»   » ಭ್ರೂಣ ಪರೀಕ್ಷೆ ಸುದ್ದಿ ಸುಳ್ಳು ಎಂದ ಕಿಂಗ್ ಖಾನ್

ಭ್ರೂಣ ಪರೀಕ್ಷೆ ಸುದ್ದಿ ಸುಳ್ಳು ಎಂದ ಕಿಂಗ್ ಖಾನ್

Posted By:
Subscribe to Filmibeat Kannada

ಮುಂಬೈ, ಜು.10: ಬಾಡಿಗೆ ತಾಯ್ತನದ ಮೂಲಕ ಜನಿಸಿದ ತಮ್ಮ ಮೂರನೇ ಮಗುವಿನ ಕುರಿತು ಎದ್ದಿದ್ದ ಎಲ್ಲಾ ಗೊಂದಲಗಳಿಗೂ ಬಾಲಿವುಡ್ ನಟ ಶಾರುಖ್ ಖಾನ್ ತೆರೆ ಎಳೆದಿದ್ದಾರೆ. ತಮ್ಮ ಮಗುವಿನ ಭ್ರೂಣ ಪರೀಕ್ಷೆ ನಡೆಸಲಾಗಿತ್ತು ಎಂಬ ವರದಿಗಳು ಪೂರ್ಣ ಸುಳ್ಳು ಎಂದು ಹೇಳಿದ್ದಾರೆ. ಜೊತೆಗೆ ತಮ್ಮ ಮಗುವಿನ ಹೆಸರನ್ನು ಅಬ್ ರಾಂ(AbRam) ಎಂದು ಬಹಿರಂಗಪಡಿಸಿದ್ದಾರೆ.

'ನಮ್ಮ ಮೂರನೇ ಮಗು ಬಾಡಿಗೆ ತಾಯ್ತನದ ಮೂಲಕ ಜನಿಸಿದ್ದು ನಿಜ. ಆದರೆ ಮಗು ಅವಧಿಗೆ ಮುನ್ನವೇ ಜನಿಸಿದ್ದರಿಂದ(7ನೇ ತಿಂಗಳಿಗೆ ಜನನ) ಕೆಲ ಕಾಲ ವಿಶೇಷ ನಿಗಾ ವಹಿಸಬೇಕಾಗಿ ಬಂದಿತ್ತು. ಈ ಹಂತದಲ್ಲಿ ನಮ್ಮೊಂದಿಗೆ ಸಹಕರಿಸಿದ ಎಲ್ಲಾ ವೈದ್ಯರಿಗೂ ವಂದನೆಗಳು. ಜೊತೆಗೆ ನಮ್ಮ ಕಾರಣಕ್ಕಾಗಿ ವಿನಾಕಾರಣ ತೊಂದರೆ ಅನುಭವಿಸಿ ವೈದ್ಯರಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.

ಇದೀಗ ಮಗು ನಮ್ಮ ಮನೆ ಸೇರಿದೆ. ಮಗುವಿನ ಆರೈಕೆಯಲ್ಲಿ ನಾವೆಲ್ಲಾ ತೊಡಗಿಸಿಕೊಂಡಿದ್ದೇವೆ. ಜೊತೆಗೆ ಕುಟುಂಬದ ಸದಸ್ಯರಿಗೆ ಈ ಖಾಸಗಿ ಸಮಯದ ಸಂತಸ ಅನುಭವಿಸಲು ಅವಕಾಶ ಮಾಡಿಕೊಡಿ ಎಂದು ಎಲ್ಲರಲ್ಲೂ ಕೋರುತ್ತೇನೆ' ಎಂದು ಶಾರುಖ್ ಮನವಿ ಮಾಡಿಕೊಂಡಿದ್ದಾರೆ.

1991ರಲ್ಲಿ ಗೌರಿಯನ್ನು ಪ್ರೀತಿಸಿ ಮದುವೆಯಾಗಿರುವ ಶಾರುಖ್ ಗೆ ಈಗಾಗಲೇ ಆರ್ಯನ್ ಮತ್ತು ಸುಹಾನಾ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಶಾರುಖ್ ಖಾನ್ ಫ್ಯಾಮಿಲಿ ಚಿತ್ರಗಳು ಚಿತ್ರ ಸರಣಿಯಲ್ಲಿ ನೋಡಿ ಆನಂದಿಸಿ..

ಫ್ಯಾಮಿಲಿ ಕಥೆ

47 ವರ್ಷ ವಯಸ್ಸಿನ ಶಾರುಖ್ ಖಾನ್ 16 ವರ್ಷದ ಆರ್ಯನ್, 13 ವರ್ಷದ ಸುಹಾನಾ ಅವರ ಅಪ್ಪನಾಗಿದ್ದು, ಬಾಡಿಗೆ ತಾಯಿ ಮೂಲಕ ಪಡೆದ ಮಗುವಿನ ಬಗ್ಗೆ ಯಾವುದೆ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.

ಬಾಡಿಗೆ ತಾಯ್ತನದಿಂದ ಮಗು

ನಮ್ಮ ಕುಟುಂಬ ಮಗುವಿನ ಬಗ್ಗೆ ಚಿಂತೆಯಲ್ಲಿದ್ದಾಗ ಡಾಕ್ಟರ್ ಜತಿನ್ ಶಾ ಹಾಗೂ ಅವರ ತಂಡ ನೆರವು ನೀಡಿದರು. ಮಗುವಿನ ಮುಖ ನೋಡುವ ತನಕ ನಮ್ಮ ಹೃದಯ ಬಡಿತ ಸ್ಥಿಮಿತದಲ್ಲಿರಲಿಲ್ಲ ಎಂದು ಶಾರುಖ್ ಹೇಳಿದ್ದಾರೆ.

ಮಕ್ಕಳೊಂದಿಗೆ ಶಾರುಖ್

ಮಕ್ಕಳನ್ನು ತುಂಬಾ ಪ್ರೀತಿಸುವ ಶಾರುಖ್ ಸದಾ ಅವರ ಜೊತೆ ಇರಲು ಬಯಸುತ್ತಾರೆ

ಪತಿಗೆ ತಕ್ಕ ಪತ್ನಿ

ಮೂರನೇ ಮಗು ಬಗ್ಗೆ ಶಾರುಖ್ ಪ್ರಸ್ತಾಪಿಸಿದಾಗ ಬೆಂಬಲಿಸಿದ್ದು ಪತ್ನಿ ಗೌರಿ

ಸುಖಿ ಕುಟುಂಬ

ಪ್ರಿಯಾಂಕಾ ಛೋಪ್ರಾ ಹಾಗೂ ಇನ್ನಿತರ ನಟಿಯರ ಜೊತೆ ಶಾರುಖ್ ಹೆಸರು ಸೇರಿಸಿ ಮಾಧ್ಯಮಗಳಲ್ಲಿ ನಿಂತ ಸುದ್ದಿ ಬಂದರೂ ವಿಚಲಿತರಾಗದೆ ಇದ್ದ ಗೌರಿ ಈಗ ಬಾಲಿವುಡ್ ನ ಟಾಪ್ ನಿರ್ಮಾಪಕಿ ಕೂಡಾ. ರೆಡ್ ಚಿಲ್ಲೀಸ್ ಮೂಲಕ ಚೆನ್ನೈ ಎಕ್ಸ್ ಪ್ರೆಸ್ ರಿಲೀಸ್ ಗೆ ಕಾದಿದ್ದಾರೆ.

English summary
Superstar Shahrukh Khan, who made bold headlines due to his surrogate baby, has finally confirmed the birth of a baby boy at his home. The actor also told the media that he has named his son AbRam. However, SRK denied that he took any sex determination test.
Please Wait while comments are loading...