For Quick Alerts
  ALLOW NOTIFICATIONS  
  For Daily Alerts

  'ಮಿಷನ್ ಮಜ್ನು' ಚಿತ್ರೀಕರಣ ವೇಳೆ ನಟ ಸಿದ್ಧಾರ್ಥ್ ಮಲ್ಹೋತ್ರಾ ಕಾಲಿಗೆ ಪೆಟ್ಟು

  |

  'ಮಿಷನ್ ಮಜ್ನು' ಸಿನಿಮಾದ ಚಿತ್ರೀಕರಣ ವೇಳೆ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ಮೊಣಕಾಲಿಗೆ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ.

  ಆಕ್ಷನ್ ದೃಶ್ಯದ ಶೂಟಿಂಗ್ ಮಾಡುವ ವೇಳೆ ಕಾಲಿಗೆ ಗಾಯವಾಗಿದೆ. ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಬಳಿಕ ಶೂಟಿಂಗ್ ಮುಗಿಸಿಕೊಟ್ಟಿದ್ದಾರೆ. ಈ ವೇಳೆ ಸಾಹಸ ನಿರ್ದೇಶಕ ರವಿವರ್ಮ ಹಾಗೂ ಚಿತ್ರದ ನಿರ್ದೇಶಕ ಶಂತನು ಬಾಗ್ಚಿ ಸ್ಥಳದಲ್ಲಿದ್ದರು ಎಂದು ವರದಿಯಾಗಿದೆ.

  ಇಂಡಿಯಾ ಟುಡೇ ವರದಿ ಮಾಡಿರುವ ಪ್ರಕಾರ, ಇದು ಗಂಭೀರ ಗಾಯವಲ್ಲ. ಕಬ್ಬಿಣದ ರಾಡಿನಿಂದ ಕಾಲಿಗೆ ಪೆಟ್ಟು ಬಿದ್ದಿದೆ. ಕೆಲವು ಗಂಟೆ ವಿಶ್ರಾಂತಿ ಪಡೆದ ನಂತರ ಸಿದ್ಧಾರ್ಥ್ ಶೂಟಿಂಗ್ ಮಾಡಿದ್ದರು. ಸದ್ಯ ಲಕನೋದಲ್ಲಿ ಮಿಷನ್ ಮಜ್ನು ಚಿತ್ರೀಕರಣ ಸಾಗ್ತಿದೆ.

  ಸಿದ್ಧಾರ್ಥ್ ಮಲ್ಹೋತ್ರಾ ಈ ಚಿತ್ರದಲ್ಲಿ ರಾ ಏಜೆಂಟ್ ಆಗಿ ನಟಿಸುತ್ತಿದ್ದಾರೆ. ಶಾಂತನು ಅವರು ಚೊಚ್ಚಲ ಬಾರಿಗೆ ನಿರ್ದೇಶನ ಮಾಡ್ತಿದ್ದು, ಕನ್ನಡ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

  ಫೆಬ್ರವರಿ ತಿಂಗಳಲ್ಲಿ ಮಿಷನ್ ಮಜ್ನು ಚಿತ್ರದ ಮುಹೂರ್ತ ಜರುಗಿತ್ತು. ಮುಂಬೈನಲ್ಲಿ ಮೊದಲ ಹಂತದ ಚಿತ್ರೀಕರಣ ಸಹ ನಡೆದಿತ್ತು. ಈ ವೇಳೆ ರಶ್ಮಿಕಾ ಮಂದಣ್ಣ ಅವರು ಭಾಗವಹಿಸಿದ್ದರು.

  ಶೂಟಿಂಗ್ ಮಾಡುವ ವೇಳೆ ನಟ ಉಪೇಂದ್ರ ಅವರಿಗೂ ಪೆಟ್ಟು ಬಿದ್ದಿತ್ತು. ಕಬ್ಜ ಚಿತ್ರೀಕರಣ ಮಾಡ್ತಿದ್ದ ವೇಳೆ ಸಹಕಲಾವಿದ ಕೈಯಲ್ಲಿದ್ದ ರಾಡು ಉಪ್ಪಿಯ ತಲೆಗೆ ತಗುಲಿ ಗಾಯವಾಗಿತ್ತು. ಅದೃಷ್ಟವಶಾತ್ ಯಾವುದೇ ಅಪಾಯ ಆಗಿಲ್ಲ. ಕಳೆದ ರಾತ್ರಿ ಮದಗಜ ಶೂಟಿಂಗ್ ವೇಳೆ ನಟ ಶ್ರೀಮುರಳಿ ಅವರಿಗೆ ಗಾಯವಾಗಿದೆ.

  English summary
  Bollywood Actor Sidharth Malhotra injured during the shoots of Mission Majnu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X