟ ಆರ್ ಮಾಧವನ್ ಅವರ 'ರಾಕೆಟ್ರಿ' ಸಿನಿಮಾ ಮುಂದಿನ ವಾರ ಬಿಡುಗಡೆ ಆಗುತ್ತಿದ್ದು, ಸಿನಿಮಾದಲ್ಲಿ ಶಾರುಖ್ ಖಾನ್ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾಕ್ಕೆ ಅವರು ಸಂಭಾವನೆ ಪಡೆದಿಲ್ಲವಂತೆ. ಅಲ್ಲದೆ ಆ ಸಿನಿಮಾದಲ್ಲಿ ತಾವು ನಟಿಸಲೇ ಬೇಕು ಎಂದು ಪಟ್ಟು ಹಿಡಿದು ಕೇಳಿದರಂತೆ ಶಾರುಖ್ ಖಾನ್. ಈ ಬಗ್ಗೆ ಆರ್.ಮಾಧವನ್ ಹೇಳಿಕೊಂಡಿದ್ದಾರೆ.

2018 ರಲ್ಲಿ ಶಾರುಖ್ ಖಾನ್‌ಗೆ ಕತೆ ಹೇಳಿದ್ದ ಮಾಧವನ್
''2018 ರಲ್ಲಿ ಶಾರುಖ್ ಖಾನ್ ಜೊತೆಗೆ 'ಜೀರೋ' ಸಿನಿಮಾ ಚಿತ್ರೀಕರಣ ಮಾಡುವಾಗ ನಾನು ಅದರಲ್ಲಿ ಸಣ್ಣ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಆಗ ನಾನು ಶಾರುಖ್ ಖಾನ್‌ಗೆ 'ರಾಕೆಟ್ರಿ' ಸಿನಿಮಾದ ಕತೆ ಹೇಳಿದ್ದೆ. ಅವರಿಗೆ ಇಷ್ಟವಾಗಿತ್ತು. ನಂತರ ಶಾರುಖ್ ಖಾನ್ ಹುಟ್ಟುಹಬ್ಬಕ್ಕೆ ಹೋದಾಗ ''ಮ್ಯಾಡಿ, ನಾನು ನಿನ್ನ ಸಿನಿಮಾದಲ್ಲಿ ನಟಿಸುತ್ತೇನೆ. ನನಗೆ ಒಂದು ಸಣ್ಣ ಪಾತ್ರ ಕೊಡು ಸಾಕು'' ಎಂದಿದ್ದರು. ನನ್ನ ಮೇಲಿನ ಪ್ರೀತಿಗೆ ಹೇಳುತ್ತಿದ್ದಾರೆ ಎಂದುಕೊಂಡು ಥ್ಯಾಂಕ್ಸ್ ಹೇಳಿದೆ, ಆಗ ಶಾರುಖ್ ಖಾನ್ ಇಲ್ಲ ನಾನು ಸೀರಿಯಸ್ ಆಗಿದ್ದೇನೆ ಎಂದರು'' ಎಂದು ನೆನಪು ಮಾಡಿಕೊಂಡಿದ್ದಾರೆ ಮ್ಯಾಡಿ ಮಾಧವನ್.

ಶಾರುಖ್ ಖಾನ್ ಡೇಟ್ಸ್ ಯಾವಾಗ ಬೇಕೆಂದ ಮ್ಯಾನೇಜರ್
''ಅದಾಗಿ ಎರಡು ದಿನಗಳ ನಂತರ ಪಾರ್ಟಿಗೆ ಥ್ಯಾಂಕ್ಸ್ ಹೇಳಲು ನಾನು ಶಾರುಖ್ ಖಾನ್‌ಗೆ ಸಂದೇಶ ಕಳಿಸಿದೆ. ಆಗ ಅವರ ಮ್ಯಾನೇಜರ್ ಕರೆ ಮಾಡಿ, 'ರಾಕೆಟ್ರಿ' ಸಿನಿಮಾಕ್ಕೆ ಶಾರುಖ್ ಖಾನ್‌ರ ಡೇಟ್ಸ್ ಯಾವಾಗ ಬೇಕು ಎಂದು ಕೇಳಿದರು. ಆಗ ನಾನು 'ಶಾರುಖ್ ಖಾನ್‌ಗೆ ಯಾವುದೇ ಸಣ್ಣ ರೋಲ್ ಸಿನಿಮಾದಲ್ಲಿ ಇಲ್ಲ, ಆದರೆ ಒಂದು ಪಾತ್ರವಿದೆ ಆದರೆ ಅದು ಪ್ರಮುಖವಾದ ಪಾತ್ರ' ಎಂದೆ. ಆ ಪಾತ್ರವನ್ನೇ ಮಾಡಲು ಶಾರುಖ್ ಖಾನ್ ಒಪ್ಪಿಕೊಂಡರು'' ಎಂದಿದ್ದಾರೆ ಮಾಧವನ್.

ಒಂದು ರುಪಾಯಿ ಹಣ ಪಡೆಯಲಿಲ್ಲ ಶಾರುಖ್ ಮತ್ತು ಸೂರ್ಯ
''ಶಾರುಖ್ ಖಾನ್ ಆಗಲಿ, ತಮಿಳಿನಲ್ಲಿ ಅದೇ ಅತಿಥಿ ಪಾತ್ರದಲ್ಲಿ ನಟಿಸಿದ ಸೂರ್ಯಾ ಆಗಲಿ ನನ್ನಿಂದ ಒಂದು ರೂಪಾಯಿ ಹಣ ಪಡೆಯಲಿಲ್ಲ. ಕ್ಯಾರಾವ್ಯಾನ್, ಮೇಕಪ್, ಅಸಿಸ್ಟೆಂಟ್ ಯಾವುದಕ್ಕೂ ಒಂದು ರೂಪಾಯಿ ಹಣ ಪಡೆಯಲಿಲ್ಲ. ಸೂರ್ಯ ಅಂತೂ ಮುಂಬೈಗೆ ವಿಮಾನದಲ್ಲಿಯೇ ತಮ್ಮ ಅಸಿಸ್ಟೆಂಟ್‌ಗಳ ಜೊತೆ ಬಂದು ಚಿತ್ರೀಕರಣದಲ್ಲಿ ಪಾಲ್ಗೊಂಡು ಡಬ್ಬಿಂಗ್ ಸಹ ಮುಗಿಸಿ ಹೋದರು'' ಎಂದಿದ್ದಾರೆ ಮಾಧವನ್. 'ರಾಕೆಟ್ರಿ' ಸಿನಿಮಾದ ಹಿಂದಿ ವರ್ಷನ್‌ನಲ್ಲಿ ಶಾರುಖ್ ಖಾನ್ ಹಾಗೂ ಇತರೆ ವರ್ಷನ್‌ಗಳಲ್ಲಿ ಸೂರ್ಯ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

ಪ್ರಿಯಾಂಕಾ ಚೋಪ್ರಾ, ಅಮಿತಾಬ್ ಬಚ್ಚನ್ ನೆರವು ಸ್ಮರಿಸಿದ ಮಾಧವನ್
''ಚಿತ್ರರಂಗದಲ್ಲಿ ಬಹಳ ಒಳ್ಳೆಯ ಜನರಿದ್ದಾರೆ. ನಾನು ಹೊರಗಿನವನು ಆದರೆ ಅವರು ನನಗೆ ಬಹಳ ಸಹಾಯ ಮಾಡಿದ್ದಾರೆ. ನನ್ನ ಒಂದು ಸಂದೇಶದಿಂದ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಅಮಿತಾಬ್ ಬಚ್ಚನ್ ಅವರುಗಳು ನನ್ನ ಸಿನಿಮಾದ ಟ್ರೈಲರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದರು'' ಎಂದು ಧನ್ಯವಾದ ಹೇಳಿದ್ದಾರೆ ಮಾಧವನ್. 'ರಾಕೆಟ್ರಿ' ಸಿನಿಮಾ ಜುಲೈ 1 ರಂದು ತಮಿಳು, ಹಿಂದಿ, ತೆಲುಗು, ಮಲಯಾಳಂ, ಕನ್ನಡ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾವು ವಿಜ್ಞಾನಿ ನಂಬಿ ನಾರಾಯಣ್ ಕುರಿತ ಕತೆಯನ್ನು ಹೊಂದಿದೆ.