»   » ಶಾರುಖ್ ಜೊತೆ ಮಾದಕ ತಾರೆ ಸನ್ನಿ ಲಿಯೋನ್ ಡ್ಯುಯೆಟ್

ಶಾರುಖ್ ಜೊತೆ ಮಾದಕ ತಾರೆ ಸನ್ನಿ ಲಿಯೋನ್ ಡ್ಯುಯೆಟ್

Posted By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನ ಮಾದಕ ನಟಿ ಸನ್ನಿ ಲಿಯೋನ್ ಅವರು ಇತ್ತೀಚೆಗೆ ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಾರೆ. ಅದಕ್ಕೆ ಉತ್ತಮ ನಿದರ್ಶನ ಅಂದರೆ ಅಕ್ಷಯ್ ಕುಮಾರ್ ಹಾಗೂ 'ಪಿ.ಕೆ' ನಟ ಅಮೀರ್ ಖಾನ್ ಅವರು ಸನ್ನಿ ಲಿಯೋನ್ ಅವರ ಜೊತೆ ನಟಿಸಲು ಆಸಕ್ತಿ ತೋರಿದ್ದು.

ಇದೀಗ ಹೊಸ ಸುದ್ದಿ ಏನಪ್ಪಾ ಅಂದ್ರೆ ಬಾಲಿವುಡ್ ನ ಬಾದ್ ಷಾ ಕಿಂಗ್ ಖಾನ್ ಶಾರುಖ್ ಖಾನ್ ಅವರ ಜೊತೆ ಕೂಡ ಸನ್ನಿ ಲಿಯೋನ್ ಅವರು ಸೊಂಟ ಬಳುಕಿಸಲಿದ್ದಾರೆ.[ಚಿತ್ರಗಳು: 'ಅಸಹಿಷ್ಣುತೆ' ಎಫೆಕ್ಟ್ ಶಾರುಖ್ ಚಿತ್ರಕ್ಕೆ ಭಾರಿ ಕಂಟಕ]

Shahrukh Khan To Work With Sunny Leone In Raees

ಹೌದು ಕಿಂಗ್ ಖಾನ್ ಶಾರುಖ್ ಖಾನ್ ಅವರ ಮುಂಬರುವ ಸಿನಿಮಾ 'ರಾಯೀಸ್' ನಲ್ಲಿ ಮಾದಕ ತಾರೆ ಸನ್ನಿ ಲಿಯೋನ್ ಅವರು ಐಟಂ ಸಾಂಗ್ ಒಂದಕ್ಕೆ ಸಖತ್ತಾಗಿ ಹೆಜ್ಜೆ ಹಾಕಲಿದ್ದಾರೆ.

ಇದೇ ಮೊದಲ ಬಾರಿಗೆ ಸನ್ನಿ ಲಿಯೋನ್ ಮತ್ತು ಶಾರುಖ್ ಖಾನ್ ಅವರು ತೆರೆ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಅಭಿಮಾನಿಗಳಲ್ಲಿ ಕುತೂಹಲ ಸ್ವಲ್ಪ ಹೆಚ್ಚಾಗೇ ಇದೆ.[ಸನ್ನಿ ಜೊತೆ ನನಗೆ ಕೆಲಸ ಮಾಡಲು ಇಷ್ಟ ಎಂದವರಾರು?]

Shahrukh Khan To Work With Sunny Leone In Raees

ಇನ್ನು ಈ ಸುದ್ದಿಯನ್ನು ಪಕ್ಕಾ ಮಾಡಿರುವ ನಟ ಶಾರುಖ್ ಖಾನ್ ಅವರು ಸನ್ನಿ ಅವರ ಜೊತೆ ತೆರೆ ಮೇಲೆ ಕಾಣಿಸಿಕೊಳ್ಳುವುದಾಗಿ ಖುದ್ದಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಾತ್ರವಲ್ಲದೇ ಸನ್ನಿ ಲಿಯೋನ್ ಅವರು ಕೂಡ ಶಾರುಖ್ ಅವರ ಜೊತೆ ಮಿಂಚುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.[ಹಾಟ್ ಫೊಟೋ ಶೂಟ್ ನಲ್ಲಿ ಸನ್ನಿಯ ಸೊಬಗು ನೋಡ್ರಲ್ಲಾ..]

Shahrukh Khan To Work With Sunny Leone In Raees

ಈ ಮೊದಲು ಸನ್ನಿ ಅವರು ಖಾನ್ ಗಳ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತೇನೆ ಅಂದಿದ್ದರು ಕೂಡ ಖಾನ್ ಗಳು ಬಿಲ್ ಕುಲ್ ಒಪ್ಪಿಕೊಂಡಿರಲಿಲ್ಲ ಇದೀಗ ಕಿಂಗ್ ಖಾನ್ ಶಾರುಖ್ ಅವರ ಜೊತೆ ಕುಣಿಯಲು ಅವಕಾಶ ಸಿಕ್ಕಿರುವುದಕ್ಕೆ ಸನ್ನಿ ಅವರು ಫುಲ್ ಖುಷ್ ಆಗಿದ್ದಾರೆ.

English summary
Here is a good news for all Sunny Leone's fans. The beautiful actress has gotten the opportunity to work with Shahrukh Khan in Raees.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada