twitter
    For Quick Alerts
    ALLOW NOTIFICATIONS  
    For Daily Alerts

    'ಕಬೀರ್ ಸಿಂಗ್' ಸಿನಿಮಾ ಬಳಿಕ ಭಿಕ್ಷುಕನಂತೆ ಅಲೆದೆ: ನಟ ಶಾಹಿದ್ ಕಪೂರ್

    |

    ಬಾಲಿವುಡ್‌ನಲ್ಲಿ ಆರಕ್ಕೇರದ, ಮೂರಕ್ಕಿಳಿಯದ ನಟ ಶಾಹಿದ್ ಕಪೂರ್. 2003 ರಲ್ಲಿ ನಾಯಕ ನಟನಾಗಿ ಶಾಹಿದ್ ತೆರೆಯ ಮೇಲೆ ಬಂದಾಗ ಶಾಹಿದ್‌ನನ್ನು ಶಾರುಖ್‌ ಖಾನ್‌ಗೆ ಹೋಲಿಸಲಾಗಿತ್ತು. ಆದರೆ ನಂತರ ಆಗಿದ್ದೇ ಬೇರೆ.

    ಆರಂಭದ ಕೆಲ ವರ್ಷಗಳ ಕಾಲ ಶಾಹಿದ್ ಅದೃಷ್ಟವೂ ಸರಿಯಾಗಿತ್ತು. ಹಿಟ್‌ ಮೇಲೆ ಹಿಟ್ ಸಿನಿಮಾಗಳನ್ನು ನೀಡಿದರು. ಆರಂಭದಲ್ಲಿಯೇ ದೊಡ್ಡ ನಟರೊಂದಿಗೆ ತೆರೆ ಹಂಚಿಕೊಂಡರು, ದೊಡ್ಡ-ದೊಡ್ಡ ನಿರ್ಮಾಣ ಸಂಸ್ಥೆಗಳೊಟ್ಟಿಗೆ ಸಿನಿಮಾ ಮಾಡಿದರು. ಕರೀನಾ ಕಪೂರ್ ಸಹ ಜೊತೆಯಾದರು. ಸ್ಟಾರ್ ಗಿರಿಯೂ ಧಕ್ಕಿಬಿಟ್ಟಿತ್ತು.

    ಆದರೆ ವರ್ಷಗಳು ಕಳೆದಂತೆ ಶಾಹಿದ್ ಮಂಕಾಗುತ್ತಾ ಸಾಗಿದರು. ಆರಂಭದ ಚಾರ್ಮ್ ಕಳೆದುಕೊಂಡರು. ಶಾಹಿದ್ ನಂತರ ಬಂದ ರಣ್ಬೀರ್ ಕಪೂರ್, ರಣ್ವೀರ್ ಸಿಂಗ್ ಇನ್ನೂ ಮುಂತಾದ ಪ್ರತಿಭಾವಂತ ನಟರು ಶಾಹಿದ್ ಅನ್ನು ಮೀರಿಸಿ ಮುನ್ನಡೆದರು. ಇತ್ತೀಚೆಗೆ ಎರಡನೇ ನಾಯಕ ಅಥವಾ ರೀಮೇಕ್ ಸಿನಿಮಾಗಳಿಗೆ ಮಾತ್ರವೇ ಶಾಹಿದ್ ಸೀಮಿತವಾಗಿಬಿಟ್ಟಿದ್ದಾರೆ. ಆದರೆ ರೀಮೇಕ್ ಸಿನಿಮಾದಲ್ಲಿಯೇ 200 ಕೋಟಿ ಸಿನಿಮಾ ನೀಡಿದ್ದಾರೆ ಶಾಹಿದ್. ಈಗ ಮತ್ತೆ ಹೊಸ ಹಾದಿ ಹಿಡಿಯುವ ಪ್ರಯತ್ನದಲ್ಲಿದ್ದಾರೆ ಶಾಹಿದ್.

    ಇದೀಗ ಶಾಹಿದ್ ನಟನೆಯ 'ಜೆರ್ಸಿ' ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು, ಈ ಸಿನಿಮಾವು ತೆಲುಗಿನಲ್ಲಿ ನಾನಿ ನಟಿಸಿದ್ದ ಇದೇ ಹೆಸರಿನ ಸಿನಿಮಾದ ರೀಮೇಕ್ ಆಗಿದೆ. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿರುವ ಶಾಹಿದ್ ಕಪೂರ್, 'ಕಬೀರ್ ಸಿಂಗ್' ಸಿನಿಮಾ ಹಿಟ್ ಆದ ಬಳಿಕ ತಾವೆಷ್ಟು ಮಾನಸಿಕವಾಗಿ ಗೊಂದಲದಲ್ಲಿದ್ದೆ ಎಂಬುದನ್ನು ವಿವರಿಸಿದ್ದಾರೆ.

    ಒಮ್ಮೆಯೂ 100 ಕೋಟಿ ಸಿನಿಮಾ ಮಾಡಿರಲಿಲ್ಲ: ಶಾಹಿದ್ ಕಪೂರ್

    ಒಮ್ಮೆಯೂ 100 ಕೋಟಿ ಸಿನಿಮಾ ಮಾಡಿರಲಿಲ್ಲ: ಶಾಹಿದ್ ಕಪೂರ್

    ಕಳೆದ 18 ವರ್ಷಗಳಿಂದಲೂ ನಾನು ಚಿತ್ರರಂಗದಲ್ಲಿದ್ದೇನೆ ಆದರೆ ಈವರೆಗೆ ಒಮ್ಮೆಯೂ 100 ಕೋಟಿ ಸಿನಿಮಾ ಮಾಡಲಾಗಿರಲಿಲ್ಲ. ನನ್ನ ಬಗ್ಗೆ ನನಗೇ ಅನುಮಾನ ಮೂಡುತ್ತಿರುವ ಹೊತ್ತಿನಲ್ಲಿ 'ಕಬೀರ್ ಸಿಂಗ್' ಸಿನಿಮಾ 200 ಕೋಟಿ ಕ್ಲಬ್ ಸೇರಿತು. ನಾನಂತೂ ಹುಚ್ಚನಂತಾಗಿದ್ದೆ, ಭಿಕ್ಷುಕನಂತೆ ಅಲೆದಾಡಲು ಪ್ರಾರಂಭಿಸಿದೆ. ಮಾನಸಿಕವಾಗಿ ಬಹಳ ಗೊಂದಲದ ಸ್ಥಿತಿ ತಲುಪಿದ್ದೆ'' ಎಂದಿದ್ದಾರೆ ಶಾಹಿದ್ ಕಪೂರ್. 'ಕಬೀರ್ ಸಿಂಗ್' ಸಿನಿಮಾ ತೆಲುಗಿನ 'ಅರ್ಜುನ್ ರೆಡ್ಡಿ' ಸಿನಿಮಾದ ರೀಮೇಕ್.

    'ಕಬೀರ್ ಸಿಂಗ್' ಸಿನಿಮಾ ಹಿಟ್ ಆದ ಬಳಿಕ ಗೊಂದಲ

    'ಕಬೀರ್ ಸಿಂಗ್' ಸಿನಿಮಾ ಹಿಟ್ ಆದ ಬಳಿಕ ಗೊಂದಲ

    'ಕಬೀರ್ ಸಿಂಗ್' ಅಂಥಹಾ ದೊಡ್ಡ ಹಿಟ್ ಸಿನಿಮಾದ ಬಳಿಕ ಯಾವ ಸಿನಿಮಾ ಮಾಡಬೇಕು ಎಂಬ ಗೊಂದಲ ಆರಂಭವಾಯಿತು. ಕೆಲವರು ಕಾಲೇಜು ಯುವಕನ ಪಾತ್ರ ಮಾಡು ಅಂದರು, ಕೆಲವರು ಮತ್ತೆ ರಗಡ್ ರೀತಿಯ ಪಾತ್ರ ಮಾಡು ಅಂದರು. ಆದರೆ ನಾನು ಪಾತ್ರವನ್ನು ಆಯ್ಕೆ ಮಾಡಿಕೊಳ್ಳುವ ಬದಲಿಗೆ ಕತೆಯನ್ನು ಆಯ್ಕೆ ಮಾಡಿಕೊಂಡೆ'' ಎಂದು 'ಜೆರ್ಸಿ' ಸಿನಿಮಾದಲ್ಲಿ ನಟಿಸಲು ನಿರ್ಧರಿಸಿದ ವಿಷಯವದ ಬಗ್ಗೆ ಶಾಹಿದ್ ಹೇಳಿದ್ದಾರೆ.

    ''ಸಿನಿಮಾ ನೋಡಿ ಬಕೆಟ್‌ಗಟ್ಟಲೆ ಕಣ್ಣೀರು ಹಾಕಿದೆ''

    ''ಸಿನಿಮಾ ನೋಡಿ ಬಕೆಟ್‌ಗಟ್ಟಲೆ ಕಣ್ಣೀರು ಹಾಕಿದೆ''

    ''ಕಬೀರ್ ಸಿಂಗ್' ಸಿನಿಮಾ ಬಿಡುಗಡೆ ಆದ ಎರಡು ವಾರಗಳ ಬಳಿಕ ನಾನು ತೆಲುಗಿನ 'ಜೆರ್ಸಿ' ಸಿನಿಮಾ ನೋಡಿದೆ. ನಾನಿ ಅದ್ಭುತವಾಗಿ ನಟಿಸಿದ್ದರು. ಸಿನಿಮಾ ನೋಡಿ ನಾನಂತೂ ಬಕೆಟ್‌ಗಟ್ಟಲೆ ಕಣ್ಣೀರು ಸುರಿಸಿದೆ. ಆ ಕತೆ ನನ್ನೊಳಗೆ ಭದ್ರವಾಗಿ ಬೇರೂರಿಬಿಟ್ಟಿತು. ನನ್ನ ಪತ್ನಿ ಮೀರಾ ಹಾಗೂ ನನ್ನ ಮ್ಯಾನೇಜರ್ ನನ್ನೊಟ್ಟಿಗೆ ಸಿನಿಮಾ ನೋಡಿದರು. ಅವರಂತೂ ನಾನು ಅಳುವುದನ್ನೇ ನೋಡುತ್ತಾ ಕುಳಿತಿದ್ದರು'' ಎಂದು ನೆನಪು ಮಾಡಿಕೊಂಡಿದ್ದಾರೆ ಶಾಹಿದ್.

    ಸಿನಿಮಾ ಬಿಡುಗಡೆ ಯಾವಾಗ?

    ಸಿನಿಮಾ ಬಿಡುಗಡೆ ಯಾವಾಗ?

    ತೆಲುಗಿನ 'ಜೆರ್ಸಿ' ಸಿನಿಮಾದಲ್ಲಿ ನಾಯಕನಾಗಿ ನಾನಿ, ನಾಯಕಿಯಾಗಿ ಕನ್ನಡದ ಶ್ರದ್ಧಾ ಕಪೂರ್ ನಟಿಸಿದ್ದರು. ಸಿನಿಮಾವನ್ನು ಗೌತಮ್ ತಿನ್ನಾನುರೈ ನಿರ್ದೇಶನ ಮಾಡಿದ್ದರು. ಸಿನಿಮಾ ಚಿತ್ರಮಂದಿರದಲ್ಲಿ ಹಿಟ್ ಆಗುವ ಜೊತೆಗೆ ರಾಷ್ಟ್ರಪ್ರಶಸ್ತಿಯನ್ನು ಸಹ ಬಾಚಿಕೊಂಡಿತು. ಇದೀಗ ಇದೇ ಸಿನಿಮಾವನ್ನು ಇದೇ ಹೆಸರಿನಲ್ಲಿ ಹಿಂದಿಯಲ್ಲಿ ಶಾಹಿದ್ ಕಪೂರ್ ಮಾಡುತ್ತಿದ್ದಾರೆ. ಹಿಂದಿ 'ಜೆರ್ಸಿ'ಯಲ್ಲಿ ಶಾಹಿದ್ ಜೊತೆಗೆ ನಾಯಕಿಯಾಗಿ ಮೃಣಾಲ್ ಠಾಕೂರ್ ನಟಿಸುತ್ತಿದ್ದಾರೆ. ಅಲ್ಲು ಅರವಿಂದ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಡಿಸೆಂಬರ್ 31ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.

    English summary
    Shahid Kapoor said he went like beggar to everybody after Kabir Singh movie's success. His new movie 'Jersy' releasing on December 03.
    Wednesday, November 24, 2021, 15:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X