»   » ಕ್ರಿಸ್ ಮಸ್ ಗೆ ಶಾರುಖ್-ಕಾಜೋಲ್ ಜೋಡಿಯ ಚಿತ್ರ

ಕ್ರಿಸ್ ಮಸ್ ಗೆ ಶಾರುಖ್-ಕಾಜೋಲ್ ಜೋಡಿಯ ಚಿತ್ರ

Posted By:
Subscribe to Filmibeat Kannada

ಬಾಲಿವುಡ್ ಬೆಳ್ಳಿಪರದೆಯ ಹಿಟ್ ಜೋಡಿ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ಇವರಿಬ್ಬರನ್ನೂ ಮತ್ತೆ ಒಂದಾಗಿಸುತ್ತಿರುವುದು ನಿರ್ದೇಶಕ ರೋಹಿತ್ ಶೆಟ್ಟಿ. ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ದಿಲ್ ವಾಲೆ' ಚಿತ್ರ ಬಾಲಿವುಡ್ ನಲ್ಲಿ ಎಲ್ಲರ ಕಣ್ಣರಳಿಸುವಂತೆ ಮಾಡಿದೆ.

ರೊಮ್ಯಾಂಟಿಕ್ ಚಿತ್ರಗಳಿಗೆ ಹೆಸರಾಗಿರುವ ಈ ಜೋಡಿಯನ್ನು ಮತ್ತೆ ತೆರೆಯ ಮೇಲೆ ಕಾಣಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಚಿತ್ರಕ್ಕೂ ಹೆಸರಿಡಲಾಗಿದ್ದು ಬರಲಿರುವ ಕ್ರಿಸ್ ಮಸ್ ಹಬ್ಬದ ಸಮಯಕ್ಕೆ ಚಿತ್ರ ಬೆಳ್ಳಿತೆರೆ ಅಲಂಕರಿಸಲಿದೆ. [ಕಾಜೋಲ್-ಶಾರುಖ್ ಜೋಡಿ ಮತ್ತೆ ಬೆಳ್ಳಿಪರದೆಗೆ?]

Shahrukh - Kajol movie Dilwale on Christmas

ಸದ್ಯಕ್ಕೆ ಈ ಚಿತ್ರದ ಶೂಟಿಂಗ್ ಗೋವಾದಲ್ಲಿ ನಡೆಯುತ್ತಿದೆ. ರೋಹಿತ್ ಶೆಟ್ಟಿ ಹಾಗೂ ಶಾರುಖ್ ಅವರ ಪತ್ನಿ ಗೌರಿ ಖಾನ್ ನಿರ್ಮಾಣದ ಚಿತ್ರ. ಪಾತ್ರವರ್ಗದಲ್ಲಿ ವರುಣ್ ಧವನ್, ಕೃತಿ ಸನೂನ್ ಮುಂತಾದವರು ಇದ್ದಾರೆ.

ರೋಹಿತ್ ಅವರ ಈ ಹಿಂದಿನ ಚಿತ್ರಗಳಾದ 'ಗೋಲ್ ಮಾಲ್' ಹಾಗು 'ಸಿಂಗಂ' ಚಿತ್ರಗಳಂತೆ 'ದಿಲ್ ವಾಲೆ' ಚಿತ್ರದ ಶೇಕಡ 50ರಷ್ಟು ಚಿತ್ರೀಕರಣ ಗೋವಾದಲ್ಲೇ ನಡೆಯಲಿದೆ. ತಿಂಗಳ ಹಿಂದೆಯೇ ಶೂಟಿಂಗ್ ಆರಂಭವಾಗಿದ್ದು ಇದೀಗ ಗೋವಾದಲ್ಲಿ ಶೂಟಿಂಗ್ ಭರದಿಂದ ಸಾಗುತ್ತಿದೆ.

ಸಾಕಷ್ಟು ವರ್ಷಗಳ ನಂತರ ಬರುತ್ತಿರುವ ಜೋಡಿ ಎಷ್ಟರ ಮಟ್ಟಿಗೆ ಪ್ರೇಕ್ಷಕರನ್ನು ರಂಜಿಸಲಿದೆ ಎಂಬುದನ್ನು ಕಾದುನೋಡೋಣ. ಇದೊಂದು ಕಾಮಿಡಿ ಡ್ರಾಮಾ ಆಗಿದ್ದು ಪ್ರೇಕ್ಷಕರು ಮತ್ತೆ ಈ ಜೋಡಿಯನ್ನು ಆಶೀರ್ವದಿಸುತ್ತಾ ಎಂಬುದಕ್ಕೆ ಕಾಲವೇ ಉತ್ತರ ಹೇಳಬೇಕು. (ಪಿಟಿಐ)

English summary
Bringing Bollywood's most successful on-screen pair, Shah Rukh Khan and Kajol in his upcoming film 'Dilwale' once again to the silver screen, director Rohit Shetty said the film will release on Christmas this year.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada