»   » ನಿರ್ಮಾಪಕರಿಗೆ ಸಿಹಿ ದ್ರಾಕ್ಷಿಯಾದ ಕ್ಯೂಟ್ ಶ್ರದ್ಧಾ

ನಿರ್ಮಾಪಕರಿಗೆ ಸಿಹಿ ದ್ರಾಕ್ಷಿಯಾದ ಕ್ಯೂಟ್ ಶ್ರದ್ಧಾ

Posted By:
Subscribe to Filmibeat Kannada

ಮುದ್ದು ಮುಖ, ಸಪೂರ ಮೈಕಟ್ಟು, ಪಡ್ಡೆಗಳ ಬಾಯಿಗೆ ಸಿಹಿ ಬೆಲ್ಲ ಬೀಳುವ ಹಾಗೆ ನಗುವ ಅಂದಗಾತಿ ನಟಿ ಶ್ರದ್ಧಾ ಕಪೂರ್. 'ಆಶಿಕಿ-2' ಚಿತ್ರದಿಂದ ಹರೆಯದ ಹುಡುಗರ ಪಾಲಿಗೆ ಡ್ರೀಮ್ ಗರ್ಲ್ ಆಗಿರುವ ಈ ಬೆಡಗಿ ಸದ್ಯ ಬಾಲಿವುಡ್ ನ ಬಹುಬೇಡಿಕೆಯ ನಟಿ.

'ಆಶಿಕಿ-2', 'ಏಕ್ ವಿಲನ್', 'ಹೈದರ್'...ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ನೀಡುತ್ತಾ ಬಂದಿರುವ ಶ್ರದ್ಧಾ ಕಪೂರ್, ಸದ್ಯ 'ಉನ್ಗ್ಲಿ', 'ಎಬಿಸಿಡಿ 2' ಸೇರಿದಂತೆ ಮೂರ್ನಾಲ್ಕು ಚಿತ್ರಗಳನ್ನ ಒಪ್ಪಿಕೊಂಡಿದ್ದಾರೆ.

Shraddha Kapoor's demand in Tollywood

ದುರಹಂಕಾರ ಇಲ್ಲದೇ ಕಡಿಮೆ ಸಂಭಾವನೆಯಲ್ಲಿ ಹಿಟ್ ಸಿನಿಮಾ ಕೊಡುತ್ತಿರುವ ಶ್ರದ್ಧಾ, ಬರೀ ಬಾಲಿವುಡ್ ನಲ್ಲಿ ಮಾತ್ರ ಅಲ್ಲ, ಟಾಲಿವುಡ್ ಅಂಗಳದ ಎಲ್ಲಾ ನಿರ್ಮಾಪಕರಿಗೂ ಶ್ರದ್ಧಾ ಸಿಹಿ ದ್ರಾಕ್ಷಿ. ಹೇಗಾದರೂ ಮಾಡಿ, ಶ್ರದ್ಧಾರನ್ನ ತೆಲುಗಿಗೆ ಕರೆದುಕೊಂಡು ಬರಬೇಕು ಅಂತ ಅನೇಕ ಪ್ರೊಡ್ಯೂಸರ್ಸ್ ಮುಂಬೈನಲ್ಲಿ ಬೀಡುಬಿಟ್ಟಿದ್ದಾರಂತೆ. [ಬಾಲಿವುಡ್ ಗಿಂತ ಟಾಲಿವುಡ್ಡೇ ಲೇಸೆಂದ ಕತ್ರೀನಾ!]

ಶ್ರದ್ಧಾಗಾಗಿ ಎರಡು ಕೋಟಿ ಕೊಡುವುದಕ್ಕೂ ರೆಡಿಯಿರುವ ನಿರ್ಮಾಪಕರು ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಿದ್ದಾರೆ. ಹಾಗೆ ನೋಡಿದ್ರೆ, ಆಲಿಯಾ ಭಟ್ ಕೂಡ ಟಾಲಿವುಡ್ ಗೆ ಕಾಲಿಡುತ್ತಾರೆ ಅಂತ ಹೇಳಲಾಗುತ್ತಿತ್ತು. ಆದ್ರೆ, ಸಂಭಾವನೆ ವಿಷಯದಲ್ಲಿ ಕಿರಿಕ್ ಮಾಡಿಕೊಂಡ ಆಲಿಯಾ, ಕೆಳಗಿಳಿದು ಬರಲೇ ಇಲ್ಲ.

ಇದೀಗ ತನ್ನ ಹಿಂದೆ ಮುಂದೆ ಪ್ರೊಡ್ಯೂಸರ್ಸ್ ಅಲೆಯುತ್ತಿರುವುದನ್ನ ನೋಡಿರುವ ಶ್ರದ್ಧಾ, ಮನಸ್ಸು ಮಾಡಿದ್ರೆ ಟಾಲಿವುಡ್ ಗೆ ಕಾಲಿಡಬಹುದೇನೋ...ಅದಕ್ಕೆಲ್ಲಾ ಸಮಯಾವಕಾಶ ಸಿಗಬೇಕು. (ಏಜೆನ್ಸೀಸ್)

English summary
Bollywood Actress Shraddha Kapoor is now being considered in Tollywood as well. According to the reports, Tollywood Producers have consulted Shraddha for few ventures.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada