For Quick Alerts
  ALLOW NOTIFICATIONS  
  For Daily Alerts

  ಶಿಲ್ಪಾ ಶೆಟ್ಟಿ ವಿರುದ್ಧ ಶೆರ್ಲಿನ್ ಚೋಪ್ರಾ ವಾಗ್ದಾಳಿ

  |

  ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಕೆಲವು ದಿನಗಳ ಹಿಂದಷ್ಟೆ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಹಾಗೂ ಇನ್ನಿತರ ಆರೋಪಿಗಳ ವಿರುದ್ಧ ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

  ಪ್ರಕರಣಕ್ಕೆ ಸಂಬಂಧಿಸಿದಂತೆ 43 ಜನರ ಹೇಳಿಕೆಗಳನ್ನು ದೋಷಾರೋಪ ಪಟ್ಟಿಯಲ್ಲಿ ಪೊಲೀಸರು ದಾಖಲಿಸಿದ್ದಾರೆ. ಇದರಲ್ಲಿ ನಟಿ, ರಾಜ್ ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿಯ ಹೇಳಿಕೆಯೂ ದಾಖಲಾಗಿದೆ.

  ಪತಿಯ ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಪೊಲೀಸರೆದುರು ಮಾತನಾಡಿರುವ ಶಿಲ್ಪಾ ಶೆಟ್ಟಿ, ''ನನಗೆ ರಾಜ್ ಕುಂದ್ರಾರ ವ್ಯವಾಹರದ ಬಗ್ಗೆ ಮಾಹಿತಿ ಇರಲಿಲ್ಲ. ನಾನು ವಿಯಾನ್ ಸಂಸ್ಥೆಯಿಂದ 2020ರಲ್ಲಿಯೇ ರಾಜೀನಾಮೆ ನೀಡಿ ಹೊರಗೆ ಬಂದಿದ್ದೆ ಎಂದಿದ್ದಾರೆ. ನಾನು ನನ್ನ ಕೆಲಸದಲ್ಲಿ ಬ್ಯುಸಿಯಾಗಿರುತ್ತಿದ್ದೆ ಹಾಗಾಗಿ ನನಗೆ ಅವರ ವ್ಯವಹಾರಗಳ ಬಗ್ಗೆ ಮಾಹಿತಿ ಇಲ್ಲ. ಹಾಟ್‌ಶಾಟ್ಸ್‌ ಅಪ್ಲಿಕೇಶನ್‌ ಬಗ್ಗೆಯೂ ನನಗೆ ಗೊತ್ತಿಲ್ಲ'' ಎಂದಿದ್ದಾರೆ.

  ಆದರೆ ಇದೀಗ ನಟಿ ಶೆರ್ಲಿನ್ ಚೋಪ್ರಾ, ಶಿಲ್ಪಾ ಶೆಟ್ಟಿಯ ಹೇಳಿಕೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದು, ವಿಡಿಯೋ ಒಂದನ್ನು ಪ್ರಕಟಿಸಿ ವ್ಯಂಗ್ಯವಾಗಿ ಶಿಲ್ಪಾ ಶೆಟ್ಟಿಯ ಕಾಲೆಳೆದಿದ್ದಾರೆ.

  ಅಕ್ಕನಿಗೆ ಏನೂ ಗೊತ್ತಿರಲಿಲ್ಲವೆ? ಶೆರ್ಲಿನ್ ಚೋಪ್ರಾ ವ್ಯಂಗ್ಯ

  ಅಕ್ಕನಿಗೆ ಏನೂ ಗೊತ್ತಿರಲಿಲ್ಲವೆ? ಶೆರ್ಲಿನ್ ಚೋಪ್ರಾ ವ್ಯಂಗ್ಯ

  ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಪ್ರಕಟಿಸಿರುವ ಶೆರ್ಲಿನ್ ಚೋಪ್ರಾ, ವ್ಯಾಯಾಮ ಮಾಡುತ್ತಲೇ, ''ಕೆಲವು ಮಾಧ್ಯಮಗಳ ವರದಿ ಪ್ರಕಾರ ಅಕ್ಕನಿಗೆ (ಶಿಲ್ಪಾ ಶೆಟ್ಟಿ) ತನ್ನ ಪತಿ (ರಾಜ್ ಕುಂದ್ರಾ) ಮಾಡುತ್ತಿದ್ದ ನೀಚ ಕೃತ್ಯಗಳು ಗೊತ್ತಿರಲಿಲ್ಲವಂತೆ. ಅಲ್ಲದೆ ಆಕೆಯ ಪತಿದೇವರ ಅಷ್ಟೋಂದು ಸಂಪತ್ತಿನ ಮೂಲ ಯಾವುದೆಂದು ಸಹ ಗೊತ್ತಿಲ್ಲವಂತೆ. ಅಕ್ಕನ ಈ ಮಾತಿನಲ್ಲಿ ಎಷ್ಟು ಸತ್ಯಾಂತ ಇದೆ ಎಂಬುದನ್ನು ನೀವೆ ಊಹಿಸಬಹುದು. ಇದನ್ನೇ ಹೇಳುವುದು 'ಮುಗ್ದನಾಗಿದ್ದು ಸಂಪತ್ತು ಅನುಭವಿಸಿದು'' ಎಂದು ಹೇಳಿದ್ದಾರೆ.

  ನನ್ನ ವಿಡಿಯೋ, ಚಿತ್ರಗಳನ್ನು ಶಿಲ್ಪಾ ಶೆಟ್ಟಿ ಮೆಚ್ಚಿದ್ದರು: ಶೆರ್ಲಿನ್

  ನನ್ನ ವಿಡಿಯೋ, ಚಿತ್ರಗಳನ್ನು ಶಿಲ್ಪಾ ಶೆಟ್ಟಿ ಮೆಚ್ಚಿದ್ದರು: ಶೆರ್ಲಿನ್

  ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ರಾಜ್ ಕುಂದ್ರಾ ಬಂಧನಕ್ಕೆ ಒಳಗಾದಾಗ ನಟಿ ಶೆರ್ಲಿನ್ ಚೋಪ್ರಾ ಸಹ ರಾಜ್ ಕುಂದ್ರಾ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ತಮ್ಮಿಂದ ಅಶ್ಲೀಲ ವಿಡಿಯೋವನ್ನು ರಾಜ್ ಕುಂದ್ರಾ ಪಡೆದುಕೊಂಡಿದ್ದರು ಎಂದು ಶೆರ್ಲಿನ್ ಹೇಳಿದ್ದರು. ಲೈಂಗಿಕ ದೌರ್ಜನ್ಯದ ಆರೋಪವನ್ನೂ ಮಾಡಿದ್ದರು. ಜೊತೆಗೆ ತನ್ನ ವಿಡಿಯೋಗಳನ್ನು ಶಿಲ್ಪಾ ಶೆಟ್ಟಿ ನೋಡಿ ಮೆಚ್ಚಿಕೊಂಡಿದ್ದರು ಎಂದು ಸಹ ಶರ್ಲಿನ್ ಹೇಳಿದ್ದರು.

