»   » ನಟಿ ಶ್ರುತಿ ಹಾಸನ್ ಮೇಲೆ ಅಪರಿಚಿತನ ದಾಳಿ

ನಟಿ ಶ್ರುತಿ ಹಾಸನ್ ಮೇಲೆ ಅಪರಿಚಿತನ ದಾಳಿ

Posted By:
Subscribe to Filmibeat Kannada

ಜನಪ್ರಿಯ ನಟ ಕಮಲ್ ಹಾಸನ್ ಅವರ ಪುತ್ರಿ ಹಾಗೂ ನಟಿ ಶ್ರುತಿ ಹಾಸನ್ (27) ಅವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ದಾಳಿ ಮಾಡಿದ್ದಾರೆ. ಈ ಘಟನೆ ಮಂಗಳವಾರ (ನ.19) ಬೆಳಗ್ಗೆ ಮುಂಬೈನ ಬಾಂದ್ರಾದಲ್ಲಿರುವ ಶ್ರುತಿ ಹಾಸನ್ ಅವರ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.

ಈ ಅಪರಿಚಿತ ವ್ಯಕ್ತಿ ಮನೆಯ ಕಾಲಿಂಗ್ ಬೆಲ್ ಒತ್ತಿದ್ದಾನೆ. ಬಾಗಿಲು ತೆಗೆದ ಕೂಡಲೆ ಶ್ರುತಿ ಹಾಸನ್ ಅವರ ಮೇಲೆ ದಾಳಿ ಮಾಡಿ ಅವರ ಕುತ್ತಿಗೆ ಹಿಡಿದು ನೂಕಿದ್ದಾನೆ. ಮನೆಯ ಒಳಗೆ ನುಗ್ಗಲು ಯತ್ನಿಸಿದ್ದಾನೆ. ಆದರೆ ಸಮಯಪ್ರಜ್ಞೆ ಮೆರೆದ ಶ್ರುತಿ ಅವರು ಕೂಡಲೆ ಬಾಗಿಲನ್ನು ಜೋರಾಗಿ ತಳ್ಳಿದ್ದಾರೆ.


ಬಾಗಿಲು ತಳ್ಳಿದ ರಭಸಕ್ಕೆ ಅಪರಿಚಿತ ವ್ಯಕ್ತಿಯ ಕೈಗೆ ಬಲವಾಗಿ ಪೆಟ್ಟುಬಿದ್ದಿದೆ. ಕೂಡಲೆ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಘಟನೆಯಿಂದ ಶ್ರುತಿ ಹಾಸನ್ ಅವರು ಆಘಾತಗೊಂಡಿದ್ದಾರೆ. ಈ ಸಂಬಂಧ ಯಾವುದೇ ದೂರು ನೀಡಿಲ್ಲ ಎಂದು ಅವರ ವಕ್ತಾರರು ತಿಳಿಸಿದ್ದಾರೆ.

ಈ ಅಪರಿಚಿತ ವ್ಯಕ್ತಿ 'ರಾಮಯ್ಯ ವಸ್ತಾವಯ್ಯಾ' ಚಿತ್ರೀಕರಣ ಸಮಯದಿಂದಲೂ ಹಿಂಬಾಲಿಸುತ್ತಿದ್ದ ಎನ್ನಲಾಗಿದೆ. ಮೂರು ದಿನಗಳ ಹಿಂದೆಯೂ ಸೆಟ್ಸ್ ಗೆ ಬಂದಿದ್ದನಂತೆ. ಈ ವ್ಯಕ್ತಿ ಯಾರು ಎಂಬುದು ಇನ್ನಷ್ಟೆ ಗೊತ್ತಾಗಬೇಕು. ಈ ಬಗ್ಗೆ ಟ್ವಿಟ್ಟರ್ ನಲ್ಲೂ ಶ್ರುತಿ ಹಾಸನ್, "ನಾನು ಆರಾಮವಾಗಿದ್ದೇನೆ. ನನ್ನ ಬಗ್ಗೆ ತೋರಿದ ಕಾಳಜಿಗೆ ಧನ್ಯವಾದಗಳು" ಎಂದಿದ್ದಾರೆ. (ಏಜೆನ್ಸೀಸ್)

<blockquote class="twitter-tweet blockquote" lang="en"><p>I'm doing fine and thankyou for the concern -</p>— shruti haasan (@shrutihaasan) <a href="https://twitter.com/shrutihaasan/statuses/402857138185191424">November 19, 2013</a></blockquote> <script async src="//platform.twitter.com/widgets.js" charset="utf-8"></script>

English summary
Actress Shruti Haasan, daughter of Tamil superstar Kamal Haasan, was on Tuesday attacked by an unidentified stalker at her apartment in Mumbai. No complaint has been registered with the police so far.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada