»   » ಇಫ್ತಾರ್ ಕೂಟದಲ್ಲಿ ಸಲ್ಲು,ಶಾರೂಖ್ ದುಷ್ಮನಿ ಚೋಡ್ದಿಯಾ

ಇಫ್ತಾರ್ ಕೂಟದಲ್ಲಿ ಸಲ್ಲು,ಶಾರೂಖ್ ದುಷ್ಮನಿ ಚೋಡ್ದಿಯಾ

Posted By:
Subscribe to Filmibeat Kannada

ಮುಸ್ಲಿಮರ ಪವಿತ್ರ ರಂಜಾನ್ ಮಾಸಾಚರಣೆಯ ಸಮಯದಲ್ಲಿ ಆಯೋಜಿಸುವ ಇಫ್ತಾರ್ ಕೂಟದಲ್ಲಿ ಬಾಲಿವುಡ್ ಜಗತ್ತಿನ ವೈರಿಗಳೆಂದೇ ಬಿಂಬಿತವಾಗಿರುವ ಶಾರೂಖ್ ಖಾನ್ ಮತ್ತು ಸಲ್ಮಾನ್ ಖಾನ್ ಒಬ್ಬರೊನೊಬ್ಬರು ಅಪ್ಪಿಕೊಂಡು ಆಶ್ಚರ್ಯ ಮೂಡಿಸಿದ್ದಾರೆ.

ಕಾಂಗ್ರೆಸ್ ಶಾಸಕ ಬಾಬಾ ಸಿದ್ದಿಕಿ ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್ ಹೋಟೇಲಿನಲ್ಲಿ ಭಾನುವಾರ (ಜು 21) ಸಂಜೆ ಆಯೋಜಿಸಿದ್ದ ಔತಣ ಕೂಟದಲ್ಲಿ ಶಾರೂಖ್ ಮತ್ತು ಸಲ್ಲು ಮಿಯಾ ಪರಸ್ಪರ ಹಸ್ತಲಾಘವ ಮಾಡಿಕೊಂಡು ಅಪ್ಪಿಕೊಂಡು ನೆರೆದಿದ್ದವರನ್ನು ಚಕಿತಗೊಳಿಸಿದರು.

ಇಫ್ತಾರ್ ಪಾರ್ಟಿ ಆಯೋಜಿಸಿದ್ದ ಸಿದ್ದಿಕಿ ಮಾತನಾಡುತ್ತಾ, ಶಾರೂಖ್ ಮತ್ತು ಸಲ್ಮಾನಿಗೆ ಬಾಲ್ಯದ ಸ್ನೇಹಿತರು ತುಂಬಾ ಜನರಿದ್ದಾರೆ. ಅವರೆನ್ನಲರನ್ನೂ ಇಬ್ಬರೂ ಭೇಟಿ ಮಾಡಿ ಬಾಲ್ಯದ ನೆನಪನ್ನು ಹಂಚಿಕೊಂಡರು ಎಂದಿದ್ದಾರೆ.

ಇಫ್ತಾರ್ ಕೂಟದ ಗ್ಯಾಲರಿ

ಮುಂಬೈ ಇಫ್ತಾರ್ ಕೂಟದಲ್ಲಿ ಸಲ್ಲು, ಶಾರೂಖ್

ಕಾರ್ಯಕ್ರಮ ಆಯೋಜಿಸಿದ್ದ ಸಿದ್ದಿಕಿ ದೈನಿಕವೊಂದರ ಜೊತೆ ಮಾತನಾಡುತ್ತಾ, ಬಾಲಿವುಡ್ ಜಗತ್ತಿನ ಇಬ್ಬರು ಪ್ರಮುಖ ನಟರು ದುಸ್ಮನ್ ಮೆರೆತು ಕೂಟದಲ್ಲಿ ಬೆರೆತಿದ್ದು ನನಗೆ ಖುಷಿ ತಂದಿದೆ ಎಂದಿದ್ದಾರೆ.

ಕಾರ್ಯಕ್ರಮದ ರೂವಾರಿ ಸಿದ್ದಿಕಿ

ತನ್ನ ಬಾಲ್ಯದ ಗೆಳೆಯರ ಜೊತೆ ಮಾತನಾಡುತ್ತಿದ್ದ ಶಾರೂಖ್ ಖಾನ್ ಬಳಿ ಸಲ್ಮಾನ್ ಅವರನ್ನು ಸಿದ್ದಿಕಿ ಕರೆತಂದರು. ಇಬ್ಬರೂ ಒಬ್ಬರೊನ್ನಬ್ಬರನ್ನು ಅಪ್ಪಿಕೊಂಡು, ನಗೆ ಬೀರಿದರು. ಅಲ್ಲಿ ನೆರೆತಿದ್ದ ಎಲ್ಲರೂ ಕಾತುರದಿಂದ ಆ ಕ್ಷಣವನ್ನು ವೀಕ್ಷಿಸುತ್ತಿದ್ದರು.

ಸಿದ್ದಿಕಿ ಜೊತೆ ಸಲ್ಲು, ಶಾರೂಖ್

ನಂತರ ಇಬ್ಬರೂ ನಟರು ಶಾಸಕ ಸಿದ್ದಿಕಿ ಜೊತೆ ಫೋಟೋ ಸೆಸ್ಸನಿಗೆ ಪೋಸು ಕೊಟ್ಟರು. ಇಬ್ಬರೂ ನಟರೂ ತುಂಬಾ ಖುಷಿಯಿಂದ ಇರುವುದು ಕಂಡು ಬಂತು.

ಒಂದು ಕಾಲದ ಆಪ್ತಮಿತ್ರರು

ಶಾರೂಖ್ ಮತ್ತು ಸಲ್ಮಾನ್ ಒಂದು ಕಾಲದ ಆಪ್ತಮಿತ್ರರು, ಅದಕ್ಕಿಂತ ಹೆಚ್ಚಾಗಿ ಸಹೋದರರಂತಿದ್ದರು. ಕೆಬಿಸಿ ಮೂರನೇ ಆವೃತ್ತಿಯಲ್ಲಿ ಈ ಮಾತನ್ನು ಶಾರೂಖ್ ಕೂಡಾ ಉಚ್ಚರಿಸಿದ್ದರು.

ಇಬ್ಬರ ನಡುವೆ ದುಸ್ಮನಿ

ಆರು ವರ್ಷಗಳ ಹಿಂದೆ ಕತ್ರಿನಾ ಕೈಫ್ ಹುಟ್ಟು ಹಬ್ಬದ ದಿನದಂದು ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಅಂದಿನಿಂದ ಇಬ್ಬರೂ ಬದ್ದ ವೈರಿಗಳಂತೆ ನಡೆದು ಕೊಳ್ಳುತ್ತಿದ್ದರು.

English summary
Shahrukh and Salman Khan hugged each other at Mumbai's Iftar party. MLA Baba Siddique hosted an Iftar party in Mumbai on Sunday evening, 21st July. Shahrukh, who was already present at the party was hugged by Salman who joined later.
Please Wait while comments are loading...