»   » ಶಿಖಾ ಕತ್ತು ಕತ್ತರಿಸಿಕೊಂಡಾಗ ಮಾನವೀಯತೆ ಕೊಲೆಯಾಗಿತ್ತು

ಶಿಖಾ ಕತ್ತು ಕತ್ತರಿಸಿಕೊಂಡಾಗ ಮಾನವೀಯತೆ ಕೊಲೆಯಾಗಿತ್ತು

Posted By:
Subscribe to Filmibeat Kannada

ಕೊನೆಯುಸಿರೆಳೆಯುವ ಮುನ್ನ ವೈದ್ಯರೊಬ್ಬರ ಹೆಸರನ್ನು ಹೇಳಿ ಪ್ರಾಣನೀಗಿದ ಮಾಡೆಲ್ ಕಂ ನಟಿ ಶಿಖಾ ಜೋಶಿ ಪ್ರಕರಣದ ತನಿಖೆ ತಣ್ಣಗೆ ನಡೆಯುತ್ತಿದ್ದರೆ, ಆಕೆ ಕೊರಳನ್ನು ಚಾಕುವಿನಿಂದ ಕತ್ತರಿಸಿಕೊಂಡ ಸಂದರ್ಭದಲ್ಲಿ ಮೊಬೈಲಲ್ಲಿ ಚಿತ್ರೀಕರಿಸಿಕೊಂಡ ದೃಶ್ಯ ಬೆಚ್ಚಿಬೀಳಿಸುವಂತಿದೆ.

ಶಿಖಾ ಜೋಶಿ ಕತ್ತನ್ನು ಚಾಕುವಿನಿಂದ ಕತ್ತರಿಸಿಕೊಂಡು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದಾಗ ಆಕೆ ಗೆಳತಿ, ಮನೆ ಮಾಲಕಿ ವಿಡಿಯೋ ಮಾಡಿಕೊಳ್ಳುತ್ತ, ಇದರ ಹಿಂದೆ ಯಾರ್ಯಾರ ಕೈವಾಡವಿದೆ ತಿಳಿಸು, ಪೊಲೀಸರಿಗೆ ತಿಳಿಸೋಣ ಅಂತ ಕೂಲಾಗಿ ಕೇಳುತ್ತಿರುವುದು ಇನ್ನೂ ದಂಗುಬಡಿಸುವಂತಿದೆ.

ಕತ್ತನ್ನು ಕತ್ತರಿಸಿಕೊಂಡು ಮಾತಾಡಲು ಪರದಾಡುತ್ತಲೇ ಶಿಖಾ ಜೋಶಿ ಅವರು ಡಾ. ವಿಜಯ್ ಶರ್ಮಾ ಎಂಬಾತನ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಕೂಡ ಶಿಖಾ ಅವರು ಇದೇ ಶರ್ಮಾ ಹೆಸರನ್ನು ಪ್ರಸ್ತಾಪಿಸಿ ಕೊನೆಯುಸಿರೆಳೆದರು. ಇದೆಲ್ಲ ನೋಡಿದರೆ ಶಿಖಾ ಗೆಳತಿಯ ಮೇಲೆ ಕೂಡ ಅನುಮಾನ ಬರದೆ ಇರದು. [ಬದುಕಿನಲ್ಲಿ ಫೇಲ್ ಆದ 'ಬಿಎ ಪಾಸ್' ಚಿತ್ರನಟಿ!]

ಬಚ್ಚಲುಮನೆಯಲ್ಲಿ ಬಿದ್ದು ಒದ್ದಾಡುತ್ತಿದ್ದಾಗ ಆಕೆಯನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸುವ ಬದಲು, ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುತ್ತ ಆಕೆಯ ಹೇಳಿಕೆಗಳನ್ನು ದಾಖಲಿಸುವ ಅಗತ್ಯವಿತ್ತೆ? ಪೊಲೀಸರಿಗೆ ಸಾಕ್ಷ್ಯ ಒದಗಿಸಿಕೊಡುವ ಬದಲು ಆಕೆಯನ್ನು ಕೂಡಲೆ ಆಸ್ಪತ್ರೆಗೆ ಸಾಗಿಸಿ ಪ್ರಾಣ ಉಳಿಸಲು ಯತ್ನಿಸಬಹುದಿತ್ತಲ್ಲವೆ? ಗೆಳತಿಯಲ್ಲಿ ಮನುಷ್ಯತ್ವ ಸತ್ತುಹೋಗಿತ್ತೆ?

ವಿಡಿಯೋದಲ್ಲಿ ಕತ್ತಿನ ಬಳಿ ಬಟ್ಟೆಯನ್ನು ಹಿಡಿದುಕೊಂಡಿದ್ದ ಶಿಖಾ ಅವರು ಡಾ. ವಿಜಯ್ ಶರ್ಮಾ ಮತ್ತು ಕೆಲ ಮದುವೆಯಾದ ಪುರುಷರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಮನೆ ಮಾಲಕಿ ವಿಡಿಯೋ ಚಿತ್ರೀಕರಣ ಮಾಡುತ್ತ ಕಾಲಹರಣ ಮಾಡುತ್ತಿರುವಾಗ ನೆರೆಹೊರೆಯವರು ಬಂದು ಆಸ್ಪತ್ರೆಗೆ ಸಾಗಿಸಲು ಹೇಳುತ್ತಾರೆ. ಆದರೆ, ಅಷ್ಟೊತ್ತಿಗಾಗಲೆ ತುಂಬಾ ತಡವಾಗಿತ್ತು, ಶಿಖಾ ಪ್ರಾಣಪಕ್ಷಿ ಹಾರಿಹೋಗಿತ್ತು.

ಸೂಚನೆ : ಇಲ್ಲಿರುವ ವಿಡಿಯೋ ಭಯಾನಕವಾಗಿದ್ದು, ಹೃದಯ ಗಟ್ಟಿ ಇರುವವರು ಮಾತ್ರ ನೋಡಬೇಕಾಗಿ ವಿನಂತಿ.

Shikha Joshi's Suicide Video: Does Humanity Exist?
English summary
While, actress Shikha Joshi's suicide case is being interrogated by the police, a video has come up in which she is seen recording her last statement. The video shows Shikha Joshi lying in a pool of blood as she slit her throat and a lady trying to record her last words.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada