»   » ಶಂಕರ್ 'ಐ' ಚಿತ್ರದ ಟೀಸರ್ ಸೂಪರ್ ಡೂಪರ್ ಹಿಟ್

ಶಂಕರ್ 'ಐ' ಚಿತ್ರದ ಟೀಸರ್ ಸೂಪರ್ ಡೂಪರ್ ಹಿಟ್

Posted By: ಶಂಕರ್, ಚೆನ್ನೈ
Subscribe to Filmibeat Kannada

ಭಾರತೀಯ ಚಿತ್ರರಂಗದಲ್ಲಿನ ಹೊಸ ಬೆಳವಣಿಗೆ ಎಂದರೆ ನಟ, ನಿರ್ದೇಶಕರು ಚಿತ್ರದ ಟೀಸರ್ ಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಏಕೆಂದರೆ ಟೀಸರ್ ಗಳು ಚಿತ್ರಕ್ಕೆ ಮುನ್ನುಡಿ ಇದ್ದಂತೆ. ಚಿತ್ರದ ಟೀಸರ್, ಟ್ರೇಲರನ್ನು ಅವಲಂಭಿಸಿ ಆ ಪ್ರಾಜೆಕ್ಟ್ ನ ಬಿಜಿನೆಸ್ಸನ್ನು ಊಹಿಸುವ ದಿನಗಳಿವು.

ಇದಕ್ಕಾಗಿಯೇ ಚಿತ್ರದ ನಿರ್ದೇಶಕರು ಟೀಸರ್ ಗಳ ಮೇಲೆಯೇ ಹೆಚ್ಚು ದೃಷ್ಟಿಬೀರುತ್ತಿದ್ದಾರೆ. ಅದಕ್ಕೆ ಎಷ್ಟು ಹಿಟ್ಸ್ ಬಂದವು ಎಂಬುದನ್ನು ಕಾಲಕಾಲಕ್ಕೆ ಗಮನಿಸುತ್ತಿದ್ದಾರೆ. ವಿಕ್ರಮ್ ಅಭಿನಯದ ಹಾಗೂ ಖ್ಯಾತ ನಿರ್ದೇಶಕ ಶಂಕರ್ ಆಕ್ಷನ್ ಕಟ್ ಹೇಳುತ್ತಿರುವ 'ಐ' ಚಿತ್ರದ ಕಡೆಗೆ ಇಡೀ ಭಾರತೀಯ ಚಿತ್ರರಂಗವೇ ಕುತೂಹಲದ ಕಣ್ಣು ನೆಟ್ಟಿದೆ.

ಈ ಚಿತ್ರದ ಟೀಸರ್ ಯೂಟ್ಯೂಬ್ ನಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಅಮಿ ಜಾಕ್ಸನ್ ನಾಯಕಿಯಾಗಿರುವ ಈ ಚಿತ್ರ ತೆಲುಗು, ತಮಿಳಿನಲ್ಲಿ ಬಿಡುಗಡೆಯಾಗುತ್ತಿದ್ದರೂ ಎಲ್ಲಾ ಭಾಷೆಯ ಚಿತ್ರರಸಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಚಿತ್ರದ ಟೀಸರ್ ಗೆ 53 ಲಕ್ಷಕ್ಕೂ ಅಧಿಕ ಹಿಟ್ಸ್

'ಐ' ಚಿತ್ರದಲ್ಲಿ ವಿಕ್ರಮ್ ಅವರನ್ನು ತೋರಿಸಿರುವ ತಂತ್ರಕ್ಕೆ ಎಲ್ಲರೂ ಮಂತ್ರಮುಗ್ಧರಾಗಿದ್ದಾರೆ. ಇನ್ನು ವಿಕ್ರಮ್ ಅವರ ವಿಶ್ವರೂಪವನ್ನು ನೋಡಲು ಅವರ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಇದುವರೆಗೂ 'ಐ' ಚಿತ್ರದ ಟೀಸರನ್ನು 53 ಲಕ್ಷಕ್ಕೂ ಅಧಿಕ ಹಿಟ್ಸ್ ಪಡೆದುಕೊಂಡಿದೆ.

ಹಾಲಿವುಡ್ ಕಂಪನಿಗಳು ಕೈ ಜೋಡಿಸಿವೆ

ಈ ಚಿತ್ರದ ಬಗ್ಗೆ ಮಾತನಾಡಿರುವ ಶಂಕರ್, "ಐ ಚಿತ್ರಕ್ಕಾಗಿ ಕೆಲವು ಹಾಲಿವುಡ್ ಕಂಪನಿಗಳು ಕೆಲಸ ಮಾಡಿವೆ. ಚಿತ್ರದ ಶೂಟಿಂಗ್ ನೋಡಿದ ಅವರು ಈ ರೀತಿಯ ಚಿತ್ರದಲ್ಲಿ ಅಭಿನಯಿಸಲು ವಿಕ್ರಮ್ ಅವರಂತಹ ನಟನಿಗೆ ಮಾತ್ರ ಸಾಧ್ಯ ಎಂದಿದ್ದಾರೆ. ಅಷ್ಟೊಂದು ಅಂಕಿತಭಾವದಿಂದ ವಿಕ್ರಮ್ ಅಭಿನಯಿಸಿದ್ದಾರೆ" ಎಂದಿದ್ದಾರೆ.

ಪ್ರತಿನಿತ್ಯ ಮೂರು ಗಂಟೆಗಳ ಮೇಕಪ್

ಚಿತ್ರದ ನಾಯಕ ನಟ ವಿಕ್ರಮ್ ಮಾತನಾಡುತ್ತಾ, "ಶಂಕರ್ ಅವರ ಚಿತ್ರದಲ್ಲಿ ಮತ್ತೊಮ್ಮೆ ಅಭಿನಯಿಸುತ್ತಿರುವುದು ನನ್ನ ಅದೃಷ್ಟ. ಈ ಚಿತ್ರ ವಿಶ್ವ ಸಿನಿ ಪ್ರಪಂಚದಲ್ಲೇ ವಿಭಿನ್ನವಾಗಿ ನಿಲ್ಲುತ್ತದೆ. ಈಗ ನೀವೆಲ್ಲಾ ನೋಡುತ್ತಿರುವ 'ಮೃಗ'ದಂತಹ ಪಾತ್ರಕ್ಕಾಗಿ ಕನಿಷ್ಠ ಮೂರು ಗಂಟೆಗಳ ಕಾಲ ಮೇಕಪ್ ಮಾಡಿಕೊಳ್ಳಬೇಕಾಗಿತ್ತು..."

ನಾಲ್ಕು ಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ

ಪ್ರತಿನಿತ್ಯ ಅದೆಷ್ಟೋ ಸಂಯಮದಿಂದ ಮೇಕಪ್ ಹಾಕಿಕೊಂಡು ಕ್ಯಾಮೆರಾ ಮುಂದಿರುತ್ತಿದ್ದೆ. ಈ ರೀತಿಯ ಚಿತ್ರಗಳಲ್ಲಿ ಅಭಿನಯಿಸುವುದು ನಿಜಕ್ಕೂ ಸವಾಲಿನ ಕೆಲಸ. ಇದೇ ರೀತಿಯ ನಾಲ್ಕು ಭಿನ್ನ ಪಾತ್ರಗಳಲ್ಲಿ ನಾನು ಕಾಣಿಸಿಕೊಳ್ಳುತ್ತೇನೆ" ಎಂದಿದ್ದಾರೆ ವಿಕ್ರಂ.

ನೂರ ಎಂಬತ್ತೈದು ಕೋಟಿ ಬಜೆಟ್ ಚಿತ್ರ

ಎ.ಆರ್.ರೆಹಮಾನ್ ಅವರ ಸಂಗೀತ, ಪಿ.ಸಿ. ಶ್ರೀರಾಮ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಇನ್ನು ಚಿತ್ರದ ಬಜೆಟ್ ನೂರ ಎಂಬತ್ತೈದು ಕೋಟಿ. ಭಾರತೀಯ ಚಿತ್ರರಂಗದಲ್ಲೇ ಅತ್ಯಧಿಕ ಬಜೆಟ್ ನ ಚಿತ್ರ ಎಂಬ ವಿಶೇಷಣಕ್ಕೂ ಪಾತ್ರವಾಗಿದೆ. ವೇಣು ರವಿಚಂದ್ರನ್ ಹಾಗೂ ಡಿ ರಮೇಶ್ ಬಾಬು ನಿರ್ಮಿಸುತ್ತಿರುವ ಚಿತ್ರ ಇದು.

English summary
Director Shankar released the tailor of his much-awaited film I (Ai) on the official YouTube channel of Sony Music India. The video of the Superstar Vikram and Amy Jackson starrer film has clocked over 13 lakhs views , the fastest for even a Bollywood film, a feat achieved by no Indian Director before.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada