»   » ದಕ್ಷಿಣ ಆಫ್ರಿಕಾ T-20 ಕ್ರಿಕೆಟ್ ತಂಡವನ್ನ ಖರೀದಿಸಿದ ಶಾರೂಖ್ ಖಾನ್

ದಕ್ಷಿಣ ಆಫ್ರಿಕಾ T-20 ಕ್ರಿಕೆಟ್ ತಂಡವನ್ನ ಖರೀದಿಸಿದ ಶಾರೂಖ್ ಖಾನ್

Posted By:
Subscribe to Filmibeat Kannada

ಬಾಲಿವುಡ್ ಬಾದ್ ಶಾ, ಕಿಂಗ್ ಖಾನ್ ಅಂತೆಲ್ಲಾ ಕರೆಸಿಕೊಳ್ಳುವ ನಟ ಶಾರೂಖ್ ಖಾನ್ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವೊಂದನ್ನ ಖರೀದಿಸಿದ್ದಾರೆ. ಆಗಸ್ಟ್ ತಿಂಗಳಿಂದ ದಕ್ಷಿಣ ಆಫ್ರಿಕಾ ಟಿ-ಟ್ವೆಂಟಿ ಗ್ಲೋಬಲ್ ಕ್ರಿಕೆಟ್ ಟೂರ್ನಿ ನಡೆಯಲಿದ್ದು, ಈ ಟೂರ್ನಿಯಲ್ಲಿ ಆಡಲಿರುವ ಒಂದು ತಂಡಕ್ಕೆ ಶಾರೂಖ್ ಮಾಲೀಕರಾಗಿದ್ದಾರೆ.

ಶಾರೂಖ್ ಖಾನ್ ಇಂಡಿಯನ್ ಪ್ರಿಮೀಯರ್ ಲೀಗ್ (IPL) ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕರಾಗಿದ್ದಾರೆ. ಇದರ ಜೊತೆ ವೆಸ್ಟ್ ಇಂಡೀಸ್ ದೇಶದ 'Trinidad and Tobago' ತಂಡಕ್ಕೂ ಮಾಲೀಕರಾಗಿದ್ದಾರೆ. ಈಗ ದಕ್ಷಿಣ ಆಫ್ರಿಕಾದಲ್ಲಿ ಕೆಪ್ ಟೌನ್ ತಂಡವನ್ನ ಖರೀದಿಸುವ ಮೂಲಕ ಮೂರನೇ ತಂಡಕ್ಕೆ ಮಾಲೀಕರಾಗಿದ್ದಾರೆ.

Shahrukh Khan Buys A Team in South Africa T20 League

ಶಾರೂಖ್ ತಂಡಕ್ಕೆ ಸೌತ್ ಆಫ್ರಿಕಾದ ಆಟಗಾರ ಜೆಪಿ ಡುಮಿನಿ ನಾಯಕರಾಗಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಜೆಪಿ ಡುಮಿನಿ ''ಶಾರೂಖ್ ಖಾನ್ ಓರ್ವ ಗ್ಲೋಬಲ್ ಸ್ಟಾರ್ ನಟ. ಅವರ ತಂಡದಲ್ಲಿ ಆಡುವುದು ಖುಷಿಯಿದೆ'' ಎಂದಿದ್ದಾರೆ.

ಶಾರೂಖ್ ಖಾನ್ ಜೊತೆಯ ಐಪಿಎಲ್ ನ 'ಡೆಲ್ಲಿ ಡೇರ್ ಡೆವಿಲ್ಸ್' ತಂಡದ ಮಾಲೀಕ ಜಿಎಂಆರ್ ಸಂಸ್ಥೆ ಕೂಡ ದಕ್ಷಿಣ ಆಫ್ರಿಕಾ ಟೂರ್ನಿಯಲ್ಲಿ ಜೋಹನ್ಸ್ ಬರ್ಗ್ ತಂಡವನ್ನ ಖರೀದಿಸಿದ್ದು, ಈ ತಂಡಕ್ಕೆ 'ರಬಡಾ' ನಾಯಕರಾಗಿದ್ದಾರೆ.

ಆಗಸ್ಟ್ 19 ರಿಂದ ಈ ಟೂರ್ನಿ ಆರಂಭವಾಗಲಿದ್ದು, 8 ತಂಡಗಳು ಭಾಗವಹಿಸಲಿವೆ. 10 ದೇಶಗಳ ಸುಮಾರು 400 ಕ್ಕೂ ಹೆಚ್ಚು ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

English summary
Bollywood star Shahrukh Khan, who also owns Indian Premier League (IPL) franchise Kolkata Knight Riders, has been named owner of the Cape Town franchise of Cricket South Africa’s upcoming T20 league

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada