»   » 'ಜಬ್ ಹ್ಯಾರಿ ಮೆಟ್ ಸೆಜಲ್' ಕ್ಲೈಮ್ಯಾಕ್ಸ್‌ ಸೀನ್‌ನಲ್ಲಿ ಶಾರುಖ್ ಆತ್ಮಹತ್ಯೆಗೆ ಯತ್ನ?

'ಜಬ್ ಹ್ಯಾರಿ ಮೆಟ್ ಸೆಜಲ್' ಕ್ಲೈಮ್ಯಾಕ್ಸ್‌ ಸೀನ್‌ನಲ್ಲಿ ಶಾರುಖ್ ಆತ್ಮಹತ್ಯೆಗೆ ಯತ್ನ?

Posted By:
Subscribe to Filmibeat Kannada

'ಜಬ್ ಹ್ಯಾರಿ ಮೆಟ್ ಸೆಜಲ್' ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ. ದೀರ್ಘಕಾಲದ ನಂತರ ಕಿಂಗ್ ಖಾನ್ ಈ ಚಿತ್ರದಲ್ಲಿ ರೊಮ್ಯಾಂಟಿಕ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಅಭಿಮಾನಿಗಳು ಚಿತ್ರದ ಬಗ್ಗೆ ಅತಿಹೆಚ್ಚು ಕುತೂಹಲ ಇಟ್ಟುಕೊಂಡಿದ್ದಾರೆ.

ಮನಮೋಹಕವಾಗಿದೆ 'ಜಬ್ ಹ್ಯಾರಿ ಮೆಟ್ ಸೆಜಲ್' ಟ್ರೈಲರ್

ಕಿಂಗ್ ಖಾನ್ ಅಭಿಮಾನಿಗಳು ಯಾವಾಗಲು ಅವರ ಚಿತ್ರಗಳಲ್ಲಿ ಹ್ಯಾಪಿ ಎಂಡಿಂಗ್ ಬಯಸುತ್ತಾರೆ. ಆದರೆ ಅದಕ್ಕೆ ವಿರುದ್ಧವಾಗಿ 'ಜಬ್ ಹ್ಯಾರಿ ಮೆಟ್ ಸೆಜಲ್'ನ ಕ್ಲೈಮ್ಯಾಕ್ಸ್ ಸೀನ್‌ನಲ್ಲಿ ನಿರ್ದೇಶಕ ಇಮ್ತಿಯಾಜ್ ಅಲಿ ಶಾರುಖ್ ಖಾನ್ ಪಾತ್ರವು ಆತ್ಮಹತ್ಯೆಗೆ ಮುಂದಾಗ ಬೇಕು ಎಂದು ಬಯಸಿದರಂತೆ. ಆದರೆ ಕೊನೆಗೆ ಕ್ಲೈಮ್ಯಾಕ್ಸ್ ನಲ್ಲಿ ಆಗುವುದೇನು? ಈ ಬಗ್ಗೆ ಡೀಟೇಲ್ಸ್ ಈ ಕೆಳಗಿನಂತಿದೆ.

ಚಿತ್ರಕಥೆ

ಪ್ರಮುಖ ನ್ಯೂಸ್ ಏಜೆನ್ಸಿ ಪ್ರಕಾರ, 'ನಿರ್ದೇಶಕ ಇಮ್ತಿಯಾಜ್ ಅಲಿ ಚಿತ್ರದಲ್ಲಿಯ ಶಾರುಖ್ ಖಾನ್ ಪಾತ್ರ ಕ್ಲೈಮ್ಯಾಕ್ಸ್ ಸೀನ್‌ನಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಬೇಕು ಎಂಬ ಟ್ರಾಜಿಡಿ ಎಂಡಿಂಗ್ ಕಾನ್ಸೆಪ್ಟ್ ಅನ್ನು ಶಾರುಖ್ ರಲ್ಲಿ ಅಪ್ರೋಚ್ ಮಾಡಿದ್ದಾರಂತೆ'. ಆದರೆ ಇದಕ್ಕೆ ಶಾರುಖ್ ನಿಜವಾಗಲು ಒಪ್ಪಿಕೊಂಡ್ರಾ?..

ಹ್ಯಾಪಿ ಎಂಡಿಂಗ್ ಬಯಸಿದ ಶಾರುಖ್

ಆದರೆ ಶಾರುಖ್ ಖಾನ್ ನಿರ್ದೇಶಕರ ಬೇಡಿಕೆಯನ್ನು ತಿರಸ್ಕರಿಸಿ, ಹ್ಯಾಪಿ ಸ್ಟೋರಿ ಇರಬೇಕು ಹಾಗೆ ಹ್ಯಾಪಿ ಎಂಡಿಂಗ್ ಸಹ ಇರಬೇಕು ಎಂದು ಕೇಳಿಕೊಂಡರಂತೆ. ಅಂತೂ ಈ ಗುಡ್‌ ನ್ಯೂಸ್ ಶಾರುಖ್ ಖಾನ್ ರ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಇಮ್ತಿಯಾಜ್ ಸಿನಿಮಾ ನೋಡಿಲ್ಲ: ಶಾರುಖ್

ನ್ಯೂಸ್ ಏಜೆನ್ಸಿ ಜೊತೆ ಮಾತನಾಡಿರುವ ಶಾರುಖ್ 'ಜಬ್ ಹ್ಯಾರಿ ಮೆಟ್ ಸೆಜಲ್' ಚಿತ್ರದ ನಿರ್ದೇಶಕನ ಕುರಿತು, 'ಪ್ರಾಮಾಣಿಕವಾಗಿ ನಾನು ಇಮ್ತಿಯಾಜ್ ಅಲಿ ಸಿನಿಮಾಗಳನ್ನು ನೋಡಿಲ್ಲ. ಆದರೆ ಇವರನ್ನು ಭೇಟಿ ಮಾಡಿದಾಗ ತುಂಬಾ ಜೆಂಟಲ್ ಮ್ಯಾನ್ ಮತ್ತು ತೀರ ಸೂಕ್ಷ್ಮ ಹೃದಯಿ ಎಂಬುದು ತಿಳಿಯಿತು. ಇತ್ತೀಚೆಗೆ ನಾನು ವರ್ಕ್ ಮಾಡಿದ ಹಲವು ನಿರ್ದೇಶಕರು ಇಂತಹ ಗುಣಗಳನ್ನೇ ಹೊಂದಿದ್ದರು. ಅವರುಗಳಲ್ಲಿ ಯಶ್ ಜಿ, ಆದಿತ್ಯಾ ಚೋಪ್ರಾ, ಕರಣ್ ಜೋಹರ್ ಮುಂತಾದವರು. ಅವರು ವೈಯಕ್ತಿಕವಾಗಿ ಡಿಫರೆಂಟ್ ಆದರೂ ತುಂಬಾ ಸೂಕ್ಷ್ಮ' ಎಂದಿದ್ದಾರೆ.

ಚಿತ್ರ ಬಿಡುಗಡೆ ಯಾವಾಗ?

'ಸುಲ್ತಾನ್' ಬೆಡಗಿ ಅನುಷ್ಕಾ ಶರ್ಮಾ ಜೊತೆ ತೀರಾ ರೊಮ್ಯಾಂಟಿಕ್ ಆಗಿ ಶಾರುಖ್ ನಟಿಸಿರುವ 'ಜಬ್ ಹ್ಯಾರಿ ಮೆಟ್ ಸೆಜಲ್' ಆಗಸ್ಟ್ 4 ರಂದು ಬಿಡುಗಡೆ ಆಗುತ್ತಿದೆ.

English summary
Jab Harry Met Sejal is one of the most awaited films of Shahrukh Khan. After a long time, the superstar is playing the role of a romantic hero. But director Imtiaz Ali wanted Shahrukh Khan's character to commit suicide in the end of the movie? More details here..

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada