For Quick Alerts
  ALLOW NOTIFICATIONS  
  For Daily Alerts

  ಪ್ರಿಯತಮೆ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಬೆನ್ನಿ ದಯಾಳ್

  By ಸೋನು ಗೌಡ
  |

  ಬಾಲಿವುಡ್, ಸ್ಯಾಂಡಲ್ ವುಡ್, ಸೇರಿದಂತೆ ಕಾಲಿವುಡ್ ಕ್ಷೇತ್ರದಲ್ಲೂ ತಮ್ಮ ಸುಮಧುರ ಸ್ವರದಿಂದ ಎಲ್ಲರನ್ನೂ ಮೋಡಿ ಮಾಡಿರುವ ಖ್ಯಾತ ಗಾಯಕ ಬೆನ್ನಿ ದಯಾಳ್ ಅವರು ತಮ್ಮ ದೀರ್ಘಕಾಲದ ಗೆಳತಿ ಮಾಡೆಲ್ ಕಮ್ ನಟಿ ಕ್ಯಾಥರೀನ್ ತಂಗಮ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

  ಅಂದಹಾಗೆ ಹಿಂದು ಹಾಗೂ ಕ್ರಿಶ್ಚಿಯನ್ ಸಂಪ್ರದಾಯದ ಮಾದರಿಯಲ್ಲಿ ಬೆನ್ನಿ ದಾಯಾಳ್ ಮತ್ತು ಕ್ಯಾಥರೀನ್ ಅವರ ಮದುವೆ ಅದ್ದೂರಿಯಾಗಿ ಭಾನುವಾರದಂದು (ಜೂನ್ 5) ನೆರವೇರಿದೆ. ಸದ್ಯದಲ್ಲೇ ಕೇರಳದಲ್ಲಿ ಆರತಕ್ಷತೆ ಸಮಾರಂಭ ನಡೆಯಲಿದೆ.[7 ವರ್ಷ ಪ್ರೀತಿಸಿ ಕೊನೆಗೂ ದಂಪತಿಗಳಾದ ಸೆಲೆಬ್ರಿಟಿ ಲವರ್ಸ್]

  ಕನ್ನಡದ 'ಪೃಥ್ವಿ' ಚಿತ್ರದ 'ಹೆಜ್ಜೆಗೊಂದು ಹೆಜ್ಜೆ' ಹಾಗೂ 'ಗಾನಬಜಾನ' ಚಿತ್ರದ ಹಾಡುಗಳಿಗೆ ಧ್ವನಿ ನೀಡಿದ್ದ ಗಾಯಕ ಬೆನ್ನಿ ದಯಾಳ್ ಅವರು ರಣಬೀರ್ ಕಪೂರ್ ಅವರ 'ಏ ಜವಾನಿ, ಏ ದಿವಾನಿ' ಚಿತ್ರದ 'ಬರ್ತಮೀಜ್ ದಿಲ್' ಹಾಡಿನ ಮೂಲಕ ಬಿಟೌನ್ ನಲ್ಲಿ ಸಾಕಷ್ಟು ಫೇಮಸ್ ಆಗಿದ್ದರು.

  ಜೆನಿಲಿಯಾ ಮತ್ತು ಇಮ್ರಾನ್ ಖಾನ್ ಅವರ 'ಜಾನೆ ತು ಯಾ ಜಾನೇ ನಾ' ಚಿತ್ರದ 'ಪಪ್ಪು ಕ್ಯಾನ್ ಡಾನ್ಸ್ ಸಾಲಾ' ಹಾಡಿನ ಮೂಲಕ ಖ್ಯಾತಿಯಾಗಿ ಬಿಟೌನ್ ಗೆ ಕಾಲಿಟ್ಟ ಬೆನ್ನಿ ದಯಾಳ್ ಅವರು ತದನಂತರ 'ತು ಮೇರಿ ದೋಸ್ತ್ ಹೈ', 'ಕೈಸೆ ಮುಝೆ', 'ದಾರು ದೇಸಿ', 'ಬ್ಯಾಂಗ್ ಬ್ಯಾಂಗ್' ಮುಂತಾದ ಹಾಡುಗಳಿಗೆ ಧ್ವನಿ ನೀಡಿ ಬೇಡಿಕೆಯ ಗಾಯಕ ಎನಿಸಿಕೊಂಡರು.[ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ನಟಿ ಪ್ರಿಯಾಮಣಿ]

  ಇನ್ನು ಇವರು ಕಾಲಿವುಡ್ ನಟ ವಿಜಯ್ ಅವರ 'ತಲೈವಾ' ಮತ್ತು ಅಜಿತ್ ನಟನೆಯ 'ಎನ್ನೈ ಅರಿಂದಾಲ್' ಮುಂತಾದ ಚಿತ್ರಗಳ ಹಾಡಿಗೆ ತಮ್ಮ ಧ್ವನಿ ನೀಡಿ ಕಾಲಿವುಡ್ ಕ್ಷೇತ್ರದಲ್ಲೂ ಖ್ಯಾತಿ ಗಳಿಸಿದ್ದಾರೆ.

  ನ್ಯೂಯಾರ್ಕ್ ಮೂಲದ ಕ್ಯಾಥರೀನ್ ಅವರು ಹಲವಾರು ಫ್ಯಾಶನ್ ಶೋ ಸೇರಿದಂತೆ, ಶ್ರೀದೇವಿ ಅವರ ಜೊತೆ 'ಇಂಗ್ಲೀಷ್ ವಿಂಗ್ಲೀಷ್' ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿಶೇಷವಾಗಿ ಇವರು ಭರತನಾಟ್ಯ ನೃತ್ಯ ಪಟುವಾಗಿದ್ದು, 11 ನೇ ವಯಸ್ಸಿನಿಂದಲೇ ವೇದಿಕೆಯಲ್ಲಿ ಭರತನಾಟ್ಯ ನೃತ್ಯ ಮಾಡಲು ಆರಂಭಿಸಿದ್ದಾರೆ.[ಚಿತ್ರಪಟ: ಪ್ರೀತಿ ಝಿಂಟಾರ ಆರತಕ್ಷತೆ ಸಮಾರಂಭದಲ್ಲಿ ಬಾಲಿವುಡ್ ಗಣ್ಯರು]

  ಇದೀಗ ಇವರಿಬ್ಬರ ದೀರ್ಘಕಾಲದ ಪ್ರೇಮವನ್ನು ಮದುವೆ ಎಂಬ ಬಂಧನದ ಮೂಲಕ ಮತ್ತಷ್ಟು ಗಟ್ಟಿ ಮಾಡಿಕೊಂಡಿದ್ದಾರೆ. ನವ ದಂಪತಿಗಳಿಗೆ ಎಲ್ಲಾ ಚಿತ್ರರಂಗದ ಖ್ಯಾತ ಗಾಯಕರು ಶುಭ ಹಾರೈಸಿದ್ದಾರೆ. (ಮದುವೆ ಫೋಟೋ ಆಲ್ಬಂ ನೋಡಿ ಕೆಳಗಿನ ಸ್ಲೈಡುಗಳಲ್ಲಿ...).

  -ಗಾಯಕ ವಿಶಾಲ್ ದಾಲ್ದಾನಿ ಜೊತೆ ಬೆನ್ನಿ-ಕ್ಯಾಥರೀನ್ ದಂಪತಿ

  -ಖ್ಯಾತ ಗಾಯಕ-ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಜೊತೆ ನವ ದಂಪತಿ

  -ಬೆನ್ನಿ ದಯಾಳ್-ಕ್ಯಾಥರೀನ್ ನಿಶ್ಚಿತಾರ್ಥ ಫೋಟೋ

  -ಆಪ್ತರ ಸಮ್ಮುಖದಲ್ಲಿ ಬೆನ್ನಿ ದಂಪತಿ

  ಬೆನ್ನಿ ದಯಾಳ್-ಕ್ಯಾಥರೀನ್ ನಿಶ್ಚಿತಾರ್ಥ ಫೋಟೋ

  -ಗಾಯಕ ವಿಶಾಲ್ ದಾಲ್ದಾನಿ ಜೊತೆ ಬೆನ್ನಿ-ಕ್ಯಾಥರೀನ್ ದಂಪತಿ

  English summary
  Bollywood Playback singer Benny Dayal has tied the knot with model-actor girlfriend Catherine Thangam On June 5th Sunday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X