For Quick Alerts
  ALLOW NOTIFICATIONS  
  For Daily Alerts

  ಶಿವಮೊಗ್ಗದಲ್ಲಿ 'ಶಕೀಲಾ' ಬಯೋಪಿಕ್ ಚಿತ್ರದ ಶೂಟಿಂಗ್

  By Bharath Kumar
  |

  ಭಾರತೀಯ ಚಿತ್ರರಂಗದಲ್ಲಿ ಸೆನ್ಸೆಷ್ನಲ್ ಕ್ರಿಯೇಟ್ ಮಾಡಿದ್ದ ಶಕೀಲಾ ಜೀವನಾಧರಿತ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಶಕೀಲಾ ಪಾತ್ರದಲ್ಲಿ ಬಾಲಿವುಡ್ ನಟಿ ರಿಚಾ ಚಡ್ಡಾ, ಫಸ್ಟ್ ಲುಕ್ ಫೋಟೋ ಬಹಿರಂಗವಾಗಿದೆ.

  ಬಿಳಿ ಮತ್ತು ಚಿನ್ನದ ಬಣ್ಣ ಮಿಶ್ರಿತ ಸೀರೆಯಿಟ್ಟು ಮಲಯಾಳಂ ಸಂಪ್ರದಾಯದಂತೆ ರಿಚಾ ಮಿಂಚಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.

  ಕಳೆದ ಎರಡು ವಾರಗಳಿಂದ ಹೊಸನಗರದ ಚಕ್ರಾ ಡ್ಯಾಂ ಬಳಿ ಶಕೀಲಾ ಸಿನಿಮಾ ಶೂಟಿಂಗ್ ಮಾಡುತ್ತಿದ್ದು, ಮಳೆ ಅಡ್ಡಿಯಾಗುತ್ತಿದೆ. ಹೀಗಿದ್ದರೂ ಮಳೆಯ ನಡುವೆ ಶೂಟಿಂಗ್ ಮಾಡಲಾಗುತ್ತಿದೆ.

  ಶಕೀಲಾಗೂ ಶಿವಮೊಗ್ಗಗೂ ಏನ್ ಸಂಬಂಧ ಎಂದು ಯೋಚಿಸಬೇಡಿ. ಕಥೆಗೆ ಶಿವಮೊಗ್ಗದ ಲೊಕೇಶನ್ ಗಳು ಚೆನ್ನಾಗಿ ಸೂಕ್ತವಾಗುತ್ತೆ ಎಂಬ ಕಾರಣದಿಂದ ಇಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ.

  ಅಂದ್ಹಾಗೆ, ಈ ಸಿನಿಮಾಗೆ ಕನ್ನಡದ ಸ್ಟಾರ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ಆಕ್ಷನ್ ಕಟ್ ಹೇಳ್ತಿದ್ದಾರೆ. ಆರಂಭದಲ್ಲಿ ಈ ಸಿನಿಮಾ ಬಹುಭಾಷೆಯಲ್ಲಿ ಮೂಡಲಿದೆ ಎನ್ನಲಾಗಿತ್ತು, ಆದ್ರೀಗ ಬರಿ ಹಿಂದಿ ಭಾಷೆಯಲ್ಲಿ ಮಾತ್ರ ತಯಾರಾಗುತ್ತಿದೆಯಂತೆ.

  Shakeela biopic shooting progress in shivamogga

  ಶಕೀಲಾ ಪಾತ್ರಕ್ಕಾಗಿ ಸಕಲ ರೀತಿಯಲ್ಲಿ ಸಿದ್ಧತೆ ನಡೆಸಿದ್ದ ರಿಚಾ, ಸ್ವತಃ ಶಕೀಲಾ ಅವರನ್ನ ಭೇಟಿ ಮಾಡಿ ಟಿಪ್ಸ್ ತೆಗೆದುಕೊಂಡಿದ್ದಾರೆ. ಇನ್ನುಳಿದಂತೆ ಆರಂಭದಲ್ಲಿ ಈ ಸಿನಿಮಾ ಬಹುಭಾಷೆಗಳಲ್ಲಿ ತಯಾರಾಗಲಿದೆ ಎನ್ನಲಾಗಿತ್ತು. ಕೊನೆಯ ಕ್ಷಣದಲ್ಲಿ ಬದಲಾದ ನಿರ್ಧಾರದಿಂದ ಹಿಂದಿಯಲ್ಲಿ ಮಾತ್ರ ಸಿದ್ಧವಾಗುತ್ತಿದೆ.

  English summary
  Richa Chadha has already started shooting for the Shakeela biopic. Her first look from the film is out and Richa can be seen donning a white and gold saree in the same.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X