For Quick Alerts
  ALLOW NOTIFICATIONS  
  For Daily Alerts

  ನಟ ಶಾರುಖ್ ಖಾನ್ ನಾನಾವತಿ ಆಸ್ಪತ್ರೆಗೆ ದಾಖಲು

  By Rajendra
  |

  ಬಾಲಿವುಡ್ ನಟ ಕಿಂಗ್ ಖಾನ್ ಶಾರುಖ್ ಖಾನ್ ಚಿತ್ರೀಕರಣದಲ್ಲಿ ನಡೆದ ಅವಘಡದಲ್ಲಿ ಗಾಯಗೊಂಡಿದ್ದಾರೆ. ಫರಹ್ ಖಾನ್ ಅವರ 'ಹ್ಯಾಪಿ ನ್ಯೂ ಇಯರ್' ಹಾಡಿನ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ.

  ಮುಂಬೈನ ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ಹಾಡನ್ನು ಚಿತ್ರೀಕರಿಸಲಾಗುತ್ತಿತ್ತು ಈ ಸಂದರ್ಭದಲ್ಲಿ ಅವರು ಗಾಯಗೊಂಡಿದ್ದಾರೆ. ಅವರ ಕೈ ಮತ್ತು ಮುಖಕ್ಕೆ ಗಾಯಗಳಾಗಿದ್ದು ಕೂಡಲೆ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. [ಎಲ್ಲರಿಗೂ ಸಕತ್ ಶಾಕ್ ನೀಡಿದ ಸಲ್ಮಾನ್]

  ಹಾಡಿನ ಚಿತ್ರೀಕರಣ ವೇಳೆ ಪಂಚತಾರಾ ಹೋಟೆಲ್ ನ ಬಾಗಿಲಿಗೆ ಡಿಕ್ಕಿ ಹೊಡೆದ ಪರಿಣಾಮ ಶಾರುಖ್ ಗಾಯಗೊಂಡಿದ್ದಾರೆ. " ಸೆಟ್ಸ್ ನಲ್ಲಿ ಮಿಸ್ಟರ್ ಖಾನ್ ಅವರಿಗೆ ಲಘು ಅಪಘಾತವಾಗಿದೆ. ಅವರಿಗೆ ಅಲ್ಪ ಪ್ರಮಾಣದಲ್ಲಿ ಗಾಯಗಳಾಗಿವೆ. ಕೂಡಲೆ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಈಗವರು ಆರಾಮವಾಗಿ ಇದ್ದಾರೆ" ಎಂದು ಶಾರುಖ್ ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

  ಸಾಮಾನ್ಯವಾಗಿ ಸಿನಿಮಾ ತಾರೆಗಳು ಗಾಯಗೊಂಡರೆ ಮೊದಲು ಆತಂಕಪಡುವ ವ್ಯಕ್ತಿ ನಿರ್ಮಾಪಕ. ಆ ಬಳಿಕ ಮನೆಯವರು, ಅಭಿಮಾನಿಗಳು ಆತಂಕಕ್ಕೊಳಗಾಗುತ್ತಾರೆ. ಇರಲಿ ಬಿಡಿ ಚೆನ್ನೈ ಎಕ್ಸ್ ಪ್ರೆಸ್ ಚಿತ್ರದ ಬಳಿಕ ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಮತ್ತೆ ಜೊತೆಯಾಗಿ ಅಭಿನಯಿಸುತ್ತಿರುವ ಚಿತ್ರವಿದು.

  ಕೋರಿಯೋಗ್ರಾಫರ್ ಕಮ್ ಡೈರೆಕ್ಟರ್ ಫರ್ಹಾ ಖಾನ್ ಆಕ್ಷನ್ ಕಟ್ ಹೇಳುತ್ತಿರುವ ಹ್ಯಾಪಿ ನ್ಯೂ ಇಯರ್' ಚಿತ್ರದಲ್ಲಿ ಅಭಿಷೇಕ್ ಮತ್ತು ಶಾರೂಖ್ ಒಟ್ಟಿಗೆ ಬಣ್ಣ ಹಚ್ಚಿದ್ದಾರೆ. 7 ವರ್ಷಗಳ ಬಳಿಕ ಶಾರೂಖ್ ಜೊತೆ ನಟಿಸುವ ಅವಕಾಶ ಸಿಕ್ಕಿರುವುದು ತೀವ್ರ ಸಂತಸ ಉಂಟುಮಾಡಿದೆ ಎಂದು ಅಭಿಷೇಕ್ ಹೇಳಿಕೊಂಡಿದ್ದರು. ಸಾಮಾಜಿಕ ಜಾಲ ತಾಣಗಳಲ್ಲಿ ಈಗಾಗಲೇ ಚಿತ್ರದ ಬಗ್ಗೆ ಸಾಕಷ್ಟು ಹೈಪ್ ಸೃಷ್ಟಿಸಲಾಗಿದ್ದು, ಅದಕ್ಕೆ ಪೂರಕವಾಗಿ ಜನವರಿ 1 ರ ರಾತ್ರಿ ಹ್ಯಾಪಿ ನ್ಯೂ ಇಯರ್ ಚಿತ್ರದ ಫಸ್ಟ್ ಲುಕ್ ಸಹ ಬಿಡುಗಡೆಗೊಂಡಿದೆ. (ಏಜೆನ್ಸೀಸ್)

  English summary
  Actor Shah Rukh Khan was injured during a mishap on the sets of Farah Khan’s Happy New Year. The incident took place on Thursday afternoon when the actor was shooting for a song at a Mumbai five-star hotel. SRK, who sustained injuries on his hand and face, was rushed to Nanavati hospital.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X