  ರಾಜ್ ಕುಂದ್ರಾಯಿಂದ ತಪ್ಪಿಸಿಕೊಳ್ಳಲು ಬಾತ್‌ರೂಮ್‌ನಲ್ಲಿ ಅಡಗಿಕೊಂಡಿದ್ದೆ

  ರಾಜ್ ಕುಂದ್ರಾಯಿಂದ ತಪ್ಪಿಸಿಕೊಳ್ಳಲು ಬಾತ್‌ರೂಮ್‌ನಲ್ಲಿ ಅಡಗಿಕೊಂಡಿದ್ದೆ

  ರಾಜ್ ಕುಂದ್ರಾ ಬಂಧನವಾದ ಬಳಿಕ ರಾಜ್ ಕುಂದ್ರಾ ವಿರುದ್ಧ ಆರೋಪ ಮಾಡಿದ್ದ ತನ್ನ ಖಾಸಗಿ ಭಾಗಗಳನ್ನು ವಿಡಿಯೋದಲ್ಲಿ ತೋರಿಸುವುದಿಲ್ಲ ಎಂದು ನಂಬಿಸಿ ನಗ್ನವಾಗಿ ವಿಡಿಯೋ ಚಿತ್ರೀಕರಿಸಿದರು. ಆಮೇಲೆ ನನ್ನ ಅನುಮತಿ ಪಡೆಯದೆ, ನಗ್ನ ವಿಡಿಯೋವನ್ನು ಹಾಟ್‌ಶಾಟ್ ಆಪ್‌ನಲ್ಲಿ ಹಾಗೂ ಇತರೆ ಆಪ್‌ನಲ್ಲಿ ಅಪ್‌ಲೌಡ್ ಮಾಡಲಾಗಿದೆ. ಸ್ನೇಹಿತರ ಮೂಲಕ ನನಗೆ ಈ ವಿಷಯ ತಿಳಿಯಿತು ಎಂದಿದ್ದರು. ಮೀಟಿಂಗ್ ಎಂದು ಕರೆದು ನನ್ನನ್ನ ಬಲವಂತವಾಗಿ ಕಿಸ್ ಮಾಡಲು ಯತ್ನಿಸಿದರು. ಇದಕ್ಕೆ ನಾನು ವಿರೋಧಿಸಿದೆ. ಆಗ ನಮ್ಮಿಬ್ಬರ ನಡುವೆ ಜಗಳ ಶುರುವಾಯಿತು. ನನ್ನನ್ನು ಎಳೆದಾಡಿದರು. ಭಯದಿಂದ ನಾನು ಕೇಳಿಕೊಂಡೆ. ಆದರೂ ರಾಜ್ ಕುಂದ್ರಾ ಸುಮ್ಮನಾಗಲಿಲ್ಲ. ಅವರಿಂದ ತಪ್ಪಿಸಿಕೊಳ್ಳಲು ನಾನು ಬಾತ್‌ರೂಂನಲ್ಲಿ ಅಡಗಿ ಕುಳಿತಿದ್ದೆ ಎಂದು ಸಹ ಶೆರ್ಲಿನ್ ಚೋಪ್ರಾ ಹೇಳಿದ್ದರು.

  ಏನಿದು ಪ್ರಕರಣ?

  ಏನಿದು ಪ್ರಕರಣ?

  ಅಶ್ಲೀಲ ವಿಡಿಯೋ ನಿರ್ಮಾಣ ಮತ್ತು ಪ್ರಸಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ರಾಜ್ ಕುಂದ್ರಾ ಅನ್ನು ಜುಲೈ 19ರಂದು ಮುಂಬೈ ಪೊಲೀಸರು ಬಂಧಿಸಿದ್ದರು. ಸ್ಥಳೀಯ ಮಾಡೆಲ್‌ಗಳು, ನಟಿಯರನ್ನು ಬಳಸಿ ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಅದನ್ನು ವಿದೇಶದಲ್ಲಿರುವ ತಮ್ಮ ಸಹೋದರ ಸಂಬಂಧಿಯ ಸಂಸ್ಥೆಯ ಮೂಲಕ ಹಾಟ್‌ಶಾಟ್ಸ್‌ ಆಪ್‌ಗೆ ಅಪ್‌ಲೋಡ್ ಮಾಡಿಸಿ ಪ್ರತಿದಿನ ಲಕ್ಷಾಂತರ ಮೊತ್ತದ ಹಣವನ್ನು ರಾಜ್ ಕುಂದ್ರಾ ಸಂಪಾದನೆ ಮಾಡುತ್ತಿದ್ದರು ಎಂದು ಮುಂಬೈ ಪೊಲೀಸರು ಆರೋಪ ಮಾಡಿದ್ದಾರೆ. ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿಗೆ ಮುಂಬೈ ಪೊಲೀಸರು ಕ್ಲೀನ್ ಚಿಟ್ ನೀಡಿದ್ದಾರೆ.

  English summary
  Actress Sherlyn Chopra takes a dig at Shilpa Shetty's statement in Raj Kundra's case. Shilpa Shetty said she knows nothing about Raj Kundra's business.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X