For Quick Alerts
  ALLOW NOTIFICATIONS  
  For Daily Alerts

  ವೈಭವೋಪೇತ ಮನೆ 'ಮನ್ನತ್' ಅನ್ನು ಮಾರುತ್ತಾರೆಯೇ ಶಾರುಖ್ ಖಾನ್?

  |

  ಶಾರುಖ್ ಖಾನ್ ರ ಮನೆಯಂತಹಾ ಮನೆ ಬಾಲಿವುಡ್‌ನ ಯಾವ ಸೆಲೆಬ್ರಿಟಿಗಳ ಬಳಿಯೂ ಇಲ್ಲ. ಮುಂಬೈಗೆ ಪ್ರವಾಸ ಹೋಗುವವರಿಗೆ ಶಾರುಖ್ ಮನೆ ಮನ್ನತ್ ಸಹ 'ಪ್ರೇಕ್ಷಣೀಯ ಸ್ಥಳ'.

  ಮುಖೇಶ್ ಅಂಬಾನಿಯ 'ಆಂಟಿಲಾ' ನಂತರ ಬಹು ವೈಭವೋಪೇತ, ಅದ್ಧೂರಿ ಮನೆ ಶಾರುಖ್ ಅವರ ಮನ್ನತ್. ಮನ್ನತ್ ಎಂದರೆ ಬಯಸುವುದು, ಕೋರಿಕೊಳ್ಳುವುದು, ಆಶಿಸುವುದು, ಬೇಡಿಕೊಳ್ಳುವುದು ಎಂಬ ಅರ್ಥವಿದೆ.

  ಈ ಮನೆಯನ್ನು ಮಾರುತ್ತಿದ್ದಾರಾ ಶಾರುಖ್ ಖಾನ್, ಖಂಡಿತ ಇಲ್ಲ. ಆದರೆ ಶಾರುಖ್ ಖಾನ್ ಅಭಿಮಾನಿಯೊಬ್ಬರು, 'ನಿಮ್ಮ ಮನೆ 'ಮನ್ನತ್' ಅನ್ನು ಮಾರುತ್ತಿರಾ? ಎಂದು ಕೇಳಿದ್ದಾರೆ. ಇದಕ್ಕೆ ಶಾರುಖ್ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.

  ಗೆಳೆಯ 'ಮನ್ನತ್' ಅನ್ನು ಮಾರಲಾಗದು: ಶಾರುಖ್

  ಗೆಳೆಯ 'ಮನ್ನತ್' ಅನ್ನು ಮಾರಲಾಗದು: ಶಾರುಖ್

  'ಗೆಳೆಯ 'ಮನ್ನತ್' ಅನ್ನು ಮಾರಲು ಸಾಧ್ಯವಿಲ್ಲ, ತಲೆಬಗ್ಗಿಸಿ ಕೇಳಬೇಕಾಗುತ್ತದೆ. ಈ ವಿಷಯವನ್ನು ನೆನಪಿನಲ್ಲಿಟ್ಟುಕೊಂಡೆಯೆಂದರೆ ಜೀವನದಲ್ಲಿ ಬಹಳಷ್ಟು ಗಳಿಸುತ್ತೀಯಾ' ಎಂದಿದ್ದಾರೆ ನಟ ಶಾರುಖ್ ಖಾನ್.

  ಹುಟ್ಟುಹಬ್ಬ ಆಚರಣೆ ಕುರಿತ ಪ್ರಶ್ನೆಗೆ ಶಾರುಖ್ ಉತ್ತರ

  ಹುಟ್ಟುಹಬ್ಬ ಆಚರಣೆ ಕುರಿತ ಪ್ರಶ್ನೆಗೆ ಶಾರುಖ್ ಉತ್ತರ

  ಅಭಿಮಾನಿಗಳೊಂದಿಗೆ ಪ್ರಶ್ನೋತ್ತರ ನಡೆಸಿದ್ದ ಶಾರುಖ್ ಖಾನ್, ಅಭಿಮಾನಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಹುಟ್ಟುಹಬ್ಬ ಆಚರಣೆ ಬಗ್ಗೆ ಕೇಳಲಾದ ಪ್ರಶ್ನೆಗೆ, 'ಈ ಬಾರಿ ಯಾರೂ ಮನೆಯ ಹತ್ತಿರ ಗುಂಪು ಗೂಡಬೇಡಿ, ಈ ಬಾರಿ ಹಾರೈಕೆ ದೂರದಿಂದಲೇ ಇರಲಿ' ಎಂದಿದ್ದಾರೆ.

  'ಅನ್ನ-ಬೇಳೆಸಾರು, ಈರುಳ್ಳಿ ಜೀವನ ಪರ್ಯಂತೆ ತಿನ್ನಬಲ್ಲೆ'

  'ಅನ್ನ-ಬೇಳೆಸಾರು, ಈರುಳ್ಳಿ ಜೀವನ ಪರ್ಯಂತೆ ತಿನ್ನಬಲ್ಲೆ'

  ನಿಮ್ಮ ಮಕ್ಕಳು ನಿಮ್ಮನ್ನು ಡ್ಯಾಡಿ ಎನ್ನುತ್ತಾರೆಯೇ? ಎಂಬ ಪ್ರಶ್ನೆಗೆ, 'ಪಾಪಾ ಎನ್ನುತ್ತಾರೆ' ಎಂದು ಉತ್ತರಿಸಿದ್ದಾರೆ. ಜೀವನ ಪರ್ಯಂತ ಒಂದೇ ಮಾದರಿ ಊಟ ತಿನ್ನಬೇಕು ಎಂದಾದರೆ ಯಾವುದು ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದಕ್ಕೆ, 'ಅನ್ನ ಬೇಳೆಸಾರು, ಈರುಳ್ಳಿ' ಎಂದಿದ್ದಾರೆ ಶಾರುಖ್.

  ಊಟಕ್ಕೆ ಹೋದಾಗ ಯಾರು ಬಿಲ್ ಕೊಡುತ್ತಾರೆ?

  ಊಟಕ್ಕೆ ಹೋದಾಗ ಯಾರು ಬಿಲ್ ಕೊಡುತ್ತಾರೆ?

  ಗೆಳೆಯರೊಂದಿಗೆ ಊಟಕ್ಕೆ ಹೋದಾಗ ನೀವು ಸಹ ಬಿಲ್ ಅನ್ನು ಹಂಚಿಕೊಂಡು ಪಾವತಿಸುತ್ತೀರಾ? ಎಂಬ ಅಭಿಮಾನಿಯೊಬ್ಬನ ಪ್ರಶ್ನೆಗೆ ನಾನು ಬಿಲ್ ನೀಡುವುದೇ ಇಲ್ಲ, ಯಾವಾಗಲು ಗೆಳೆಯರೇ ನೀಡುತ್ತಾರೆ ಏಕೆಂದರೆ ನಾನು ಹಣವನ್ನು ಇಟ್ಟುಕೊಂಡಿರುವುದಿಲ್ಲ ಎಂದಿದ್ದಾರೆ ಶಾರುಖ್.

  English summary
  A fan asked Sharukh Khan that is he selling his house Mannat. Sharukh Khan gives a superb answer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X