»   » ಕಿಂಗ್ ಖಾನ್ ಶಾರುಖ್ ಅದೃಷ್ಟ ಪುತ್ರ ಅಬ್ ರಾಮ್

ಕಿಂಗ್ ಖಾನ್ ಶಾರುಖ್ ಅದೃಷ್ಟ ಪುತ್ರ ಅಬ್ ರಾಮ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಿಂಗ್ ಖಾನ್ ಶಾರುಖ್ ಮನೆಯ ಮುದ್ದಿನ ಕೂಸು 'ಅಬ್ ರಾಮ್' ಜೊತೆಗಿರುವ ಫೋಟೋ ಸಾಮಾಜಿಕ ಜಾಲ ತಾಣದಲ್ಲಿ ಕಾಣಿಸಿಕೊಂಡಿದ್ದೇ ತಡ ಬಹುಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇದರ ಜೊತೆಗೆ ಈ ಹಿಂದೆ ಅಬ್ ರಾಮ್ ಬಗ್ಗೆ ಹೊರ ಪ್ರಪಂಚ ತಿಳಿದ ಸಮಯದಲ್ಲಿ ಶಾರುಖ್ ಗೆ ಒದಗಿ ಬಂದಿದ್ದ ಅದೃಷ್ಟ ಈಗಲೂ ಮುಂದುವರೆಯಲಿದೆ ಎಂಬ ನಂಬಿಕೆ ಬೆಳೆಯುತ್ತಿದೆ.

ಅಬ್ ರಾಮ್ ನನ್ನ ಅದೃಷ್ಟದ ಮಗು ಎಂದು ಶಾರುಖ್ ಹೇಳಿಕೊಂಡಿದ್ದಾರೆ. ಅಬ್ ರಾಮ್ ಜನಿಸಿದ ಸಂದರ್ಭದಲ್ಲಿ ಚೆನ್ನೈ ಎಕ್ಸ್ ಪ್ರೆಸ್ ಭರ್ಜರಿ ಹೆಸರು ತಂದು ಕೊಟ್ಟಿತು. ಒಂದೇ ದಿನ 33ಕ್ಕೂ ಅಧಿಕ ಕೋಟಿ ರು ಗಳಿಕೆ ನೂರು ಕೋಟಿ ಗಳಿಕೆ ಕ್ಲಬ್ ಸೇರಿದ್ದು ಹೀಗೆ ಅನೇಕ ದಾಖಲೆ ಪ್ರಶಸ್ತಿಗಳ ಸರಮಾಲೆ ಕಿಂಗ್ ಖಾನ್ ಕೊರಳಿಗೇರಿತು. ಇದರ ಜೊತೆಗೆ ಕೆಕೆಆರ್ ಯಶಸ್ಸು ಕಿಕ್ ಏರಿಸಿತು. [ಚೆನೈ ಎಕ್ಸ್ ಪ್ರೆಸ್ ವೇಗಗಿಲ್ಲ ಬ್ರೇಕ್]

Shahrukh Khan Unveils His Son 'Abram' Pic In Twitter

ಈಗ ಇದೇ ರೀತಿ ಯಶಸ್ಸಿನ ಅಲೆಯಲ್ಲಿ ತೇಲುವ ಎಲ್ಲಾ ಸಾಧ್ಯತೆ ಶಾರುಖ್ ಪಾಲಿಗೆ ಸಿಗಲಿದೆ ಎಂದು ಆಪ್ತರು ಹೇಳುತ್ತಿದ್ದಾರೆ. ಅಂದು ಚೆನ್ನೈ ಎಕ್ಸ್ ಪ್ರೆಸ್ ನೀಡಿದ ಯಶಸ್ಸು ಇಂದು ಹ್ಯಾಪಿ ನ್ಯೂ ಇಯರ್ ಚಿತ್ರಕ್ಕೂ ಸಿಗಲಿದೆ ಎನ್ನಲಾಗುತ್ತಿದೆ. ಅಕ್ಟೋಬರ್ 24ರಂದು ಬಹು ತಾರಾಗಣದ ಈ ಚಿತ್ರ ತೆರೆಗೆ ಬರಲಿದೆ.

ಬಾಡಿಗೆ ತಾಯಿ ಮೂಲಕ ಪಡೆದ ಮಗು ಅಬ್ ರಾಮ್ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದೆ ತಡ ಜನ ಮುಗಿ ಬಿದ್ದು ರೀ ಟ್ವೀಟ್, ಫೇವರಿಟ್ ಬಟನ್ ಒತ್ತಿದ್ದಾರೆ. ಅಬ್ ರಾಮ್ ಜೊತೆ ಶಾರುಖ್ ಇರುವ ಚಿತ್ರ ಸುಮಾರು 7.4K ಸಲ ರೀಟ್ವೀಟ್ ಆಗಿದೆ. 12K ಬಾರಿ ಮೆಚ್ಚುಗೆ ಸೂಚಿಸಲಾಗಿದೆ. [ಶಾರುಖ್ 8 ಪ್ಯಾಕ್ ಆಬ್ಸ್ ವಿಡಿಯೋ]

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್(48)ರಿಗೆ ಚಿತ್ರರಂಗಕ್ಕೆ ನೀಡಿರುವ ಅಪೂರ್ವ ಕೊಡುಗೆಗಳು ಹಾಗೂ ಜನೋಪಯೋಗಿ ಕಾರ್ಯಕ್ರಮಗಳಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಪರಿಗಣಿಸಿ ಬ್ರಿಟನ್‌ನ ಪ್ರತಿಷ್ಠಿತ 2014ನೆ ಸಾಲಿನ ‘ಜಾಗತಿಕ ವೈವಿಧ್ಯ ಪ್ರಶಸ್ತಿ'ಯನ್ನು ನೀಡಿ ಗೌರವಿಸಲಾಗಿದೆ.

ಅಬ್‌ರಾಮ್‌ ಬಗ್ಗೆ ಶಾರುಖ್ ಈ ಹಿಂದೆ ಹೇಳಿದ್ದು ಇಲ್ಲಿ ನೆನಪಿಸಿಕೊಳ್ಳಬಹುದು ಅಬ್‌ ಶಬ್ದವು ಯಹೂದ್ಯ ಪಾರಿಭಾಷಿಕ ಹೆಸರು ಇದು ಪ್ರವಾದಿ ಹಜರತ್‌ ಇಬ್ರಾಹಿಂ ಅವರ ಹೆಸರನ್ನು ಪ್ರತಿನಿಧಿಸುತ್ತದೆ.ರಾಮ್‌ ಶಬ್ದವು ಹಿಂದೂಗಳು ಆರಾಧಿಸುವ ಶ್ರೀರಾಮನ ಹೆಸರನ್ನು ಸೂಚಿಸುತ್ತದೆ. ಹಾಗಾಗಿ ಇದು ಸಂಪೂರ್ಣವಾಗಿ ಜಾತ್ಯತೀತ.

ಅಬ್ ರಾಮ್ ಪ್ರಸವಕ್ಕೂ ಮುನ್ನ ಭ್ರೂಣಲಿಂಗ ಪರೀಕ್ಷೆ ಮಾಡಿಸಿದ ಆರೋಪ ಹೊತ್ತಿದ್ದ ಶಾರುಖ್ ದಂಪತಿ ವಿರುದ್ಧ ದೂರು ಕೂಡಾ ದಾಖಲಾಗಿತ್ತು.

ಆದರೆ,ಈಗ ಅದೆಲ್ಲಾ ಸಮಸ್ಯೆ ಮರೆತಿರುವ ಖಾನ್ ಕುಟುಂಬ AbRam ಜೊತೆ ಸಂತಸದಿಂದ ನಲಿಯುತ್ತಿದೆ. ಶಾರುಖ್ ಮಕ್ಕಳಾದ ಆರ್ಯನ್, ಸುಹಾನಾ ಅವರಿಗೂ ಅಬ್ ರಾಮ್ ಅಚ್ಚುಮೆಚ್ಚು.

English summary
Bollywood Badshah, Shahrukh Khan chose a perfect day to unveil the picture of his son Abram. Shahrukh Khan finally posted a pic of his son in his Twitter handle on Eid wishing 'Eid Al Adha Mubarak' to the fans of his dad.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada