»   » 'ಶೋಲೆ 3D' ಚಿತ್ರ ಬಿಡುಗಡೆಗೆ ಮುಹೂರ್ತ ಬದಲು

'ಶೋಲೆ 3D' ಚಿತ್ರ ಬಿಡುಗಡೆಗೆ ಮುಹೂರ್ತ ಬದಲು

Posted By:
Subscribe to Filmibeat Kannada

ಎಲ್ಲಾ ಅಂದುಕೊಂಡಂತೆ, ಊಹಿಸಿದಂತೆ ಆಗಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆಗೆ ನಾಂದಿ ಹಾಡಿದ 'ಶೋಲೆ' 3D ಚಿತ್ರ
ಇದೇ ಶುಕ್ರವಾರ (ಅ.11) ತೆರೆಯ ಮೇಲೆ ಅಬ್ಬರಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ.

ಬಿಗ್ ಬಿ ಅಮಿತಾಬ್ ಬಚ್ಚನ್, ಧರ್ಮೇಂದ್ರ, ಹೇಮಾ ಮಾಲಿನಿ ಸೇರಿದಂತೆ ಹಲವರ ವೃತ್ತಿ ಬದುಕಿನಲ್ಲಿ ಹೊಸ ಅಧ್ಯಾಯ ತೆರೆದ ಚಿತ್ರ 'ಶೋಲೆ'. ಇದೇ ಅ.11ಕ್ಕೆ ಅಮಿತಾಬ್ 71ನೇ ವಸಂತಕ್ಕೆ ಅಡಿಯಿಡುತ್ತಿದ್ದಾರೆ. ಈ ಸಂದರ್ಭದಲ್ಲಿ ಈ ಶೋಲೆ 3D ಚಿತ್ರ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು.

Sholay

ಈಗ ಚಿತ್ರವನ್ನು ಜನವರಿ 2014ಕ್ಕೆ ಬಿಡುಗಡೆ ಮಾಡಲು ಮುಂದಾಗಿದ್ದಾರೆ ಚಿತ್ರದ ಮೇಕರ್ಸ್. "ಇನ್ನೂ ಡೇಟ್ ಫಿಕ್ಸ್ ಆಗಿಲ್ಲ. ಚಿತ್ರಮಂದಿರ ಮಾಲೀಕರ ಜೊತೆ ಮಾತುಕತೆ ನಡೆದಿದೆ. ಜನವರಿ 2014ರಲ್ಲಿ ಬಿಡುಗಡೆ ಮಾಡುತ್ತೇವೆ" ಎಂದಿದ್ದಾರೆ ಚಿತ್ರವನ್ನು ಸಮರ್ಪಿಸುತ್ತಿರುವ ಜಯಂತಿಲಾಲ್ ಗಡ.

ಶೋಲೆ 3D ಚಿತ್ರಕ್ಕಾಗಿ ಮೂರು ವರ್ಷಗಳನ್ನು ವ್ಯಯಿಸಲಾಗಿದೆ. ಈ ಚಿತ್ರಕ್ಕೆ 'ಚೆನ್ನೈ ಎಕ್ಸ್ ಪ್ರೆಸ್' ನಂತೆ ಒಂದೇ ವಾರದಲ್ಲಿ ಬಿಗ್ ಓಪನಿಂಗ್ ಸಿಗದಿದ್ದರೂ ನಾಲ್ಕು ವಾರಗಳ ಕಾಲವಂತೂ ಬೇಕೆ ಬೇಕು ಎನ್ನುತ್ತಾರೆ ಚಿತ್ರದ ನಿರ್ಮಾಪಕರು. ಇನ್ನು ಶೋಲೆ ವಿಚಾರಕ್ಕೆ ಬರುವುದಾದರೆ...

ರಮೇಶ್ ಸಿಪ್ಪಿ ನಿರ್ದೇಶನದ ಈ ಚಿತ್ರ ಬಿಡುಗಡೆಯಾಗಿದ್ದು 1975ರಲ್ಲಿ. ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದಂತಹ ಮುದ್ರೆಯನ್ನು ಒತ್ತಿದಂತಹ ಚಿತ್ರ. ವೀರೂ ಪಾತ್ರದಲ್ಲಿ ಧರ್ಮೇಂದ್ರ ಹಾಗೂ ಜೈ ಪಾತ್ರದಲ್ಲಿ ಅಮಿತಾಬ್ ಅಮೋಘ ಅಭಿನಯ ನೀಡಿದ್ದರು. ಬಸಂತಿ ಪಾತ್ರದಲ್ಲಿ ಹೇಮಾ ಮಾಲಿನಿ ಅಭಿನಯಿಸಿರಲಿಲ್ಲ, ಬದಲಾಗಿ ಜೀವತುಂಬಿದ್ದರು.

ಗಬ್ಬರ್ ಸಿಂಗ್ ಪಾತ್ರದಲ್ಲಿ ಅಮ್ಜಾದ್ ಖಾನ್ ಅಬ್ಬರಿಸಿದ್ದರು. ಈ ಚಿತ್ರದಲ್ಲಿ ಅಭಿನಯಿಸಿದ್ದ ಪ್ರತಿಯೊಬ್ಬರೂ ತಮ್ಮ ತಮ್ಮ ಪಾತ್ರಗಳ ಮೂಲಕ ಖ್ಯಾತರಾದರು. ಈಗ ಬಿಡುಗಡೆಯಾಗುತ್ತಿರುವ ಶೋಲೆ 3D ಚಿತ್ರ ಅವರೆಲ್ಲರಿಗೂ ಮರುಜೀವ ಪ್ರಸಾದಿಸುತ್ತಿದೆ. ಇಂದಿನ ಯುವ ಪೀಳಿಗೆ 'ಶೋಲೆ' ಚಿತ್ರ ಮಿಸ್ ಮಾಡಿಕೊಂಡಿರಬಹುದು. ಅದನ್ನು 3Dಯಲ್ಲಿ ನೋಡುವ ಸೌಭಾಗ್ಯ ಈಗ ಸಿಗುತ್ತಿದೆ. (ಐಎಎನ್ಎಸ್)

English summary
The 3D version of the 1975 Bollywood classic Sholay, which was slated to release on megastar Amitabh Bachchan 's 71st birthday on October 11, is now likely to release in January 2014. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada