»   » ಶಾರೂಖ್ ಪುತ್ರಿ ಧರಿಸಿದ್ದ ಬಟ್ಟೆಯ ಬೆಲೆಯಲ್ಲಿ ಯೂರೋಪ್ ಗೆ ಹೋಗಬಹುದಿತ್ತಂತೆ.!

ಶಾರೂಖ್ ಪುತ್ರಿ ಧರಿಸಿದ್ದ ಬಟ್ಟೆಯ ಬೆಲೆಯಲ್ಲಿ ಯೂರೋಪ್ ಗೆ ಹೋಗಬಹುದಿತ್ತಂತೆ.!

Posted By:
Subscribe to Filmibeat Kannada

ಇತ್ತೀಚೆಗೆ ನಡೆದ ರೆಸ್ಟೋರೆಂಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಪುತ್ರಿ ಸುಹಾನ ಖಾನ್ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡು ಎಲ್ಲರಿಗೂ ಅಚ್ಚರಿ ಉಂಟು ಮಾಡಿದ್ದರು.

ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಟಾಪ್ ನಟಿಯರಾದ ಆಲಿಯಾ ಭಟ್, ಜಾಕ್ವೆಲಿನ್, ಸೋನಮ್ ಕಪೂರ್, ಮಲೈಕಾ ಆರೋರಾ ಹಾಗೂ ಕೃತಿ ಸನನ್ ಭಾಗವಹಿಸಿದ್ದರು. ಆದ್ರೆ, ಈ ಎಲ್ಲಾ ತಾರೆಯರನ್ನ ಹಿಂದಿಕ್ಕಿ ಶಾರೂಖ್ ಪುತ್ರಿ ಎಲ್ಲರ ಕಣ್ಣು ಕುಕ್ಕಿಸಿದ್ದಾರೆ. ಇದಕ್ಕೆ ಕಾರಣ ಸುಹಾನ ಖಾನ್ ಧರಿಸಿದ್ದ ಉಡುಗೆ.

'ಟ್ಯೂಬ್ ಲೈಟ್' ಚಿತ್ರದಲ್ಲಿ ಶಾರೂಖ್ ಖಾನ್ ಗೆಟಪ್ ಲೀಕ್

Shahrukh Khan Daughter Suhana’s Bold Avatara

ಸುಹಾನ ತೊಟ್ಟಿದ್ದ ಕೇಸರಿ ಬಣ್ಣದ ಉಡುಗೆಯಲ್ಲಿ ಸಖತ್ ಹಾಟ್ ಆಗಿ ಕಂಗೊಳಿಸಿದ್ದಾರೆ. ಇದನ್ನ ಕಂಡ ಕ್ಯಾಮೆರಾಗಳು ಪೂರ್ತಿ ಶಾರೂಖ್ ಖಾನ್ ಪುತ್ರಿ ಮೇಲೆ ಫೋಕಸ್ ಮಾಡಿವೆ. ಇನ್ನು ಈ ಉಡುಗೆಯ ಬೆಲೆ ಕೇಳಿದ್ರೆ ಎಲ್ಲರೂ ಬೆರಗಾಗುವುದಂತೂ ಖಂಡಿತಾ. ಸುಹಾನ ತೊಟ್ಟಿದ್ದ ಈ ಡ್ರೆಸ್ ನ ಬೆಲೆ ಬರೋಬ್ಬರಿ 60 ಸಾವಿರವಂತೆ. ಇದನ್ನ ಕೇಳಿದ ಬಾಲಿವುಡ್ ಮಂದಿ, ಶಾರೂಖ್ ಪುತ್ರಿ ಧರಿಸಿದ್ದ ಉಡುಗೆಯ ದುಡ್ಡಿನಲ್ಲಿ ಯೋರೋಪ್ ಗೆ ಪ್ರಯಾಣ ಮಾಡಬಹುದಿತ್ತು ಅಂತ ಪಿಸುಗುಟ್ಟುತ್ತಿದ್ದಾರಂತೆ.

Shahrukh Khan Daughter Suhana’s Bold Avatara

ಇನ್ನು ಮತ್ತೊಂದೆಡೆ ನಿನ್ನೆ (ಜೂನ್ 23) ಸಲ್ಮಾನ್ ಖಾನ್ ಅಭಿನಯದ 'ಟ್ಯೂಬ್ ಲೈಬ್' ಚಿತ್ರದ ವಿಶೇಷ ಪ್ರದರ್ಶನದಲ್ಲೂ ಶಾರೂಖ್ ಖಾನ್ ಮತ್ತು ಪುತ್ರಿ ಸುಹಾನ ಖಾನ್ ಭಾಗವಹಿಸಿದ್ದರು. ಇಬ್ಬರು ಕಪ್ಪು ಉಡುಗೆಯಲ್ಲಿ ಮಿಂಚಿದ್ದು ವಿಶೇಷವಾಗಿತ್ತು.

ಸಲ್ಮಾನ್ 'ಟ್ಯೂಬ್ ಲೈಟ್' ಪ್ರಭಾವ ಹೆಚ್ಚು, ಪ್ರಕಾಶ ಕಡಿಮೆ

English summary
Shah Rukh Khan and daughter Suhana shine in black at Tubelight special screening, see pics

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada