For Quick Alerts
  ALLOW NOTIFICATIONS  
  For Daily Alerts

  ಕೈ ತಪ್ಪಿದ ರಶ್ಮಿಕಾ ಬಾಲಿವುಡ್ ಸಿನಿಮಾ: 'ಜೆರ್ಸಿ'ಗೆ ಬೇರೊಬ್ಬ ನಾಯಕಿ

  |
  Sraddha Kapoor to replace Rashmika Mandanna in Jersey remake

  ತೆಲುಗಿನ ಸೂಪರ್ ಹಿಟ್ ಸಿನಿಮಾ 'ಜೆರ್ಸಿ' ಬಾಲಿವುಡ್ ಗೆ ರಿಮೇಕ್ ಆಗುತ್ತಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ ಎನ್ನುವ ಸುದ್ದಿ ಕೆಲ ದಿನಗಳ ಹಿಂದೆ ಇತ್ತು. ಆದರೆ, ಇದೀಗ ಈ ಸಿನಿಮಾಗೆ ಬೇರೊಬ್ಬ ನಾಯಕಿಯ ಹೆಸರು ಕೇಳಿ ಬಂದಿದೆ.

  ನಟಿ ರಶ್ಮಿಕಾ ಮಂದಣ್ಣ ಕನ್ನಡದ ನಂತರ ತೆಲುಗು ಸಿನಿಮಾ ಮಾಡಿ ಗೆದ್ದಿದ್ದಾರೆ. ಇದರ ಬಳಿಕ ಬಾಲಿವುಡ್ ಪ್ರವೇಶ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಇತ್ತು. 'ಜರ್ಸಿ' ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಈ ಮೂಲಕ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಹೋಗುತ್ತಿದ್ದಾರೆ ಎನ್ನುವ ಲೆಕ್ಕಾಚಾರ ಇತ್ತು.

  ಅಲ್ಲು ಅರ್ಜುನ್ ಮತ್ತು ತಂಡಕ್ಕೆ ಕ್ಷಮೆ ಕೇಳಿದ ರಶ್ಮಿಕಾ ಮಂದಣ್ಣಅಲ್ಲು ಅರ್ಜುನ್ ಮತ್ತು ತಂಡಕ್ಕೆ ಕ್ಷಮೆ ಕೇಳಿದ ರಶ್ಮಿಕಾ ಮಂದಣ್ಣ

  ಆದರೆ, 'ಜರ್ಸಿ' ಸಿನಿಮಾದ ನಾಯಕಿ ಬದಲಾಗಿದ್ದಾರೆ. ಸಿನಿಮಾದಲ್ಲಿ ಶ್ರದ್ಧಾ ಕಪೂರ್ ನಾಯಕಿ ಆಗುವ ಸಾಧ್ಯತೆ ಇದೆ. ಶಾಹಿದ್ ಕಪೂರ್ ಸಿನಿಮಾದ ಹೀರೋ ಆಗಿದ್ದಾರೆ. ಈ ಹಿಂದೆ ಎರಡು ಸಿನಿಮಾಗಳನ್ನು ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದೆ.

  'ಜರ್ಸಿ' ಒಬ್ಬ ಕ್ರಿಕೆಟರ್ ಬದುಕಿನ ಕಥೆಯಾಗಿದೆ. ಆತನ ಬದುಕಿನ ಏಳು ಬೀಳನ್ನು ಸ್ಫೂರ್ತಿದಾಯಕವಾಗಿ ತೋರಿಸಿದ್ದಾರೆ. ಇಂತಹ ಕಥೆಯಲ್ಲಿ ಅದ್ಭುತವಾಗಿ ನಾನಿ ನಟಿಸಿದ್ದರು. ಶ್ರದ್ಧಾ ಶ್ರೀನಾಥ್ ಪತ್ನಿಯ ಪಾತ್ರದಲ್ಲಿ ಮಿಂಚಿದರು. ಸಿನಿಮಾದ ಎಮೋಷನ್ಸ್ ಬಹಳ ಇಷ್ಟ ಆಯ್ತು.

  ಮೈಕಲ್ ಜಾಕ್ಸನ್ ಸ್ಟೈಲ್ ನಲ್ಲಿ ರಶ್ಮಿಕಾ ಮಂದಣ್ಣಮೈಕಲ್ ಜಾಕ್ಸನ್ ಸ್ಟೈಲ್ ನಲ್ಲಿ ರಶ್ಮಿಕಾ ಮಂದಣ್ಣ

  ತೆಲುಗಿನಲ್ಲಿ ನಿರ್ದೇಶನ ಮಾಡಿದ್ದ ಗೌತಮ್ ತಿನ್ನನೂರಿ ಅವರೇ ಹಿಂದಿಯಲ್ಲಿ ಈ ಸಿನಿಮಾವನ್ನು ಡೈರೆಕ್ಟ್ ಮಾಡುತ್ತಿದ್ದಾರೆ.

  English summary
  Actress Shraddha Kapoor will be playing female lead in 'Jersey' movie hindi remake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X