»   » ಕಿಂಗ್ ಖಾನ್ ಶಾರೂಖ್ ಮಾಡಿದ ಹೊಸ ಕಿರಿಕ್

ಕಿಂಗ್ ಖಾನ್ ಶಾರೂಖ್ ಮಾಡಿದ ಹೊಸ ಕಿರಿಕ್

Posted By:
Subscribe to Filmibeat Kannada

ಕಿರಿಕ್ ಗೂ, ಶಾರೂಖ್ ಗೂ ಅದೇನೋ ಒಂಥರಾ ನಂಟು. ''ನಾನೇ ಬಾಜೀಗರು'', ''ನನ್ನ ಬಿಟ್ರೆ ಬೇರೆ ಬಾದ್ ಷಾ ಇಲ್ಲ'', ಅಂತ ರೀಲ್ ನಲ್ಲಿ ಖತರ್ನಾಕ್ ಡಾನ್ ಆಗಿ ಮೆರೆಯೋ ಶಾರೂಖ್, ರಿಯಲ್ ಲೈಫಲ್ಲಿ ಮಾಡಿಕೊಂಡ ಎಡವಟ್ಟುಗಳು ನಿಮಗೆ ಗೊತ್ತಿರಲೇಬೇಕು. ಇಲ್ಲಾಂದ್ರೆ ಒಮ್ಮೆ 2012ರ ಐಪಿಎಲ್ ಸೀಸನ್ ಮತ್ತು ವಾಂಖೇಡೆ ಮೈದಾನದಲ್ಲಾದ ಘಟನೆಯನ್ನು ನೆನಪಿಸಿಕೊಳ್ಳಿ.

ಕಿರಿಕ್ ಖಾನ್ ಬಗ್ಗೆ ನಾವೀಗ ಇಷ್ಟೆಲ್ಲಾ ಹೇಳುತ್ತಿರುವುದಕ್ಕೆ ಕಾರಣ ಶಾರೂಖ್ ಮಾಡಿಕೊಂಡಿರುವ ಹೊಸ ರಾದ್ಧಾಂತ. ಇಂದು ಮುಂಜಾನೆ, ಸೂರ್ಯ ಇನ್ನೂ ನೆತ್ತಿಮೇಲೆ ಬರುವುದಕ್ಕೂ ಮುನ್ನವೇ ಶಾರೂಖ್ ಪೊಲೀಸರಿಗೆ ಮತ್ತು ಸೆಕ್ಯೂರಿಟಿ ಗಾರ್ಡ್ ಗಳಿಗೆ ಧಮ್ಕಿ ಹಾಕಿದ್ದಾರೆ.

shahrukh khan3

ಮಾತಿಗೆ ಮಾತು ಬೆಳೆದು ಶಾರೂಖ್ ಕಾಲರ್ ಪಟ್ಟಿಗೆ ಮುಂಬೈ ಪೊಲೀಸರು ಕೈಹಾಕಿದ್ದಾರೆ. ಅಷ್ಟಕ್ಕೂ ಪೊಲೀಸರು ಮತ್ತು ಶಾರೂಖ್ ನಡುವೆ ಈ ಮಟ್ಟಕ್ಕೆ ಜಗಳ ತಲುಪುವುದಕ್ಕೆ ಕಾರಣ, 'ಮನ್ನತ್' ಒಳಗೆ ಶಾರೂಖ್ ಪ್ರವೇಶಿಸಲು ಮುಂದಾದಾಗ ಪೊಲೀಸರು ಅದಕ್ಕೆ ನಿರಾಕರಿಸಿದ್ದು. [ಗೂಗಲ್ ಕಚೇರಿಯಲ್ಲಿ ಹುಚ್ಚೆದ್ದು ಕುಣಿದ ಡಾನ್ ಶಾರೂಖ್ ಖಾನ್]

ಅರೇ,'ಮನ್ನತ್' ಗೆ ಕಿಂಗ್ ಖಾನ್ ಶಾರೂಖ್ ಒಡೆಯ! ಅವರ ಮನೆ ಪ್ರವೇಶಿಸುವುದಕ್ಕೆ ಅವರಿಗೆ ಅಧಿಕಾರವಿಲ್ಲವೇ? ಅನ್ನುವ ಪ್ರಶ್ನೆಗೆ ಉತ್ತರ 'ಇದು ರೀಲ್ ಕಹಾನಿ' ಅಷ್ಟೇ.

shahrukh khan2

ಹೌದು, ಶಾರೂಖ್ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದದ್ದು ಶೂಟಿಂಗ್ ಗಾಗಿ. ಶಾರೂಖ್ ಮನೆ 'ಮನ್ನತ್' ಮುಂದೆ ನಡೀತಾಯಿದದ್ದು 'ಫ್ಯಾನ್' ಚಿತ್ರದ ಚಿತ್ರೀಕರಣ. 'ಫ್ಯಾನ್' ಚಿತ್ರದಲ್ಲಿ ಸೂಪರ್ ಸ್ಟಾರ್ ಅಭಿಮಾನಿಯಾಗಿ ಅಭಿನಯಿಸುತ್ತಿರುವ ಶಾರೂಖ್, ಸೂಪರ್ ಸ್ಟಾರ್ ನ ಭೇಟಿ ಮಾಡೋಕ್ಕಂತ 'ಮನ್ನತ್'ಗೆ ಬರ್ತಾರೆ. ಆದ್ರೆ ಅಲ್ಲಿನ ಸೆಕ್ಯೂರಿಟಿ, ಅದಕ್ಕೆ ನಿರಾಕರಿಸುವ ಸಂದರ್ಭದಲ್ಲಿ ಶಾರೂಖ್ ಮತ್ತು ಪೊಲೀಸರ ನಡುವೆ ವಾಕ್ಸಮರವಾಗುತ್ತೆ.

ಈ ದೃಶ್ಯದ ಚಿತ್ರೀಕರಣವನ್ನು ನೋಡೋಕೆ ಶಾರೂಖ್ ನಿವಾಸ 'ಮನ್ನತ್' ಮುಂದೆ ಜನಸ್ತೋಮವೇ ಹರಿದುಬಂದಿತ್ತು. ವಿಶೇಷ ಅಂದ್ರೆ, ಶಾರೂಖ್ ರವರ ಈ ಶೂಟಿಂಗ್ ಗೆ ಅವರ ಕಿರಿಯ ಪುತ್ರ ಅಬ್ರಂ ಖಾನ್ ಸಾಕ್ಷಿಯಾಗಿದ್ದು. [ಚೆನ್ನೈನಲ್ಲಿ ಶಾರೂಖ್ ಖಾನ್ ಕನ್ನಡ ಮಾತನಾಡಿದಾಗ!]

shahrukh khan

ಯಶ್ ರಾಜ್ ಬ್ಯಾನರ್ ನಲ್ಲಿ ರೆಡಿಯಾಗುತ್ತಿರುವ 'ಫ್ಯಾನ್' ಚಿತ್ರಕ್ಕೆ ಮನೀಶ್ ಶರ್ಮ ಆಕ್ಷನ್ ಕಟ್ ಹೇಳ್ತಿದ್ದಾರೆ. ಸ್ಟಾರ್ ಒಬ್ಬರ ಕಟ್ಟಾ ಅಭಿಮಾನಿಯಾಗಿ ಮಿಂಚುವ ಶಾರುಖ್ ಗೆ ನಾಯಕಿ ಯಾರು ಅಂತ ಚಿತ್ರತಂಡ ರಿವೀಲ್ ಮಾಡಿಲ್ಲ. ಹಾಗೇ ಇದು ಶಾರೂಖ್ ಖಾನ್ ರವರ ಅಸಲಿ ಸ್ಟೋರಿ ಅನ್ನುವ ಗುಮಾನಿಗೂ ಚಿತ್ರತಂಡ ಮೌನಮುರಿದಿಲ್ಲ. ಎಲ್ಲದಕ್ಕೂ ತೆರೆ ಬೀಳೋವರೆಗೂ ಕುತೂಹಲ ಇದ್ದಿದ್ದೆ. (ಏಜೆನ್ಸೀಸ್)

English summary
Shahrukh Khan is busy shooting for his upcoming flick Fan outside his house Mannat. The shoot was about the reel SRK (being Fan of a Super Star) trying to enter Mannat (Super Star's house) and being manhandled by the cops.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada