For Quick Alerts
  ALLOW NOTIFICATIONS  
  For Daily Alerts

  'ತಪ್ಪಡ್' ಸಿನಿಮಾದ ನಟ ಸಿದ್ದಾಂತ್ ದಾಂಪತ್ಯದಲ್ಲಿ ಬಿರುಗಾಳಿ: ಪತ್ನಿಗೆ ವಿಚ್ಛೇದನ

  |

  ಬಾಲಿವುಡ್ ನ ನಟ ಸಿದ್ದಾಂತ್ ಕಾರ್ನಿಕ್ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದ್ದೆ. ಇತ್ತೀಚಿಗಷ್ಟೆ ರಿಲೀಸ್ ಆಗಿದ್ದ ತಪ್ಪಡ್ ಸಿನಿಮಾದಲ್ಲಿ ಅಭಿನಯಿಸಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದ್ದ ನಟ, ಈಗ ವೈಯಕ್ತಿಕ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಹೌದು. ಇತ್ತೀಚಿಗಷ್ಟೆ ಸಿದ್ದಾಂತ್ ಪತ್ನಿ ಮೇಘಾ ಗುಪ್ತ ಜೊತೆಗಿನ ವೈವಾಹಿಕ ಜೀವನಕ್ಕೆ ಎಳ್ಳು-ನೀರು ಬಿಟ್ಟಿದ್ದಾರೆ.

  Nick Jonas Celebrates First Holi with Priyanka Chopra

  2016ರಲ್ಲಿ ಖ್ಯಾತ ಕಿರುತೆರೆ ನಟಿ ಮೇಘಾ ಗುಪ್ತ ಜೊತೆ ಹಸೆಮಣೆ ಏರಿದ್ದ ಸಿದ್ದಾಂತ್ ಮದುವೆ ಆಗಿ ಕೇವಲ ನಾಲ್ಕು ವರ್ಷದಲ್ಲೇ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ಇವರು ಒಬ್ಬರಿಗೊಬ್ಬರು ಪ್ರೀತಿಸಿ ರಿಜಿಸ್ಟರ್ ಮದುವೆ ಆಗಿದ್ದರು. ಕಳೆದ ವರ್ಷವೇ ಇವರಿಬ್ಬರು ಬೇರೆ ಬೇರೆ ಆಗಿದ್ದರು ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಈ ಬಗ್ಗೆ ಸಿದ್ದಾಂತ್ ಆಗಲಿ ಅಥವಾ ಮೇಘಾ ಆಗಲಿ ಯಾರು ಮಾತನಾಡಿರಲಿಲ್ಲ.

  ಧನುಶ್ ಬಗ್ಗೆ ಮಾತಾಡಿ ಮತ್ತೆ ಟ್ರೋಲ್ ಆದ ಅಮಲಾ ಪೌಲ್ಧನುಶ್ ಬಗ್ಗೆ ಮಾತಾಡಿ ಮತ್ತೆ ಟ್ರೋಲ್ ಆದ ಅಮಲಾ ಪೌಲ್

  ಆದರೀಗ ಇಬ್ಬರ ನಡುವೆ ವಿಚ್ಛೇದನದ ವಿಚಾರ ಬಹಿರಂಗವಾಗಿದೆ. ಈ ಬಗ್ಗೆ ಇತ್ತೀಚಿಗೆ ಸಂದರ್ಶವೊಂದರಲ್ಲಿ ಮಾತನಾಡಿ "ತಮ್ಮ ವಿಚಾರದಲ್ಲಿ ಮದುವೆ ಎನ್ನುವುದು ಅಷ್ಟು ಸುಲಭವಲ್ಲ. ಇಬ್ಬರ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದಿದ್ದೇವೆ. ಇಬ್ಬರ ನಡುವೆ ಇನ್ನು ಸ್ವಲ್ಪ ಪ್ರೀತಿ ಇರುವಾಗಲೆ ಬೇರೆ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದೇವೆ. ಇದು ನಮ್ಮನ್ನು ಇನ್ನು ಕಾಪಾಡಿದೆ". ಎಂದು ಹೇಳಿದ್ದಾರೆ.

  ಸಿದ್ದಾಂತ್ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಮಾಜಿ ಪತ್ನಿ ಮೇಘಾ ಕಿರುತೆರೆಯಲ್ಲಿ ಖ್ಯಾತಿ ಗಳಿಸಿದ್ದಾರೆ. ಕಿರುತೆರೆಯ ಆಯುಷ್ಮಾನ್ ಭವ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಈ ಧಾರಾವಾಹಿಯಲ್ಲಿ ಮೇಘಾ ವಿಲನ್ ಪಾತ್ರದಲ್ಲಿ ಮಿಂಚಿದ್ದರು.

  English summary
  Thappad Actor siddhant karnick on Divorce with megha gupta end of marriage life.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X