For Quick Alerts
  ALLOW NOTIFICATIONS  
  For Daily Alerts

  ವಿನಾಯಕನ ಪೂಜಿಸಿದ್ದಕ್ಕೆ ಶಾರುಖ್ ಖಾನ್ ಮೇಲೆ ಟ್ರೋಲ್ ದಾಳಿ

  By ಫಿಲ್ಮಿಬೀಟ್ ಡೆಸ್ಕ್
  |

  ಶಾರುಖ್ ಖಾನ್‌ ಏನು ಮಾಡಿದರೂ ಸುದ್ದಿಯೇ. ಶಾರುಖ್ ಖಾನ್ ಸುಮ್ಮನಿದ್ದರೆ ಅದೂ ಸುದ್ದಿಯೇ. ಶಾರುಖ್ ಅನ್ನು ಪ್ರೀತಿಸುವವರ ಸಂಖ್ಯೆ ಅಸಂಖ್ಯ, ದ್ವೇಷಿಸುವವರ ಸಂಖ್ಯೆ ಕಡಿಮೆಯೇನೂ ಇಲ್ಲ. ದ್ವೇಷಕ್ಕೆ ಕಾರಣಗಳು ಭಿನ್ನ-ಭಿನ್ನ.

  ಶಾರುಖ್ ಖಾನ್ ದೇವರನ್ನು ವಿಪರೀತ ನಂಬುವ ವ್ಯಕ್ತಿ, ಅವರೇ ಹೇಳಿಕೊಂಡಿರುವಂತೆ ದೇವರಿಗೆ ಅವರು ಭಯ ಪಡುತ್ತಾರೆ. ಏನೇ ಕಷ್ಟ ಬಂದರೂ 'ದುವಾ' (ದೇವರಿಗೆ ಮನವಿ) ಮಾಡುತ್ತಾರೆ. ಇಸ್ಲಾಂ ಧರ್ಮೀಯರಾದರೂ ಸರ್ವಧರ್ಮಗಳ ಬಗ್ಗೆ ಪ್ರೀತಿ, ನಂಬಿಕೆ, ಗೌರವ ಹೊಂದಿದ್ದಾರೆ ಶಾರುಖ್.

  ಇದೀಗ ಶಾರುಖ್ ಖಾನ್ ಮಾಡಿರುವ ಒಳ್ಳೆಯ ಕಾರ್ಯಕ್ಕೂ ಸಾಮಾಜಿಕ ಜಾಲತಾಣದಲ್ಲಿ ಮೂದಲಿಕೆ ಎದುರಿಸಬೇಕಾಗಿ ಬಂದಿದೆ. ಶಾರುಖ್ ಖಾನ್ ಇತ್ತೀಚೆಗೆ ತಮ್ಮ ಮನೆಯಲ್ಲಿ ಗಣೇಶನ ಹಬ್ಬ ಆಚರಣೆ ಮಾಡಿದರು. ಆದರೆ ಇದು ಸಹ ಹಲವರ ಕೆಂಗಣ್ಣಿಗೆ ಗುರಿಯಾಗಿದೆ, ಗಣೇಶನ ಹಬ್ಬ ಆಚರಿಸಿದ್ದಕ್ಕೆ ಶಾರುಖ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಬೈಗುಳ ಕೇಳಬೇಕಾಗಿ ಬಂದಿದೆ.

  ಗಣೇಶ ಹಬ್ಬ ಆಚರಿಸಿದ್ದಕ್ಕೆ ಟೀಕೆ

  ಗಣೇಶ ಹಬ್ಬ ಆಚರಿಸಿದ್ದಕ್ಕೆ ಟೀಕೆ

  ಶಾರುಖ್ ಖಾನ್ ಇಸ್ಲಾಂ ಧರ್ಮದವರಾಗಿ ಗಣೇಶನ ಹಬ್ಬ ಆಚರಣೆ ಮಾಡಿದ್ದಕ್ಕೆ ಕೆಲವರು ಆಕ್ಷೇಪ ಎತ್ತಿದ್ದಾರೆ. ಇಸ್ಲಾಂ ಧರ್ಮದಲ್ಲಿ ಮೂರ್ತಿ ಪೂಜೆ ಮಾಡುವಂತಿಲ್ಲ. ಹಾಗಿದ್ದೂ ನೀವು ಗಣೇಶನ ಮೂರ್ತಿಯನ್ನು ಪೂಜಿಸಿದ್ದೀರಿ, ನೀವು ಇಸ್ಲಾಂಗೆ ಅಪಮಾನ ಮಾಡಿದ್ದೀರಿ ಎಂದು ಕೆಲವರು ಶಾರುಖ್ ಹಂಚಿಕೊಂಡಿದ್ದ ಗಣೇಶನ ವಿಗ್ರಹದ ಚಿತ್ರಕ್ಕೆ ಕಮೆಂಟ್ ಮಾಡಿದ್ದಾರೆ.

  ನಿಮ್ಮ ಮೇಲಿನ ಗೌರವ ಹೊರಟುಹೋಯಿತು ಎಂದ ಅಭಿಮಾನಿ

  ನಿಮ್ಮ ಮೇಲಿನ ಗೌರವ ಹೊರಟುಹೋಯಿತು ಎಂದ ಅಭಿಮಾನಿ

  ''ಇಡೀಯ ವಿಶ್ವವನ್ನೇ ಅಲ್ಲಾ ಸೃಷ್ಟಿ ಮಾಡಿದ್ದಾನೆ, ಇನ್ನುಳಿದದ್ದನ್ನೆಲ್ಲ ಮಾನವರು ಸೃಷ್ಟಿ ಮಾಡಿರುವುದು. ನೀನು ಖಂಡಿತವಾಗಿ ಧರ್ಮಭ್ರಷ್ಟ'' ಎಂದಿದ್ದಾನೊಬ್ಬ ನೆಟ್ಟಿಗ. ಶಾರುಖ್ ಅಭಿಮಾನಿಯೊಬ್ಬ ಕಮೆಂಟ್ ಮಾಡಿ, ''ನಾನು ನಿಮ್ಮ ಅಭಿಮಾನಿಯಾಗಿದ್ದೆ ಆದರೆ ಆದರೆ ಈ ಟ್ವೀಟ್‌ನ ಬಳಿಕ ನಿಮ್ಮ ಮೇಲಿನ ಗೌರವವನ್ನು ನಾನು ಕಳೆದುಕೊಂಡೆ. ನಿಮ್ಮ ಧರ್ಮಕ್ಕೆ ನೀವು ನಿಷ್ಠರಾಗಿಲ್ಲದೆ ಬೇರೆಯವರನ್ನು ಮೆಚ್ಚಿಸಲು ಹೀಗೆ ಮಾಡಿರುವುದು ಸರಿಯಲ್ಲ. ಕೂಡಲೆ ಕ್ಷಮೆ ಕೇಳಿ'' ಎಂದಿದ್ದಾನೆ.

  ಹಲವು ಹಿಂದು ಹಬ್ಬಗಳನ್ನು ಶಾರುಖ್ ಆಚರಿಸುತ್ತಾರೆ

  ಹಲವು ಹಿಂದು ಹಬ್ಬಗಳನ್ನು ಶಾರುಖ್ ಆಚರಿಸುತ್ತಾರೆ

  ಶಾರುಖ್ ಖಾನ್ ಹಂಚಿಕೊಂಡಿರುವ ಚಿತ್ರಕ್ಕೆ ಹಲವು ನೆಗೆಟಿವ್ ಕಮೆಂಟ್‌ಗಳು ಬಂದಿವೆ, ಜೊತೆಗೆ ಒಳ್ಳೆಯ ಕಮೆಂಟ್‌ಗಳೂ ಬಂದಿವೆ, ''ಮುಸ್ಲಿಂ ಆಗಿದ್ದರೂ ಬೇರೆ ಧರ್ಮಗಳನ್ನು ದ್ವೇಷಿಸದೆ ಧರ್ಮಾತೀತತೆಯನ್ನು, ಸಹ ಧರ್ಮ ಪರಿಪಾಲನೆಯನ್ನು ಪ್ರಚಾರ ಮಾಡುತ್ತಿದ್ದಾರೆ ಶಾರುಖ್‌ ಖಾನ್‌, ಅವರ ಈ ಒಳ್ಳೆಯ ನಡೆಯನ್ನು ಟೀಕಿಸಬೇಡಿ'' ಎಂದೊಬ್ಬರು ಕಮೆಂಟ್ ಮಾಡಿದ್ದಾರೆ. ''ನಾನು ನೋಡಿದ ಜಾತ್ಯಾತೀತ ಸೆಲೆಬ್ರಿಟಿಗಳಲ್ಲಿ ಶಾರುಖ್ ಖಾನ್ ಒಬ್ಬರು, ಹಿಂದು ಧರ್ಮದ ಹಬ್ಬಗಳನ್ನು ಅವರು ಪೂರ್ಣ ಮನಸ್ಸಿನಿಂದ ಆಚರಿಸುತ್ತಾರೆ. ಆ ಮೂಲಕ ಭಾರತದ ಜಾತ್ಯಾತೀತತೆಯನ್ನು, ಸರ್ವ ಧರ್ಮ ಸಹಿಷ್ಣುತೆಯನ್ನು ವಿಶ್ವಕ್ಕೆ ಪರಿಚಯ ಮಾಡಿಕೊಡುತ್ತಾರೆ. ಅವರೊಬ್ಬ ನಿಜವಾದ ಭಾರತೀಯ'' ಎಂದಿದ್ದಾರೆ ಮತ್ತೊಬ್ಬರು.

  ಶಾರುಖ್ ಪತ್ನಿ ಗೌರಿ ಹಿಂದು ಸಂಪ್ರದಾಯ ಪಾಲಿಸುತ್ತಾರೆ

  ಶಾರುಖ್ ಪತ್ನಿ ಗೌರಿ ಹಿಂದು ಸಂಪ್ರದಾಯ ಪಾಲಿಸುತ್ತಾರೆ

  ಶಾರುಖ್ ಖಾನ್ ಮುಸ್ಲಿಂ ಆದರೂ ಅವರ ಪತ್ನಿ ಗೌರಿ ಖಾನ್ ಹಿಂದು. ಗೌರಿ ಖಾನ್ ಹಿಂದು ಧರ್ಮ ಪಾಲಿಸುತ್ತಾರೆ. ಶಾರುಖ್ ಮನೆ ಮನ್ನತ್‌ನಲ್ಲಿ ದೊಡ್ಡ ಪೂಜಾಗೃಹ ಸಹ ಇದೆ. ಶಾರುಖ್ ಖಾನ್ ಪ್ರತಿ ವರ್ಷವೂ ಗಣೇಶನ ಹಬ್ಬ, ದೀಪಾವಳಿ, ಹೋಳಿ ಹಾಗೂ ಇನ್ನೂ ಕೆಲವು ಹಿಂದು ಹಬ್ಬಗಳನ್ನು ತಮ್ಮ ಮನೆ ಯಲ್ಲಿ ಆಚರಣೆ ಮಾಡುತ್ತಾರೆ. ಶಾರುಖ್ ಖಾನ್ ಮಾತ್ರವೇ ಅಲ್ಲದೆ ಸಲ್ಮಾನ್ ಖಾನ್ ಸಹ ಪ್ರತಿ ವರ್ಷ ತಪ್ಪದೆ ತಮ್ಮ ಮನೆಯಲ್ಲಿ ಗಣೇಶನ ವಿಗ್ರಹ ಇರಿಸಿ ಅದಕ್ಕೆ ಪೂಜಿಸುತ್ತಾರೆ. ಸಲ್ಮಾನ್ ಖಾನ್ ತಮ್ಮ ಮನೆಯಲ್ಲಿ ಇರಿಸಲಾಗಿದ್ದ ಗಣೇಶ ವಿಗ್ರಹದ ವಿಸರ್ಜನೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸಲ್ಮಾನ್ ಹಾಗೂ ಅವರ ಸಹೋದರರು ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡಿದರು. ಎರಡು ದಿನದ ಹಿಂದೆ ನಡೆದ ಈ ಸಮಾರಂಭದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು, ಸಲ್ಮಾನ್ ಖಾನ್‌ ಸಹ ಈ ಕುರಿತು ಟೀಕೆಗಳನ್ನು ಎದುರಿಸಬೇಕಾಯ್ತು.

  English summary
  Sharukh Khan trolled on social media for worshiping god Ganesha in his home. Sharukh Khan posted picture of lord Ganesha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X