For Quick Alerts
  ALLOW NOTIFICATIONS  
  For Daily Alerts

  ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ ಗಾಯಕಿ ರಾನು ಮೊಂಡಲ್

  |
  ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ ಗಾಯಕಿ ರಾನು ಮೊಂಡಲ್ | FILMIBEAT KANNADA

  ಸಾಮಾಜಿಕ ಜಾಲತಾಣದ ಮೂಲಕ ರಾತ್ರೋರಾತ್ರಿ ಸ್ಟಾರ್ ಆದ ಗಾಯಕಿ ರಾನು ಮೊಂಡಲ್ ಹೆಸರು ಕೇಳದವರಿಲ್ಲ. ಆಗಾಗ ಸುದ್ದಿಯಲ್ಲಿರುವ ರಾನು ಹೆಸರು ಈಗ ಮತ್ತೆ ಕೇಳಿ ಬರುತ್ತಿದೆ. ರೈಲ್ವೆ ಸ್ಟೇಷನ್ ನಲ್ಲಿ ಹಾಡುತ್ತಿದ್ದ ರಾನು ಈಗ ಸ್ಟಾರ್ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.

  ಬಾಲಿವುಡ್ ಗಾಯಕ ಹಿಮೇಶ್ ರೇಶಮಿಯಾ ಅವರಿಂದ ರಾನುವಿನಲ್ಲಿದ್ದ ಪ್ರತಿಭೆ ಇಡೀ ದೇಶಕ್ಕೆ ಗೊತ್ತಾಗಿದೆ. ಖ್ಯಾತಿಯ ನಂತರ ರಾನು ಪದೇ ಪದೆ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಅಭಿಮಾನಿಗೆ ಸೆಲ್ಫಿ ಕೊಡುವ ವಿಚಾರ ಮತ್ತು ಮೇಕ್ ವಿಚಾರವಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಅದೇನೆ ಇದ್ದರು ತೇರಿ ಮೇರಿ ಹಾಡಿನ ಮೂಲಕ ಸ್ಟಾರ್ ಆಗಿರುವ ರಾನು ಮುಡಿಗೆ ಮತ್ತೊಂದು ಗರಿ ಸಿಕ್ಕಿದೆ.

  ರಾನು ಮೊಂಡಲ್ ಮೇಕಪ್ ಫೋಟೋ ಫೇಕ್: ಬೇಸರ ವ್ಯಕ್ತಪಡಿಸಿದ ಮೇಕಪ್ ಆರ್ಟಿಸ್ಟ್ರಾನು ಮೊಂಡಲ್ ಮೇಕಪ್ ಫೋಟೋ ಫೇಕ್: ಬೇಸರ ವ್ಯಕ್ತಪಡಿಸಿದ ಮೇಕಪ್ ಆರ್ಟಿಸ್ಟ್

  ಇತ್ತೀಚಿಗೆ ಗೂಗಲ್ ಇಂಡಿಯಾ ರಿಲೀಸ್ ಮಾಡಿರುವ ಈ ವರ್ಷ ಅತೀ ಹೆಚ್ಚು ಸರ್ಚ್ ಆದ ವ್ಯಕ್ತಿಗಳ ಪಟ್ಟಿಯಲ್ಲಿ ಗಾಯಕಿ ರಾನು ಮೊಂಡಲ್ ಕೂಡ ಸ್ಥಾನ ಪಡೆದಿದ್ದಾರೆ. ಅತೀ ಹೆಚ್ಚು ಸರ್ಚ್ ಆದ ಟಾಪ್ 10 ವ್ಯಕ್ತಿಯ ಲಿಸ್ಟ್ ನಲ್ಲಿ ರಾನು ಮೊಂಡಲ್ 7ನೇ ಸ್ಥಾನದಲ್ಲಿ ಇದ್ದಾರೆ. ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಹಾಡನ್ನು ಹಾಡಿದ್ದ ರಾನು ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಂತರ ರಿಯಾಲಿಟಿ ಶೋ ಕಾರ್ಯಕ್ರಮವೊಂದಕ್ಕೆ ಬಂದಿದ್ದ ರಾನು ಅವರ ಗಾಯನಕ್ಕೆ ಇಂಪ್ರೆಸ್ ಆಗಿ ಹಿಮೇಶ್ ರೇಶಮಿಯಾ ಹಾಡಲು ಅವಕಾಶ ನೀಡಿದರು.

  ತೇರಿ ಮೇರಿ ಹಾಡಿನ ಮೂಲಕ ಸಂಚಲ ಸೃಷ್ಟಿಸಿದ ರಾನು ಈಗ ಸ್ಟಾರ್ ಗಾಯಕಿಯಾಗಿದ್ದಾರೆ. ಗೂಗಲ್ ಸರ್ಚ್ ನಲ್ಲಿಯೂ ಟಾಪ್ ನಲ್ಲಿ ಇದ್ದಾರೆ. ಅತೀ ಹೆಚ್ಚು ಸರ್ಚ್ ಆದ ವ್ಯಕ್ತಿಗಳ ಲಿಸ್ಟ್ ನಲ್ಲಿ ವಿಂಗ್ ಕಮಾಂಡರ್ ಅಭಿಮಾನಿ ವರ್ಧಮಾನ್ ಮೊದಲ ಸ್ಥಾನದಲ್ಲಿ ಇದ್ದಾರೆ. ನಂತರದ ಸ್ಥಾನದಲ್ಲಿ ಲತಾ ಮಂಗೇಶ್ಕರ್, ಯುವರಾಜ್ ಸಿಂಗ್, ಆನಂದ್ ಕುಮಾರ್, ವಿಕ್ಕಿ ಕೌಸಲ್, ರಿಷಬ್ ಪಂತ್, ರಾನು ಮೊಂಡಲ್, ಸಿದ್ಧಾರ್ಥ್ ಶುಕ್ಲಾ, ಕೋಯೆನಾ ಮಿತ್ರ.

  English summary
  Singer Ranu Mondal is 7th place the list of most searched person in Google in 2019.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X