For Quick Alerts
  ALLOW NOTIFICATIONS  
  For Daily Alerts

  ಸೌತ್ ನಿರ್ದೇಶಕ ಚಿತ್ರದಲ್ಲಿ ಶಾರೂಖ್ ಖಾನ್: ಡಬಲ್ ರೋಲ್‌ ಬಾದ್ ಶಾ!

  |

  ಸುಮಾರು ಎರಡು ವರ್ಷದ ನಂತರ ಬಾಲಿವುಡ್ ಬಾದ್‌ಶಾ ಶಾರೂಖ್ ಖಾನ್ ಬೆಳ್ಳಿತೆರೆಗೆ ಕಂಬ್ಯಾಕ್ ಮಾಡಲು ತಯಾರಿ ನಡೆಸಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟಿರುವ ಕಿಂಗ್ ಖಾನ್ ಈ ಸಲ ದಕ್ಷಿಣದ ಸ್ಟಾರ್ ನಿರ್ದೇಶಕ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ.

  2018ರಲ್ಲಿ ತೆರೆಕಂಡ 'ಜೀರೋ' ಸಿನಿಮಾ ಸೋಲು ಕಂಡಿತ್ತು. ನಿರೀಕ್ಷೆ ಮಾಡದ ರೀತಿ ಮಕಾಡೆ ಮಲಗಿತು. ನೂರು ಕೋಟಿ ಗಳಿಸಲು ಸಹ ಈ ಚಿತ್ರ ಪರದಾಡಿತ್ತು. ಅದಾದ ಬಳಿಕ ಶಾರುಖ್ ಮುಂದಿನ ಸಿನಿಮಾ ಯಾವುದು ಎಂಬ ಚರ್ಚೆ ಬಹಳ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಬಹಳ ಯೋಚನೆ, ಚರ್ಚೆ ಮಾಡಿದ ನಂತರ ನಿರ್ದೇಶಕ ಅಟ್ಲಿ ಚಿತ್ರ ಮಾಡಲು ತೀರ್ಮಾನಿಸಿದ್ದಾರಂತೆ. ಈವರೆಗೂ ಈ ಪ್ರಾಜೆಕ್ಟ್ ಅಧಿಕೃತವಾಗಿಲ್ಲ. ಆದರೆ, ಎಲ್ಲ ಸಿದ್ಧತೆ ನಡೆದಿದೆಯಂತೆ. ಮುಂದೆ ಓದಿ....

  ಶಾರೂಖ್ ಖಾನ್ ಸಿನಿಮಾ ಹೆಸರು ಉಲ್ಲೇಖಿಸಿದ ಡೊನಾಲ್ಡ್ ಟ್ರಂಪ್

  ಡಬಲ್ ರೋಲ್‌ನಲ್ಲಿ ಶಾರೂಖ್!

  ಡಬಲ್ ರೋಲ್‌ನಲ್ಲಿ ಶಾರೂಖ್!

  ಅಟ್ಲಿ ನಿರ್ದೇಶನ ಮಾಡಲಿರುವ ಈ ಚಿತ್ರದಲ್ಲಿ ಶಾರೂಖ್ ಖಾನ್ ಡಬಲ್ ರೋಲ್ ಮಾಡಲಿದ್ದಾರೆ ಎನ್ನಲಾಗಿದೆ. ತಂದೆ ಹಾಗೂ ಮಗನ ಪಾತ್ರದಲ್ಲಿ ಶಾರೂಖ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಬಿಟೌನ್‌ನಲ್ಲಿ ಸದ್ದು ಮಾಡುತ್ತಿದೆ. ಈ ಹಿಂದೆ ಡ್ಯೂಪ್ಲಿಕೇಟ್ ಹಾಗೂ ಡಾನ್ ಚಿತ್ರಗಳಲ್ಲಿ ಶಾರೂಖ್ ದ್ವಿಪಾತ್ರ ನಿರ್ವಹಿಸಿದ್ದರು.

  ಶಕ್ತಿ ಸಿನಿಮಾ ಆಧಾರಿತ ಕಥೆ

  ಶಕ್ತಿ ಸಿನಿಮಾ ಆಧಾರಿತ ಕಥೆ

  ಶಾರೂಖ್ ಖಾನ್ ಈ ಚಿತ್ರದಲ್ಲಿ ತಂದೆ ಹಾಗೂ ಮಗನ ಪಾತ್ರ ಮಾಡಲಿದ್ದು, ತಂದೆ ಪಾತ್ರಧಾರಿ ರಾ ಏಜೆಂಟ್ ಆಗಿದ್ದರೆ, ಮಗ ಗ್ಯಾಂಗ್ ಸ್ಟರ್ ಆಗಿರುತ್ತಾನೆ ಎನ್ನಲಾಗಿದೆ. 1982ರಲ್ಲಿ ತೆರೆಕಂಡಿದ್ದ ಶಕ್ತಿ ಚಿತ್ರವನ್ನು ಆಧರಿಸಿ ಸ್ಕ್ರಿಪ್ಟ್ ಮಾಡಲಾಗಿದೆ ಎಂಬ ಸುದ್ದಿಯೂ ಇದೆ. 2021ರ ಮಧ್ಯದಲ್ಲಿ ಈ ಸಿನಿಮಾ ಸೆಟ್ಟೇರಬಹುದು.

  1995ರಲ್ಲಿ 'DDLJ' ಗಳಿಸಿದ್ದೆಷ್ಟು, ಇಂದಿಗೆ ಅದರ ಮೌಲ್ಯವೆಷ್ಟು? ಕಲೆಕ್ಷನ್ ಕುರಿತು ಬಿಚ್ಚಿಟ್ಟ ನಿರ್ಮಾಪಕ

  'ಪಠಾಣ್' ಚಿತ್ರದಲ್ಲಿ ಕಿಂಗ್ ಖಾನ್

  'ಪಠಾಣ್' ಚಿತ್ರದಲ್ಲಿ ಕಿಂಗ್ ಖಾನ್

  ಅಟ್ಲಿ ಚಿತ್ರಕ್ಕೂ ಮುಂಚೆ ಪಠಾಣ್ ಎಂಬ ಚಿತ್ರವನ್ನು ಶಾರೂಖ್ ಖಾನ್ ಕೈಗೆತ್ತಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸಿದ್ಧಾರ್ಥ್ ಆನಂದ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಚಿತ್ರೀಕರಣ ಸಹ ಆರಂಭಿಸಿದ್ದಾರಂತೆ. ಇದಾದ ಬಳಿಕ ರಾಜ್ ಕುಮಾರ್ ಹಿರಾನಿ ಜೊತೆಯೂ ಸಿನಿಮಾ ಮಾಡುವುದಾಗಿ ಶಾರೂಖ್ ಹೇಳಿದ್ದಾರಂತೆ.

  Bheemasena Nalamaharaja : ಅಚ್ಚುತ್ ಸರ್ ಒಂದು ದೊಡ್ಡ ಲೈಬ್ರರಿ ಇದ್ದ ಹಾಗೆ | Aarohi | Rakshith Shetty
  ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ

  ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ

  ಸೌತ್ ಇಂಡಸ್ಟ್ರಿಯ ಯಶಸ್ವಿ ನಿರ್ದೇಶಕರಲ್ಲಿ ಅಟ್ಲಿ ಸಹ ಒಬ್ಬರು. ರಾಜರಾಣಿ, ಥೇರಿ, ಮೆರ್ಸಲ್, ಬಿಗಿಲ್ ಅಂತಹ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಮೋಡಿದ ಮಾಡಿದ ಅಟ್ಲಿ ಈಗ ಬಾಲಿವುಡ್‌ನಲ್ಲಿ ರೂಲ್ ಮಾಡಲು ಸಜ್ಜಾಗಿದ್ದಾರೆ.

  English summary
  Bollywood superstar Shahrukh Khan next movie With Atlee and he Playing Double Role in this project.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X