For Quick Alerts
  ALLOW NOTIFICATIONS  
  For Daily Alerts

  ಸಲ್ಲು ಸ್ನೇಹಕ್ಕಾಗಿ ಶಾರೂಖ್ ಕೊಟ್ಟ ಗಿಫ್ಟ್ ನೋಡಿ ಬೆರಗಾದ ಬಾಲಿವುಡ್

  By Bharath Kumar
  |

  ಶಾರೂಖ್ ಖಾನ್ ಮತ್ತು ಸಲ್ಮಾನ್ ಖಾನ್ ನಡುವಿನ ಬಾಂಧವ್ಯ ಮತ್ತಷ್ಟು ಹತ್ತಿರವಾಗಿದೆ. ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ಅಭಿನಯದ 'ಟ್ಯೂಬ್ ಲೈಟ್' ಚಿತ್ರದಲ್ಲಿ ಶಾರೂಖ್ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಶಾರೂಖ್ ಖಾನ್ ಚಿತ್ರದಲ್ಲಿ ಸಲ್ಮಾನ್ ಕೂಡ ವಿಶೇಷ ಪಾತ್ರವನ್ನ ನಿರ್ವಹಿಸುವುದರ ಮೂಲಕ ಸ್ನೇಹ ಗಟ್ಟಿಯಾಗಿಸಿಕೊಂಡಿದ್ದಾರೆ.

  ಶಾರೂಖ್ ಚಿತ್ರದಲ್ಲಿ ಅಭಿನಯಿಸಲು ಬಂದ ಸಲ್ಮಾನ್ ಗೆ ಕಿಂಗ್ ಖಾನ್ ದುಬಾರಿ ಉಡುಗೊರೆ ನೀಡಿ ಇಡೀ ಬಾಲಿವುಡ್ ನ್ನೇ ಬೆರಗಾಗಿಸಿದ್ದಾರೆ. ಹೌದು, ಇವರಿಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ ಎನ್ನುತ್ತಿದ್ದ ಮಂದಿ, ಇದನ್ನ ನೋಡಿ ಹೊಟ್ಟೆ ಉರಿಸಿಕೊಳ್ಳುತ್ತಿದ್ದಾರೆ.

  ಅಷ್ಟಕ್ಕೂ ಸಲ್ಮಾನ್ ಖಾನ್ ಗೆ ಶಾರೂಖ್ ಕೊಟ್ಟ ಆ ದುಬಾರಿ ಗಿಫ್ಟ್ ಏನು ಎಂಬುದನ್ನ ಮುಂದೆ ನೋಡಿ.....

  ಶಾರೂಖ್ ಸೆಟ್ ಗೆ ಬಂದ ಸಲ್ಮಾನ್

  ಶಾರೂಖ್ ಸೆಟ್ ಗೆ ಬಂದ ಸಲ್ಮಾನ್

  ಆನಂದ್ ಎಲ್ ರೈ ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರದ ಶೂಟಿಂಗ್ ನಲ್ಲಿ ಶಾರೂಖ್ ಖಾನ್ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದ ಹಾಡೊಂದರಲ್ಲಿ ಸಲ್ಮಾನ್ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ, ಶಾರೂಖ್ ಸೆಟ್ ಗೆ ಸಲ್ಮಾನ್ ಖಾನ್ ಭೇಟಿ ನೀಡಿದ್ದರು.

  ಸಲ್ಮಾನ್ ಮತ್ತು ಶಾರೂಖ್ ಫ್ಯಾನ್ಸ್ ಗೆ ಇದು ಖುಷಿಯ ಜೊತೆ ಅಚ್ಚರಿ.!

  ಶಾರೂಖ್ ಕೊಟ್ಟ ಸರ್ಪ್ರೈಸ್ ಗಿಫ್ಟ್

  ಶಾರೂಖ್ ಕೊಟ್ಟ ಸರ್ಪ್ರೈಸ್ ಗಿಫ್ಟ್

  ಚಿತ್ರೀಕರಣಕ್ಕಾಗಿ ಶಾರೂಖ್ ಸೆಟ್ ಗೆ ಭೇಟಿ ನೀಡಿದ ಸಲ್ಮಾನ್ ಖಾನ್ ಗೆ ಬಾಲಿವುಡ್ ಬಾದ್ ಶಾ ದುಬಾರಿ ಕಾರನ್ನ ಗಿಫ್ಟ್ ಆಗಿ ಕೊಟ್ಟಿದ್ದಾರೆ.

  ಬೆಲ್ಜಿಯಂನಲ್ಲಿ 'ಟ್ಯೂಬ್ ಲೈಟ್' ಚಿತ್ರದ ನಾಯಕ ಶಾರುಖ್ ಖಾನ್ ಅಂತೆ!

  ಹೊಚ್ಚ ಹೊಸ ಕಾರ್

  ಹೊಚ್ಚ ಹೊಸ ಕಾರ್

  ಬಾಲಿವುಡ್ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಶಾರೂಖ್ ಗಿಫ್ಟ್ ಕೊಟ್ಟಿರುವ ಕಾರು ಹೊಸದಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆಯಂತೆ. ಇನ್ನು ಈ ಕಾರನ್ನ ಯಾರು ಕೂಡ ಖರೀದಿಸಿಲ್ಲವಂತೆ.

  ಆಶ್ಚರ್ಯಗೊಂಡ ಸಲ್ಮಾನ್

  ಆಶ್ಚರ್ಯಗೊಂಡ ಸಲ್ಮಾನ್

  ಶಾರೂಖ್ ಖಾನ್ ಕೊಟ್ಟ ಗಿಫ್ಡ್ ಕಂಡು ನಟ ಸಲ್ಮಾನ್ ಖಾನ್ ಆಶ್ಚರ್ಯಗೊಂಡಿದ್ದಾರಂತೆ. ಶಾರೂಖ್ ಉಡುಗೊರೆ ನೀಡುತ್ತಾರೆ ಎಂದು ಊಹೆ ಕೂಡ ಮಾಡಿರಲಿಲ್ಲ.

  'ಟ್ಯೂಬ್ ಲೈಟ್' ನಂತರ ಮತ್ತೆ ಒಂದೇ ಚಿತ್ರದಲ್ಲಿ ಶಾರುಖ್-ಸಲ್ಮಾನ್ ಅಬ್ಬರ

  ಪ್ರೀತಿಯ ಉಡುಗೊರೆ

  ಪ್ರೀತಿಯ ಉಡುಗೊರೆ

  ತಮ್ಮ ಚಿತ್ರಗಳ ಶೂಟಿಂಗ್ ನಲ್ಲಿ ಬ್ಯುಸಿ ಇದ್ದರು, ಶಾರೂಖ್ ಚಿತ್ರಕ್ಕಾಗಿ ಸಲ್ಲು ಬಿಡುವು ಮಾಡಿಕೊಂಡು ಆಗಮಿಸಿದ್ದಕ್ಕೆ ಶಾರೂಖ್ ಸಂತಸಗೊಂಡಿದ್ದಾರೆ. ಹೀಗಾಗಿ, ತಮ್ಮ ಧನ್ಯವಾದವನ್ನ ಈ ರೀತಿಯಾಗಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹಾಡೊಂದರಲ್ಲಿ ಸಲ್ಲು ಮತ್ತು ಶಾರೂಖ್ ಒಟ್ಟಿಗೆ ಹೆಜ್ಜೆ ಹಾಕುತ್ತಿದ್ದು, 'ರೆಮೋ ಡಿಸೋಜಾ' ಈ ಹಾಡನ್ನ ಕೊರಿಯೋಗ್ರಫಿ ಮಾಡುತ್ತಿದ್ದಾರೆ.

  English summary
  According to Bollywood, When Salman Khan came to shoot for the song, Shahrukh surprised him by gifting him a brand new, luxurious car.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X