»   » ಸಲ್ಲುಗೆ ಮಾತ್ರ ಯಾಕೆ? ನಂಗೂ ಇರಲಿ! ಎಂದ ಶಾರುಖ್

ಸಲ್ಲುಗೆ ಮಾತ್ರ ಯಾಕೆ? ನಂಗೂ ಇರಲಿ! ಎಂದ ಶಾರುಖ್

Posted By:
Subscribe to Filmibeat Kannada

ಅಲ್ಲಾಹುವಿನ ಆಶೀರ್ವಾದದ ಪವಾಡವೋ ಏನೋ, ರಂಜಾನ್ ಹಬ್ಬದ ಸಡಗರದಲ್ಲಿ ಚಿತ್ರಗಳನ್ನ ರಿಲೀಸ್ ಮಾಡಿ ಸಲ್ಮಾನ್ ಖಾನ್ 'ಬಾಕ್ಸ್ ಆಫೀಸ್ ಸುಲ್ತಾನ್' ಆಗಿದ್ದಾರೆ.

'ವಾಂಟೆಡ್', 'ದಬಂಗ್', 'ಬಾಡಿಗಾರ್ಡ್', 'ಏಕ್ ಥಾ ಟೈಗರ್', 'ಕಿಕ್' ಮತ್ತು 'ಭಜರಂಗಿ ಭಾಯ್ ಜಾನ್'...ಸಲ್ಮಾನ್ ಖಾನ್ ಅವರ ಈ ಎಲ್ಲಾ ಹಿಟ್ ಸಿನಿಮಾಗಳು ರಿಲೀಸ್ ಆಗಿದ್ದು ಈದ್ ಸಂದರ್ಭದಲ್ಲಿ.

2009 ರಿಂದ ಸಲ್ಮಾನ್ ಖಾನ್ ಅಭಿನಯದ ಚಿತ್ರಗಳು ರಂಜಾನ್ ಹಬ್ಬದ ಪ್ರಯುಕ್ತ ತೆರೆಕಾಣುತ್ತಿದ್ದರಿಂದ, ರಂಜಾನ್ ಅಂದ್ರೆ ಬಾಲಿವುಡ್ ಸಿನಿಪ್ರಿಯರಿಗೆ ತಕ್ಷಣ ಸಲ್ಮಾನ್ ಖಾನ್ ನೆನಪಾಗುವ ಮಟ್ಟಕ್ಕೆ ಬಂದಿದೆ. [ಬಾಲಿವುಡ್ ಟೈಗರ್ ಸಲ್ಮಾನ್ ಖಾನ್ ಸಕ್ಸಸ್ ಹಿಂದಿನ ಸೂತ್ರ]

shahrukh-khan-starrer-raees-to-release-on-eid-2016

ಪ್ರತಿ ವರ್ಷ ಈದ್ ಹಬ್ಬಕ್ಕೆ ಸಲ್ಮಾನ್ ಮಾತ್ರ ಯಾಕೆ, ಅಲ್ಲಾಹುವಿನ ಆಶೀರ್ವಾದ ನನಗೂ ಸಿಗಲಿ ಅಂತ ಲೆಕ್ಕಾಚಾರ ಹಾಕಿರುವ ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಈಗಲೇ ಮುಂದಿನ ವರ್ಷದ ರಂಜಾನ್ ಹಬ್ಬಕ್ಕೆ ತಮ್ಮ ಚಿತ್ರವನ್ನ ಫಿಕ್ಸ್ ಮಾಡಿದ್ದಾರೆ.

ಹೌದು, ಶಾರುಖ್ ಖಾನ್ ಅಭಿನಯಿಸುತ್ತಿರುವ 'Raees' ಚಿತ್ರ ಮುಂದಿನ ವರ್ಷದ ರಂಜಾನ್ ಹಬ್ಬಕ್ಕೆ ತೆರೆಕಾಣುತ್ತಿದೆ. ನಿನ್ನೆಯಷ್ಟೇ 'ಭಜರಂಗಿ ಭಾಯ್ ಜಾನ್' ಚಿತ್ರದ ಜೊತೆಗೆ 'Raees' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. [ಕಿಂಗ್ ಖಾನ್ ಪಂಚಿಂಗ್ ಡೈಲಾಗ್, ರಾಯೀಸ್ ಟೀಸರ್ ಸೂಪರ್]

shahrukh-khan-starrer-raees-to-release-on-eid-2016

ಸಲ್ಮಾನ್ ಖಾನ್ ಸಕ್ಸಸ್ ಫಾರ್ಮುಲಾ ಮೇಲೆ ಕಣ್ಣು ಹಾಕಿರುವ ಶಾರುಖ್, ಮುಂದಿನ ವರ್ಷ 'ಗೆಲುವು ನಂದೇ' ಅಂತ ಭಾವಿಸಿದ್ದಾರೆ. ಪ್ರತಿ ಬಾರಿ ಸಲ್ಲು ಶ್ರಮಕ್ಕೆ ಪ್ರತಿಫಲ ನೀಡ್ತಿದ್ದ ಅಲ್ಲಾಹು, ಮುಂದಿನ ವರ್ಷ ಶಾರುಖ್ ಮೇಲೂ ಕರುಣೆ ತೋರ್ತಾರಾ ನೋಡೋಣ.

English summary
Ramzan festival was unofficially booked for Salman Khan films for his Blockbuster hits. But things won't remain the same in 2016. Because, 'King Khan' Shahrukh has fixed the release date of his upcoming movie 'Raees' on Eid 2016.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada