»   » ಹೀರೋಯಿಸಂಗಿಂತ ಸೋದರ ಪ್ರೇಮವೇ ದೊಡ್ಡದು : ಶಾರುಖ್

ಹೀರೋಯಿಸಂಗಿಂತ ಸೋದರ ಪ್ರೇಮವೇ ದೊಡ್ಡದು : ಶಾರುಖ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸಲ್ಮಾನ್ ಖಾನ್ ಅಭಿನಯದ 'ಭಜರಂಗಿ ಭಾಯ್ ಜಾನ್' ಚಿತ್ರದ ಪ್ರಚಾರ ಕಾರ್ಯಕ್ಕೆ ಕಿಂಗ್ ಖಾನ್ ಶಾರುಖ್ ನಿಂತಿದ್ದಾರೆ. ತಂಗಿ ಅರ್ಪಿತಾಳಿಗಾಗಿ ವೈಮನಸ್ಯ ಮರೆತು ಈ ಜೋಡಿ ಒಂದಾಗಿದ್ದು ಮರೆಯುವಂತಿಲ್ಲ.

ಭಜರಂಗಿ ಭಾಯಿಜಾನ್ ಚಿತ್ರದ ಟೀಸರ್ ಬುಧವಾರ ಅಧಿಕೃತವಾಗಿ ಹೊರ ಬೀಳಬೇಕಿದೆ. ಇದಕ್ಕೂ ಮುನ್ನ ಚಿತ್ರದಲ್ಲಿನ ಸಲ್ಮಾನ್ ಖಾನ್ ಫಸ್ಟ್ ಲುಕ್ ಪೋಸ್ಟರ್ ಅನ್ನು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಮೂಲಕ ಶಾರುಖ್ ಖಾನ್ ಹೊರ ಹಾಕಿದ್ದಾರೆ.

Shahrukh Khan Shares Salman Khan's Bajrangi Bhaijaan Look

‘ಸಹೋದರತ್ವ ಅನ್ನುವುದು ಹೀರೋ ಎನಿಸಿಕೊಳ್ಳುವುದಕ್ಕಿಂತ ದೊಡ್ಡ ವಿಚಾರ. ಇದೇ ಈದ್ ಹಬ್ಬಕ್ಕೆ ಭಾಯಿಜಾನ್ ಬರುತ್ತಿದ್ದಾನೆ! ಫಸ್ಟ್ ಲುಕ್ ನೋಡಿ ಹೇಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಕಳೆದ ವರ್ಷ ಇಫ್ತಾರ್ ಕೂಟದಲ್ಲಿ ಶಾರುಖ್ ಹಾಗೂ ಸಲ್ಮಾನ್ ಪರಸ್ಪರ ಅಪ್ಪಿಕೊಳ್ಳುವ ಅಚ್ಚರಿ ಮೂಡಿಸಿದ್ದರು. ನಂತರ ಸಲ್ಮಾನ್ ಖಾನ್ ಅವರ ತಂಗಿ ಅರ್ಪಿತಾ ಮದುವೆಗೆ ಶಾರುಖ್ ಹಾಜರಾಗಿದ್ದರು. ನಂತರ ಸಲ್ಮಾನ್ ಖಾನ್ ಅವರು ಹಿಟ್ ಅಂಡ್ ರನ್ ಕೇಸಿನಲ್ಲಿ ಕೋರ್ಟಿಗೆ ಅಲೆಯುವುದಕ್ಕೂ ಮುನ್ನ ಶಾರುಖ್ ಭೇಟಿಯಾಗಿದ್ದರು. ಈಗ ಭಜರಂಗಿ ಚಿತ್ರದ ಪ್ರಚಾರ ನಡೆಸುತ್ತಿದ್ದಾರೆ.

English summary
Shahrukh Khan and Salman Khan exhibited some brotherly bonding during the wedding of Arpita Khan and SRK has done something similar yet again.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada