For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸ್ನೇಹಿತನ ಜಾಮೀನು ತಿರಸ್ಕಾರ: ಮದುವೆಗಾಗಿ 10 ದಿನ ಬಿಡುಗಡೆ

  |

  ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿದ್ದ ಸ್ನೇಹಿತ ಸಿದ್ಧಾರ್ಥ್ ಪಿಥಾನಿಗೆ ನ್ಯಾಯಾಲಯ ಜಾಮೀನು ನಿರಾಕರಿಸಿದೆ ಎಂಬ ವಿಚಾರ ಹೊರಬಿದ್ದಿದೆ.

  ಸುಶಾಂತ್ ಸಿಂಗ್ ಪ್ರಕರಣದಲ್ಲಿ ಜಾಮೀನು ನೀಡಲು ಕೋರ್ಟ್ ತಿರಸ್ಕರಿಸಿದ್ದರೂ, ಮದುವೆ ಕಾರಣಕ್ಕಾಗಿ ಹತ್ತು ದಿನಗಳ ಕಾಲ ಪೆರೋಲ್ ಆಧಾರದಲ್ಲಿ ಬಿಡುಗಡೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆ ಜುಲೈ 2 ರಂದು ಮತ್ತೆ ಸಿದ್ದಾರ್ಥ್ ಪಿಥಾನಿ ನ್ಯಾಯಾಲಯಕ್ಕೆ ಶರಣಾಗಬೇಕು ಎಂಬ ಷರತ್ತು ವಿಧಿಸಿದೆ.

  ಸುಶಾಂತ್ ಸಿಂಗ್ ಫ್ಲ್ಯಾಟ್ ಸ್ನೇಹಿತ ಸಿದ್ಧಾರ್ಥ್ ಬಂಧಿಸಿದ ಎನ್‌ಸಿಬಿಸುಶಾಂತ್ ಸಿಂಗ್ ಫ್ಲ್ಯಾಟ್ ಸ್ನೇಹಿತ ಸಿದ್ಧಾರ್ಥ್ ಬಂಧಿಸಿದ ಎನ್‌ಸಿಬಿ

  ಮೇ 26 ರಂದು ಹೈದರಾಬಾದ್‌ನಲ್ಲಿ ಮುಂಬೈ ಮೂಲದ ಎನ್‌ಸಿಬಿ ಪೊಲೀಸರು ಸಿದ್ದಾರ್ಥ್‌ರನ್ನು ಬಂಧಿಸಿದ್ದರು. ಸುಶಾಂತ್ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಸಿದ್ದಾರ್ಥ್ ಬಹಳ ದಿನಗಳಿಂದ ತಲೆಮರೆಸಿಕೊಂಡಿದ್ದರು.

  ಸುಶಾಂತ್ ಸಿಂಗ್ ಸಾವಿಗೂ ಮುನ್ನ ಫ್ಲ್ಯಾಟ್‌ನಲ್ಲಿ ನಾಲ್ಕು ಜನರು ಇದ್ದರು ಎಂಬ ಮಾಹಿತಿ ಇದೆ. ಅದರಲ್ಲಿ ಸಿದ್ಧಾರ್ಥ್ ಪಿಥಾನಿ ಸಹ ಒಬ್ಬರು. ಈ ಮೊದಲೇ ಮುಂಬೈ ಪೊಲೀಸರು, ಸಿಬಿಐ ಅಧಿಕಾರಿಗಳು ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ಸಿದ್ದಾರ್ಥ್ ಪಿಥಾನಿಯನ್ನು ಹಲವು ಬಾರಿ ವಿಚಾರಣೆ ನಡೆಸಿದ್ದರು.

  ಘಟನೆಯ ವಿವರ

  ರಿಯಲ್ ಹೀರೋ ಕಾಲಿಗೆ ಬಿದ್ದು ಕಣ್ಣೀರು ಹಾಕಿದ ಕ್ಯಾನ್ಸರ್ ರೋಗಿ | Filmibeat Kannada

  ಜೂನ್ 14, 2020ರಲ್ಲಿ ಮುಂಬೈನ ಫ್ಲ್ಯಾಟ್‌ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸುಶಾಂತ್ ಸಿಂಗ್ ಶವ ಪತ್ತೆಯಾಗಿತ್ತು. ಅನುಮಾನಾಸ್ಪದ ಸಾವು ಎಂಬ ಕಾರಣಕ್ಕೆ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು ಸ್ನೇಹಿತರು, ಕುಟುಂಬಸ್ಥರನ್ನು ವಿಚಾರಣೆ ನಡೆಸಿದ್ದರು. ಬಳಿಕ, ಈ ಕೇಸ್‌ ಸಿಬಿಐಗೆ ವರ್ಗಾವಣೆ ಆಯಿತು.

  English summary
  Sushanth singh Rajput Death Case: Siddharth pithani got 10 days release on parole.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X