For Quick Alerts
  ALLOW NOTIFICATIONS  
  For Daily Alerts

  ಸಿನಿಮಾಟೊಗ್ರಫಿ ಆಕ್ಟ್ ತಿದ್ದುಪಡಿಗೆ ದಿಗ್ಗಜ ನಿರ್ದೇಶಕ ಶ್ಯಾಮ್ ಬೆನಗಲ್ ವಿರೋಧ

  |

  ಭಾರತದ ಹಿರಿಯ ಹಾಗೂ ಸೂಕ್ಷ್ಮ ನಿರ್ದೇಶಕ ಶ್ಯಾಮ್ ಬೆನಗಲ್ ಅವರು ಕೇಂದ್ರದ ಹೊಸ ಸಿನಿಮಾಟೊಗ್ರಫಿ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

  ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಸೇರಿದಂತೆ ಸಿನಿಮಾಕ್ಕಾಗಿ ಹಲವು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿರುವ ಶ್ಯಾಮ್ ಬೆನಗಲ್, ಕೇಂದ್ರದ ಸಿನಿಮಾಟೊಗ್ರಫಿ ಕಾಯ್ದೆ ತಿದ್ದುಪಡಿಯು ''ಚಿತ್ರಕರ್ಮಿಗಳಿಗೆ ಹೊಡೆತ'' ಎಂದು ಬಣ್ಣಿಸಿದ್ದಾರೆ.

  ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆದಿರುವ ಶ್ಯಾಮ್ ಬೆನಗಲ್, ''ಉದ್ದೇಶಿತ ತಿದ್ದುಪಡಿಯು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದಲ್ಲದೆ, ಪ್ರಜಾಸತ್ತಾತ್ಮಕ ಭಿನ್ನಾಭಿಪ್ರಾಯ ಹೊಂದುವುದನ್ನು ಅಂತ್ಯಗೊಳಿಸಲಿದೆ ಎಂದಿದ್ದಾರೆ.

  ''ಈ ತಿದ್ದುಪಡಿಯ ಅಗತ್ಯತೆ ಏನು ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಅವರು (ಕೇಂದ್ರ ಸರ್ಕಾರ) ಸಿನಿಮಾಗಳ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದ್ದಾರೆ ಎಂಬುದು ನನಗೆ ಮೊದಲ ನೋಟದಲ್ಲಿಯೇ ಗೊತ್ತಾಗುತ್ತಿದೆ. ನಮ್ಮದು ಸ್ವತಂತ್ರ್ಯ ದೇಶ ಇಲ್ಲಿನ ಮಾಧ್ಯಮಗಳು ಸ್ವತಂತ್ರ್ಯವಾಗಿರಬೇಕು'' ಎಂದಿದ್ದಾರೆ ಶ್ಯಾಮ್ ಬೆನಗಲ್.

  ''ಈಗಾಗಲೇ ಸಿಬಿಎಫ್‌ಸಿ ಇರುವಾಗ ಅದನ್ನು ನಿಯಂತ್ರಿಸಲು ಇನ್ನೊಂದು ವ್ಯವಸ್ಥೆ ಏಕೆ ಬೇಕು? ಅದರಲ್ಲಿಯೂ ಸರ್ಕಾರವೇ ಏಕೆ ಸಿಬಿಎಫ್‌ಸಿಯನ್ನು ನಿಯಂತ್ರಿಸುವ ಅಧಿಕಾರ ಪಡೆಯಲು ಯತ್ನಿಸುತ್ತಿದೆ? ಎಂಬ ಪ್ರಶ್ನೆಗಳನ್ನು ಹಾಕಿರುವ ಶ್ಯಾಮ್ ಬೆನಗಲ್, ''ಸರ್ಕಾರ ಈಗಾಗಲೇ ಸಿಬುಎಫ್‌ಸಿ ವ್ಯವಸ್ಥೆಯನ್ನು ರೂಪಿಸಿದೆ. ಹೀಗಿರುವಾಗ ಮತ್ತೆ ಅದೇ ಏಕೆ ಅದರ ಮೇಲೊಂದು ಪ್ರತ್ಯೇಕ ವ್ಯವಸ್ಥೆ ರೂಪಿಸಲು ಹೊರಟಿದೆ ಅರ್ಥವಾಗುತ್ತಿಲ್ಲ'' ಎಂದಿದ್ದಾರೆ ಈ ಹಿರಿಯ ನಿರ್ದೇಶಕ.

  ಅಪ್ಪು ಅಭಿಮಾನಿಗಳ ಖುಷಿ ಹೆಚ್ಚಿಸಿದ ವಿಜಯ್ ಕಿರಗಂದೂರ್ | Filmibeat Kannada

  ಬೆನಗಲ್ ಅವರು 2016 ರಲ್ಲಿ ಸಿಬಿಎಫ್‌ಸಿಯ ಸಮಗ್ರ ಕಾರ್ಯವೈಖರಿಯನ್ನು ಅಭ್ಯಸಿಸಲು ಹಾಗೂ ಬದಲಾವಣೆಗಳನ್ನು ಸೂಚಿಸಲು ರಚಿಸಲಾಗಿದ್ದ ಸಮಿತಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ಹಾಗೂ ಸರ್ಕಾರಕ್ಕೆ ವರದಿಯನ್ನು ಸಹ ಸಲ್ಲಿಸಿದ್ದರು. ಹಾಗಾಗಿ ಅವರಿಗೆ ಸಿಬಿಎಫ್‌ಸಿಯ ಮಹತ್ವದ ಬಗ್ಗೆ ಹೆಚಚಿನ ಅರಿವಿದೆ.

  English summary
  Veteran movie director Shyam Benegal oppose to proposed cinematography act amendment. He said it is low to film fraternity.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X