»   » 'ಮಮ್ಮಿ' ನಾಡಲ್ಲಿ ಶಾರೂಖ್ 'ಹ್ಯಾಪಿ ನ್ಯೂ ಇಯರ್' ಆಚರಣೆ

'ಮಮ್ಮಿ' ನಾಡಲ್ಲಿ ಶಾರೂಖ್ 'ಹ್ಯಾಪಿ ನ್ಯೂ ಇಯರ್' ಆಚರಣೆ

Posted By:
Subscribe to Filmibeat Kannada

ಹೊಸ ವರ್ಷದಂದು ತಾರೆಯರು ಎಲ್ಲೆಲ್ಲಿ ಹೇಗೆಲ್ಲಾ ಸಂಭ್ರಮಾಚರಣೆ ಮಾಡುತ್ತಾರೆ ಅಂತ ಅಭಿಮಾನಿಗಳಿಗೆ ಕುತೂಹಲ ಇದ್ದದ್ದೇ. ಪಾರ್ಟಿ, ಕ್ಲಬ್ಬು, ಪಬ್ಬು ಅಂತ ಫ್ಯಾಮಿಲಿ ಜೊತೆ ಸೆಲೆಬ್ರೇಟ್ ಮಾಡುವ ತಾರೆಯರ ಮಧ್ಯೆ ಕಿಂಗ್ ಖಾನ್ ಶಾರೂಖ್ ಸ್ವಲ್ಪ ಡಿಫರೆಂಟ್. 'ಮಮ್ಮಿ' ಗಳ ನಾಡಲ್ಲಿ ಶಾರೂಖ್ 'ಹ್ಯಾಪಿ ನ್ಯೂ ಇಯರ್' ಆಚರಿಸಲಿದ್ದಾರೆ. [ಹೊಸ ವರ್ಷದ ಸಂಭ್ರಮ: ಯಾವ್ಯಾವ ತಾರೆಯರು ಎಲ್ಲೆಲ್ಲಿ?]

ಹಾಗಂತ ಶಾರೂಖ್ ಈಜಿಪ್ಟ್ ಗೆ ತೆರಳುತ್ತಿಲ್ಲ. ಬದಲಾಗಿ ಶಾರೂಖ್ ಅಭಿನಯದ 'ಹ್ಯಾಪಿ ನ್ಯೂ ಇಯರ್' ಈಜಿಪ್ಟ್ ನಲ್ಲಿ ತೆರೆಕಾಣುತ್ತಿದೆ. ಹೌದು, 2014 ರಲ್ಲಿ ಬಾಲಿವುಡ್ ಬಾಕ್ಸಾಫೀಸ್ ನ ಚಿಂದಿ ಉಡಾಯಿಸಿದ ಸಿನಿಮಾ 'ಹ್ಯಾಪಿ ನ್ಯೂ ಇಯರ್'. ಕಿಂಗ್ ಖಾನ್ ಶಾರೂಖ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ 'ಹ್ಯಾಪಿ ನ್ಯೂ ಇಯರ್' ಬಿಟೌನ್ ನ ಎಲ್ಲಾ ರೆಕಾರ್ಡ್ ಗಳನ್ನ ಉಡೀಸ್ ಮಾಡಿ ಹೊಸ ದಾಖಲೆ ಬರೆಯಿತು.

Shahrukh Khan starrer Happy New Year to release in Egypt1

ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ 44 ಕೋಟಿ ರೂಪಾಯಿ ವಸೂಲಿ ಮಾಡಿ ಮೈಲಿಗಲ್ಲು ಸೃಷ್ಟಿಸಿದ 'ಹ್ಯಾಪಿ ನ್ಯೂ ಇಯರ್' ಇದೀಗ ಮತ್ತೊಂದು ದಾಖಲೆ ಮಾಡೋಕೆ ರೆಡಿಯಾಗಿದೆ. ನಾಳೆ (ಡಿಸೆಂಬರ್ 31 ರಂದು) 'ಮಮ್ಮಿ' ನಾಡು ಈಜಿಪ್ಟ್ ನಲ್ಲಿ 'ಹ್ಯಾಪಿ ನ್ಯೂ ಇಯರ್' ಅದ್ಧೂರಿಯಾಗಿ ರಿಲೀಸ್ ಆಗಲಿದೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಈಜಿಪ್ಟ್ ನಲ್ಲಿ ತೆರೆಕಾಣುತ್ತಿರುವ ಎರಡನೇ ಬಾಲಿವುಡ್ ಸಿನಿಮಾ ಅನ್ನುವ ಖ್ಯಾತಿಗೆ 'ಹ್ಯಾಪಿ ನ್ಯೂ ಇಯರ್' ಪಾತ್ರವಾಗಿದೆ. ವಿಶೇಷ ಅಂದ್ರೆ ಈ ಹಿಂದೆ ಕಿಂಗ್ ಖಾನ್ ಶಾರೂಖ್ ಅಭಿನಯದ 'ಚೆನ್ನೈ ಎಕ್ಸ್ ಪ್ರೆಸ್' ಸಿನಿಮಾ ಇಲ್ಲೇ ತೆರೆಕಂಡಿತ್ತು. ಇದೀಗ ಅದೇ ಶಾರೂಖ್ ನಟಿಸಿರುವ ಎರಡನೇ ಸಿನಿಮಾ ಬಿಡುಗಡೆಯಾಗುತ್ತಿರುವುದು ವಿಶೇಷ.

Shahrukh Khan starrer Happy New Year to release in Egypt2

ಭಾರತ ಮಾತ್ರವಲ್ಲದೇ, ನೇಪಾಳ, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಮಲೇಶಿಯಾ, ಥೈಲ್ಯಾಂಡ್, ಹಾಂಗ್ ಕಾಂಗ್, ಜರ್ಮನಿ, ಯು.ಕೆ, ಆಸ್ಟ್ರೇಲಿಯಾ, ಅಮೇರಿಕಾದಲ್ಲಿ ತೆರೆಕಂಡಿರುವ 'ಹ್ಯಾಪಿ ನ್ಯೂ ಇಯರ್' ಎಲ್ಲಾ ಕಡೆ ಭರ್ಜರಿ ಪ್ರದರ್ಶನ ಕಂಡಿದೆ. [ಮುನ್ನೂರು ಕೋಟಿ ಗಳಿಕೆಯತ್ತ ಶಾರುಖ್ ಚಿತ್ರ]

ಇದೀಗ ಹೊಸ ವರ್ಷದ ಹೊಸ್ತಿಲಲ್ಲಿ ಪ್ರೇಕ್ಷಕರ ಒತ್ತಾಯದ ಮೇರೆಗೆ ಈಜಿಪ್ಟ್ ನ ಎಲ್ಲಾ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ 'ಹ್ಯಾಪಿ ನ್ಯೂ ಇಯರ್' ಚಿತ್ರ ಇಂಗ್ಲೀಷ್ ಮತ್ತು ಅರೇಬಿಕ್ ಸಬ್ ಟೈಟಲ್ ನೊಂದಿಗೆ ರಾರಾಜಿಸಲಿದೆ.

Shahrukh Khan starrer Happy New Year to release in Egypt4

ಶಾರೂಖ್ ಖಾನ್ ಕಟ್ಟಾ ಅಭಿಮಾನಿಗಳು ಈಜಿಪ್ಟ್ ನಲ್ಲಿರುವುದರಿಂದ 'ಹ್ಯಾಪಿ ನ್ಯೂ ಇಯರ್' ಗೆ ಬೇಡಿಕೆ ಹೆಚ್ಚಾಗಿರುವುದು. ಈಗಾಗಲೇ ಎಲ್ಲೆಡೆ, ಶಾರೂಖ್ ಚಿತ್ರಕ್ಕೆ ಶಿಳ್ಳೆ-ಚಪ್ಪಾಳೆ ಸಿಕ್ಕಿದ್ದಾಗಿದೆ. 'ಮಮ್ಮಿ ನೆಲದಲ್ಲಿ' ನಾಳೆ ಏನಾಗುವುದೋ...(ಏಜೆನ್ಸೀಸ್)

English summary
Shahrukh Khan- Deepika Padukone starrer Happy New Year is all set to release in Egypt tomorrow (December 31st).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada