For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಸಂಕಷ್ಟಕ್ಕೆ ಸಾಲು-ಸಾಲು ಸಹಾಯ ಘೋಷಿಸಿದ ಶಾರುಖ್ ಖಾನ್

  |

  ನೆರೆ, ಬರ ಇನ್ನಾವುದೇ ಸಂಕಷ್ಟಗಳು ಎದುರಾದಾಗಲೂ ಬಾಲಿವುಡ್‌ ನ ಖಾನ್ ತ್ರಯರು ಸಂಕಷ್ಟಕ್ಕೆ ಮಿಡಿದರೇ ಇಲ್ಲವೇ, ಯಾರು ಎಷ್ಟು ನೀಡಿದರು ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಪ್ರಾರಂಭಿಸುತ್ತದೆ.

  ಈ ಬಾರಿಯೂ ಹಾಗೆಯೇ ಆಗಿದೆ. ಶಾರುಖ್ ಖಾನ್ ಅವರು ದುಬೈ ಜನರಿಗಾಗಿ ಮಾಡಿರುವ ವಿಡಿಯೋ ಒಂದು ಹಂಚಿಕೊಂಡು, 'ಈತ ಭಾರತದ ಜನರ ಸಮಸ್ಯೆಗೆ ಸ್ಪಂದಿಸಿಲ್ಲ, ದುಬೈ ಜನರ ಬಗ್ಗೆ ಕಾಳಜಿ ತೋರುತ್ತಿದ್ದಾನೆ' ಎಂದು ಧರ್ಮವನ್ನೂ ಸೇರಿಸಿ ಹೀಗಳೆಯಲಾಗುತ್ತಿದೆ.

  ದುಬೈ ಜನರ ಪರ ಶಾರುಖ್ ಖಾನ್ ಕಾಳಜಿ: ವಿವಾದ ಎಬ್ಬಿಸಿದ ವಿಡಿಯೋದುಬೈ ಜನರ ಪರ ಶಾರುಖ್ ಖಾನ್ ಕಾಳಜಿ: ವಿವಾದ ಎಬ್ಬಿಸಿದ ವಿಡಿಯೋ

  ದೇಶ ಸಂಕಷ್ಟದಲ್ಲಿದ್ದಾಗ ಈ ಹಿಂದೆಯೂ ಶಾರುಖ್ ಖಾನ್ ತಮ್ಮ ನೆರವು ನೀಡಿದ್ದಾರೆ. ಈ ಬಾರಿಯೂ ಸಹ ಅವರು ಅದನ್ನೇ ಮಾಡಿದ್ದಾರೆ. ಸಾಲು-ಸಾಲು ನೆರವನ್ನು ಅವರು ಕೋವಿಡ್ 19 ಸಂದರ್ಭದಲ್ಲಿ ಘೋಷಿಸಿದ್ದಾರೆ.

  ತಮ್ಮ ಎಲ್ಲಾ ಪ್ರಾಂಚೈಸಿಗಳಿಗೆ ನೆರವು

  ತಮ್ಮ ಎಲ್ಲಾ ಪ್ರಾಂಚೈಸಿಗಳಿಗೆ ನೆರವು

  ಪ್ರಾಥಮಿಕ ಹಂತದಲ್ಲಿ ಮುಂಬೈ, ಕೊಲ್ಕತ್ತಾ, ದೆಹಲಿ ನಗರಗಳಿಗೆ ತಮ್ಮ ನೆರವನ್ನು ಫೋಕಸ್ ಮಾಡುತ್ತಿರುವುದಾಗಿ ಹೇಳಿರುವ ಶಾರುಖ್ ಖಾನ್. ತಮ್ಮ ರೆಡ್ ಚಿಲ್ಲೀಸ್, ರೆಡ್ ವಿಎಫ್‌ಎಕ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ, ಎಕ್ ಸಾಥ್ ಫೌಂಡೇಶನ್, ರೋಟಿ ಫೌಂಡೇಶನ್, ಮೀರ್ ಫೌಂಡೇಶನ್ ಗಳ ಮೂಲಕ ಅವರು ಕೋವಿಡ್ 19 ನಿಂದ ಸಂಕಷ್ಟಕ್ಕೆ ಸಿಲುಕಿರುವವರ ಸಹಾಯಕ್ಕೆ ಧಾವಿಸಿದ್ದಾರೆ.

  ಪ್ರಧಾನಿ ಹಾಗೂ ಸಿಎಂ ನಿಧಿಗೆ ಆರ್ಥಿಕ ನೆರವು

  ಪ್ರಧಾನಿ ಹಾಗೂ ಸಿಎಂ ನಿಧಿಗೆ ಆರ್ಥಿಕ ನೆರವು

  ಯಾವ-ಯಾವ ಸಹಾಯಗಳನ್ನು ತಾವು ಮಾಡುತ್ತಿದ್ದೇವೆ ಎಂದು ಪಟ್ಟಿಯನ್ನೇ ಕೊಟ್ಟಿರುವ ಶಾರುಖ್ ಖಾನ್, ತಾವು ಹಾಗೂ ತಮ್ಮ ಉದ್ಯಮಗಳು, ಪ್ರಾಂಚೈಸಿಗಳ ಕಡೆಯಿಂದ ಪ್ರಧಾನಿ ಮಂತ್ರಿ, ಮಹಾರಾಷ್ಟ್ರ ಸಿಎಂ ನಿಧಿ ಹಾಗೂ ಪಶ್ಚಿಮ ಬಂಗಾಳ ಸಿಎಂ ನಿಧಿಗೆ ಆರ್ಥಿಕ ನೆರವನ್ನು ನೀಡುವುದಾಗಿ ಹೇಳಿದ್ದಾರೆ.

  50,000 ಆರೋಗ್ಯ ಕಿಟ್ ಅನ್ನು ವಿತರಿಸಲಾಗುತ್ತಿದೆ

  50,000 ಆರೋಗ್ಯ ಕಿಟ್ ಅನ್ನು ವಿತರಿಸಲಾಗುತ್ತಿದೆ

  ಇದರ ಜೊತೆಗೆ ಕೆಕೆಆರ್ ಮತ್ತು ಮೀರ್ ಫೌಂಡೇಶನ್ ವತಿಯಿಂದ 50,000 ಆರೋಗ್ಯ ಕಿಟ್ ಅನ್ನು ವಿತರಿಸುತ್ತಿರುವುದಾಗಿ ಶಾರುಖ್ ಹೇಳಿದ್ದಾರೆ.

  ಮೂರು ಲಕ್ಷ ಊಟದ ಕಿಟ್ ನೀಡಿದ ಫೌಂಡೇಶನ್

  ಮೂರು ಲಕ್ಷ ಊಟದ ಕಿಟ್ ನೀಡಿದ ಫೌಂಡೇಶನ್

  ರೋಟಿ ಫೌಂಡೇಶನ್ ಮತ್ತು ಮೀರ್ ಫೌಂಡೇಶನ್ ಸೇರಿಕೊಂಡು ಮೂರು ಲಕ್ಷ ಊಟದ ಕಿಟ್ ಅನ್ನು ಹಂಚುತ್ತಿರುವುದಾಗಿ ಹೇಳಿದ್ದಾರೆ. ಇದರಲ್ಲಿ ಅಗತ್ಯ ಆಹಾರ ಸಾಮಗ್ರಿಗಳು ಇರಲಿವೆ. ಇವನ್ನು ದಿನಗೂಲಿ ನೌಕರರಿಗೆ, ಬಡವರಿಗೆ ನೀಡಲಾಗುತ್ತಿದೆಯಂತೆ.

  ತಾತ್ಕಾಲಿಕ ಅಡುಗೆ ಮನೆ ನಿರ್ಮಿಸಿ ದಿನ ಊಟ ಸರಬರಾಜು

  ತಾತ್ಕಾಲಿಕ ಅಡುಗೆ ಮನೆ ನಿರ್ಮಿಸಿ ದಿನ ಊಟ ಸರಬರಾಜು

  ಅರ್ಥ್ ಫೌಂಡೇಶನ್ ಮತ್ತು ಮೀರ್ ಫೌಂಡೇಶನ್ ಜೊತೆಯಾಗಿ ಮುಂಬೈ ಒಂದರಲ್ಲೇ 5500 ಮಂದಿಗೆ ತಿಂಗಳಿಗೆ ಆಗುಷ್ಟು ಅಡುಗೆ ಸಾಮಗ್ರಿಗಳನ್ನು ವಿತರಿಸಿದೆ. ಜೊತೆಗೆ ಅಡುಗೆ ಮನೆಯೊಂದನ್ನು ನಿರ್ಮಿಸಿ ಪ್ರತಿದಿನ 2000 ಸಾವಿರ ಮಂದಿಗೆ ಊಟದ ಸರಬರಾಜು ಮಾಡುತ್ತಿದೆ.

  ಟೀಕಿಸುತ್ತಿದ್ದವರ ಬಾಯಿ ಮುಚ್ಚಿಸಿದ್ದಾರೆ

  ಟೀಕಿಸುತ್ತಿದ್ದವರ ಬಾಯಿ ಮುಚ್ಚಿಸಿದ್ದಾರೆ

  ದಿನಗೂಲಿ ನೌಕರರಿಗೆ ಆಹಾರ ಸಾಮಗ್ರಿಗಳು, ಚಿತ್ರರಂಗದ ದಿನಗೂಲಿ ನೌಕರರಿಗೆ ಸಹಾಯ ಸೇರಿದಂತೆ ಹಲವು ಸಹಾಯಗಳ ಪಟ್ಟಿಯನ್ನು ಶಾರುಖ್ ಖಾನ್ ನೀಡಿದ್ದಾರೆ. ಇದೆಲ್ಲವನ್ನೂ ಅವರು ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. ತಮ್ಮನ್ನು ಟೀಕಿಸುತ್ತಿದ್ದವರಿಗೆ ಉತ್ತರ ನೀಡಿದ್ದಾರೆ.

  English summary
  Actor Sharukh Khan announce his helps to fight COVID 19. He said Kolkatta, Mumbai, Delhi cities will be his first priority.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X