For Quick Alerts
  ALLOW NOTIFICATIONS  
  For Daily Alerts

  ಪ್ರೇಮಿಗಳ ದಿನಕ್ಕೆ ಸಿಹಿ ಸುದ್ದಿ ನೀಡಿದ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್

  By Bharath Kumar
  |
  ಪ್ರೇಮಿಗಳ ದಿನಕ್ಕೆ ಸಿಹಿ ಸುದ್ದಿ ನೀಡಿದ ಶ್ರದ್ಧಾ ಶ್ರೀನಾಥ್ | Filmibeat Kannada

  'ಯು-ಟರ್ನ್' ಚಿತ್ರದ ಸೂಪರ್ ಯಶಸ್ಸಿನ ನಂತರ ನಟಿ ಶ್ರದ್ಧಾ ಶ್ರೀನಾಥ್ ವೃತ್ತಿ ಜೀವನವೇ ಬದಲಾಯಿತು. ಕನ್ನಡದಲ್ಲಿ 'ಉರ್ವಿ', 'ಆಪರೇಷನ್ ಅಲಮೇಲಮ್ಮ' ಅಂತಹ ಒಳ್ಳೊಳ್ಳೆ ಅವಕಾಶಗಳು ಸಿಕ್ಕಿದವು. ಜೊತೆ ಜೊತೆಗೆ ತಮಿಳು ಚಿತ್ರರಂಗದಲ್ಲಿ ದೊಡ್ಡ ಆಫರ್ ಗಳು ಒದಗಿ ಬಂತು. ಅಲ್ಲಿಯೂ ತಮ್ಮ ನಟನೆಯ ಮೂಲಕ ಎಲ್ಲರ ಮನಗೆದ್ದರು.

  ಸದ್ಯ, ಕನ್ನಡ, ಮಲಯಾಳಂ, ತಮಿಳು ಚಿತ್ರಗಳು ಸೇರಿದಂತೆ ದಕ್ಷಿಣ ಭಾರತದಲ್ಲಿ ಗೆಲುವಿನ ನಾಗಲೋಟ ಮುಂದುವರಿಸುತ್ತಿರುವ ಶ್ರದ್ಧಾ ಅದೇಷ್ಟೋ ಗಂಡೈಕ್ಳ ಹೃದಯಕ್ಕೆ ಬಾಣ ಬಿಟ್ಟಿದ್ದಾರೆ. ಶ್ರದ್ಧಾ ಮಾದಕ ನೋಟ ಕಂಡು ನಿದ್ದೆ ಕೆಡಿಸಿಕೊಂಡಿದ್ದವರು ಇದ್ದಾರೆ.

  ಕನ್ನಡದ ಈ ಹುಡುಗಿಯರಿಗೆ ಪರಭಾಷೆಯಲ್ಲಿ ಇರುವ ಡಿಮ್ಯಾಂಡ್ ನೋಡಿ!

  ಹೀಗೆ, ಸೌತ್ ಸಿನಿರಂಗದಲ್ಲಿ ಮೋಡಿ ಮಾಡುತ್ತಿರುವ ಶ್ರದ್ಧಾ ಇದೀಗ, ಪ್ರೇಮಿಗಳ ದಿನಕ್ಕೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಏನದು ಎಂದು ತಿಳಿಯಲು ಈ ಸ್ಟೋರಿಯನ್ನ ಓದಿ....

  ಬಾಲಿವುಡ್ ಗೆ ಹಾರಿದ ಶ್ರದ್ಧಾ

  ಬಾಲಿವುಡ್ ಗೆ ಹಾರಿದ ಶ್ರದ್ಧಾ

  ಇಷ್ಟು ದಿನ ದಕ್ಷಿಣ ಚಿತ್ರರಂಗದಲ್ಲಿ ಮಿಂಚುತ್ತಿದ್ದ ಮೂಗುತ್ತಿ ಸುಂದರಿ ಶ್ರದ್ಧಾ ಶ್ರೀನಾಥ್ ಈಗ ಬಾಲಿವುಡ್ ಗೆ ಜಿಗಿದಿದ್ದಾರೆ. ಸ್ಟಾರ್ ನಿರ್ದೇಶಕರ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಸುದ್ದಿಯನ್ನ ಸ್ವತಹ ಶ್ರದ್ಧಾ ತಿಳಿಸಿದ್ದಾರೆ.

  ಸ್ಟಾರ್ ನಿರ್ದೇಶಕನ ಚಿತ್ರದಲ್ಲಿ ಕನ್ನಡದ ನಟಿ

  ಸ್ಟಾರ್ ನಿರ್ದೇಶಕನ ಚಿತ್ರದಲ್ಲಿ ಕನ್ನಡದ ನಟಿ

  ಬಾಲಿವುಡ್ ಜನಪ್ರಿಯ ಮತ್ತು ಖ್ಯಾತ ನಿರ್ದೇಶಕ ತಿಗ್ಮಾಂಶು ದುಲಿಯಾ ಅವರ ಚಿತ್ರದಲ್ಲಿ ಕನ್ನಡದ ನಟಿ ಶ್ರದ್ಧಾ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ 'ಮಿಲನ್ ಟಾಕೀಸ್' ಎಂದು ಹೆಸರಿಡಲಾಗಿದೆ.

  ಹಾಲಿವುಡ್ ನಟನ ಜೊತೆ ಶ್ರದ್ಧಾ

  ಹಾಲಿವುಡ್ ನಟನ ಜೊತೆ ಶ್ರದ್ಧಾ

  ಅಂದ್ಹಾಗೆ, ಈ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ಜೋಡಿಯಾಗುತ್ತಿರುವುದು ಹಾಲಿವುಡ್ ನಟನಿಗೆ. ಹೌದು, ಬಾಲಿವುಡ್ ಮತ್ತು ಹಾಲಿವುಡ್ ನಲ್ಲಿ ನಟಿಸುತ್ತಿರುವ ಅಲಿ ಪೈಜಲ್ ಗೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

  ಮಾರ್ಚ್ ತಿಂಗಳಲ್ಲಿ ಚಿತ್ರೀಕರಣ

  ಮಾರ್ಚ್ ತಿಂಗಳಲ್ಲಿ ಚಿತ್ರೀಕರಣ

  ಮಾರ್ಚ್ ತಿಂಗಳಿನಲ್ಲಿ 'ಮಿಲನ್ ಟಾಕೀಸ್' ಶೂಟಿಂಗ್ ನಲ್ಲಿ ಶ್ರದ್ದಾ ಭಾಗವಹಿಸಲಿದ್ದಾರೆ. ಉತ್ತರ ಪ್ರದೇಶದಲ್ಲಿ ಹಾಗೂ ಲಕ್ನೋ ಮತ್ತು ಮಥುರಾ ನಗರಗಳಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆಯಂತೆ.

  English summary
  Tamil and Telugu, she now gets her ticket to Bollywood, which she has welcomed with open arms. Shraddha has been roped in for Tigmanshu Dhulia's 'Milan Talkies' in which she will be paired opposite Bollywood and Hollywood actor Ali Fazal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X