For Quick Alerts
  ALLOW NOTIFICATIONS  
  For Daily Alerts

  KGF ಎದುರು ಸೋತಿದ್ದ ಶಾರುಖ್: 4 ವರ್ಷಗಳ ನಂತರ 'ಬದುಕೇ ಇದ್ದೀನಿ' ಎಂದು ಬಂದ 'ಪಠಾಣ್'!

  |

  ಶಾರುಖ್ ಖಾನ್ ಹುಟ್ಟುಹಬ್ಬದ ಸಂಭ್ರಮದಲ್ಲೇ 'ಪಠಾಣ್' ಸಿನಿಮಾ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. 4 ವರ್ಷಗಳಿಂದ ಸೈಲೆಂಟ್ ಆಗಿದ್ದ ಕಿಂಗ್‌ ಖಾನ್ ಜಬರ್ದಸ್ತ್ ಅವತಾರದಲ್ಲಿ ಪ್ರೇಕ್ಷಕರನ್ನು ರಂಜಿಸೋಕೆ ಬರ್ತಿದ್ದಾರೆ. ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ 'ಪಠಾಣ್' ಟೀಸರ್ ಮೊದಲ ನೋಟದಲ್ಲೇ ಗಮನ ಸೆಳೆದಿದೆ.

  ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದಲ್ಲಿ ಶಾರುಖ್, ದೀಪಿಕಾ ಪಡುಕೋಣೆ, ಜಾನ್ ಅಬ್ರಾಹಾಂ ಲೀಡ್ ರೋಲ್‌ಗಳಲ್ಲಿ ಮಿಂಚಿದ್ದಾರೆ. ಹಾಲಿವುಡ್ ರೇಂಜ್‌ನಲ್ಲಿ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಕಟ್ಟಿಕೊಡಲಾಗಿದೆ. ಯಶ್‌ ರಾಜ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿಕ್ಕಾಪಟ್ಟೆ ಅದ್ಧೂರಿಯಾಗಿ 'ಪಠಾಣ್' ಸಿನಿಮಾ ಮೂಡಿ ಬಂದಿದೆ. ಹಿಂದಿ, ತೆಲುಗು, ತಮಿಳಿನಲ್ಲಿ ಸಿನಿಮಾವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಖಡಕ್ ಡೈಲಾಗ್ಸ್, ಮೈ ಜುಮ್‌ ಅನ್ನಿಸೋ ಆಕ್ಷನ್ ಸೀಕ್ವೆನ್ಸ್‌ನಿಂದ ಟೀಸರ್ ಹುಬ್ಬೇರಿಸುವಂತೆ ಮಾಡಿದೆ.

  ಖಾನ್‌ತ್ರಯರು ಒಟ್ಟಿಗೆ ನಟಿಸಿದರೂ ರಾಕಿಭಾಯ್ ಬರೆದ ಆ ದಾಖಲೆ ಅಳಿಸಲು ಕಷ್ಟ!ಖಾನ್‌ತ್ರಯರು ಒಟ್ಟಿಗೆ ನಟಿಸಿದರೂ ರಾಕಿಭಾಯ್ ಬರೆದ ಆ ದಾಖಲೆ ಅಳಿಸಲು ಕಷ್ಟ!

  2018ರಲ್ಲಿ ಶಾರುಖ್ 'ಜೀರೊ' ಸಿನಿಮಾದಲ್ಲಿ ನಟಿಸಿದ್ದರು. ಕನ್ನಡದ KGF ಎದುರು ರಿಲೀಸ್ ಆಗಿದ್ದ ಆ ರೊಮ್ಯಾಂಟಿಕ್ ಕಾಮಿಡಿ ಎಂಟರ್‌ಟೈನರ್ ಬಾಕ್ಸಾಫೀಸ್‌ನಲ್ಲಿ ಮುಗ್ಗಿರಿಸಿತ್ತು. 4 ವರ್ಷಗಳಿಂದ ಯಾವ ತರಹದ ಸಿನಿಮಾ ಮಾಡಬೇಕೆಂದುತಲೆ ಕೆಡಿಸಿಕೊಂಡಿದ್ದ ಕಿಂಗ್ ಖಾನ್ ಕೊನೆಗೂ 'ಪಠಾಣ್' ಅವತಾರ ತಾಳಿದ್ದಾರೆ.

   ಕುತೂಹಲಭರಿತ ಟೀಸರ್

  ಕುತೂಹಲಭರಿತ ಟೀಸರ್

  ಶಾರುಖ್ ಖಾನ್ ಇವತ್ತು 57ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದೇ ಸಂಭ್ರಮದಲ್ಲಿ 'ಪಠಾಣ್' ಸಿನಿಮಾ ಟೀಸರ್ ರಿಲೀಸ್ ಆಗಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಬಾಲಿವುಡ್‌ನ 'ಪಠಾಣ್' ಶಾರುಖ್ ಗೆಲ್ಲಿಸ್ತಾರೆ ಎನ್ನುತ್ತಿದ್ದಾರೆ ಅಭಿಮಾನಿಗಳು. "'ಪಠಾಣ್' ಬಗ್ಗೆ ನಿನಗೇನು ಗೊತ್ತು. 3 ವರ್ಷಗಳಿಂದ ಆತನ ಬಗ್ಗೆ ಯಾವುದೇ ಸುಳಿವು ಇಲ್ಲ. ತನ್ನ ಕೊನೆ ಮಿಷನ್‌ನಲ್ಲಿ ಆತ ಸಿಕ್ಕಿ ಬಿದ್ದ. ಆತನಿಗೆ ಬಹಳ ಚಿತ್ರ ಹಿಂಸೆ ಕೊಟ್ಟರು ಎಂದು ಕೇಳ್ಪಟ್ಟೆ. 'ಪಠಾಣ್' ಅವರ ಕೈಯಲ್ಲಿ ಸತ್ತು ಹೋದ್ನ ಇಲ್ವಾ" ಎಂದು ಇಬ್ಬರು ಮಾತನಾಡುತ್ತಿದ್ದಂತೆ "ಬದುಕ್ಕಿದ್ದೀನಿ" ಎಂದು 'ಪಠಾಣ್' ಶಾರುಖ್ ಎಂಟ್ರಿ ಕೊಡುತ್ತಾರೆ.

   ಮೈ ಜುಮ್ ಎನ್ನಿಸೋ ಆಕ್ಷನ್

  ಮೈ ಜುಮ್ ಎನ್ನಿಸೋ ಆಕ್ಷನ್

  ಚಿತ್ರದಲ್ಲಿ ಜಾನ್ ಅಬ್ರಹಾಂ ನೆಗೆಟೀವ್ ರೋಲ್‌ನಲ್ಲಿ ಅಬ್ಬರಿಸಿದ್ದಾರೆ. ಹುರಿಗಟ್ಟಿದ ದೇಹ, ಉದ್ದನೆಯ ಕೂದಲು ಬಿಟ್ಟು ಶಾರುಖ್ ಖಾನ್ ದರ್ಶನ ಕೊಟ್ಟಿದ್ದು, ಅಭಿಮಾನಿಗಳ ಮನ ಗೆದ್ದಿದ್ದಾರೆ. ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುವ ಆಕ್ಷನ್ ಸೀಕ್ವೆನ್ಸ್ ಚಿತ್ರದಲ್ಲಿದೆ. ಇನ್ನು ಕಿಂಗ್ ಖಾನ್ ಡೈಲಾಗ್ಸ್ ಕೂಡ ಸಖತ್ ಕಿಕ್ ಕೊಡ್ತಿದೆ. ವಿಮಾನ, ಹೆಲಿಕಾಪ್ಟರ್‌ಗಳನ್ನು ಬಳಸಿ ಸೆರೆ ಹಿಡಿದಿರುವ ದೃಶ್ಯಗಳು, ಬೈಕ್ ಚೇಸಿಂಗ್ ಸೀನ್ಸ್ ಹಾಲಿವುಡ್ ಸಿನಿಮಾಗಳನ್ನು ನೆನಪಿಸುವಂತಿದೆ. ಶಾರುಖ್- ಜಾನ್ ಅಬ್ರಹಾಂ ನಡುವಿನ ಫೈಟ್ ಮತ್ತಷ್ಟು ಮಜಾ ಕೊಡುವಂತಿದೆ.

   'ಪಠಾಣ್' ಚಿತ್ರಕ್ಕೆ ಡಿಪ್ಪಿ ಗ್ಲಾಮರ್ ಟಚ್

  'ಪಠಾಣ್' ಚಿತ್ರಕ್ಕೆ ಡಿಪ್ಪಿ ಗ್ಲಾಮರ್ ಟಚ್

  'ಗೆಹರಿಯಾನ್‌' ನಂತರ 'ಪಠಾಣ್' ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮಿಂಚಿದ್ದಾರೆ. ಹಾಲಿವುಡ್ ರೇಂಜ್‌ ಚಿತ್ರಕ್ಕೆ ತಕ್ಕಂತೆ ಗ್ಲಾಮರ್‌ ಡಾಲ್ ಆಗಿ ದರ್ಶನ ಕೊಟ್ಟಿದ್ದಾರೆ. ಒಂದು ಸನ್ನಿವೇಶದಲ್ಲಂತೂ ಎದೆಯ ಸೀಳು ತೋರಿಸುವ ಬಾಡಿಕಾನ್ ಡ್ರೆಸ್‌ನಲ್ಲಿ ಬಿಂದಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಗ್ಲಾಮರ್ ಮೋಡಿಯ ಜೊತೆಗೆ ಆಕ್ಷನ್ ಸೀಕ್ವೆನ್ಸ್‌ನಲ್ಲೂ ದೀಪಿಕಾ ಅಬ್ಬರಿಸಿರೋದು ವಿಶೇಷ. ಇದಕ್ಕಾಗಿ ವಿಶೇಷ ತರಬೇತಿ ಪಡೆದು ಡಿಪ್ಪಿ ನಟಿಸಿದ್ದಾರೆ.

   ಜನವರಿ 25ಕ್ಕೆ 'ಪಠಾಣ್'

  ಜನವರಿ 25ಕ್ಕೆ 'ಪಠಾಣ್'

  ಯಶ್‌ ರಾಜ್ ಫಿಲ್ಮ್ಸ್‌ ಸಂಸ್ಥೆಯ 50ನೇ ಸಿನಿಮಾ ಇದು. ಭಾರೀ ಕುತೂಹಲ ಕೆರಳಿಸಿರುವ 'ಪಠಾಣ್' ಚಿತ್ರವನ್ನು ಜನವರಿ 25ಕ್ಕೆ ತೆರೆಗೆ ತರುವ ಪ್ರಯತ್ನ ನಡೀತಿದೆ. ತಮಿಳು, ತೆಲುಗಿಗೆ ಡಬ್ ಆಗಿ ಬಿಡುಗಡೆಯಾಗುತ್ತಿರುವ ಸಿನಿಮಾ ಕನ್ನಡಕ್ಕೆ ಡಬ್ ಆಗದೇ ಇರುವುದು ಕೆಲವರ ಬೇಸರಕ್ಕೆ ಕಾರಣವಾಗಿದೆ. ವಿಶ್ವದಾದ್ಯಂತ ಬಹಳ ದೊಡ್ಡಮಟ್ಟದಲ್ಲಿ ಪಠಾಣ್ ಸಿನಿಮಾ ರಿಲೀಸ್‌ಗೆ ಸಿದ್ಧತೆ ನಡೆದಿದೆ. 4 ವರ್ಷಗಳ ನಂತರ ಪ್ರೇಕ್ಷಕರ ಮುಂದೆ ಬರುತ್ತಿರುವ ಶಾರುಖ್‌ ಖಾನ್‌ಗೆ ಸಕ್ಸಸ್ ಸಿಗುತ್ತಾ ಕಾದು ನೋಡಬೇಕು.

  ಬಾಲಿವುಡ್ ಮೆಗಾ 'ಹೀರೋ' ಕೆಜಿಎಫ್ -1 ಚಿತ್ರ ಮುಂದೆ 'ಜೀರೋ' ಆಗಿದ್ದು ಹೇಗೆ?ಬಾಲಿವುಡ್ ಮೆಗಾ 'ಹೀರೋ' ಕೆಜಿಎಫ್ -1 ಚಿತ್ರ ಮುಂದೆ 'ಜೀರೋ' ಆಗಿದ್ದು ಹೇಗೆ?

  English summary
  Shahrukh Khan Starrer Phataan Teaser Released on the Occasion Of Actor Birthday. The film stars Shah Rukh Khan, Deepika Padukone and John Abraham. The film is scheduled to release on 25 January 2023. Know More.
  Wednesday, November 2, 2022, 13:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X