For Quick Alerts
  ALLOW NOTIFICATIONS  
  For Daily Alerts

  ಮದುವೆಯಾದ ಆರು ವರ್ಷದ ಬಳಿಕ ಸಿಹಿ ಸುದ್ದಿ ಕೊಟ್ಟ ಗಾಯಕಿ ಶ್ರೆಯಾ ಘೋಷಾಲ್

  |

  ಸುಮಧುರ ಕಂಠದ ಗಾಯಕಿ ಶ್ರೆಯಾ ಘೋಷಾಲ್ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಶ್ರೆಯಾ ಘೋಷಾಲ್ ತಾಯಿಯಾಗುತ್ತಿದ್ದಾರೆ.

  ತಾಯಿಯಾಗುತ್ತಿರುವ ವಿಷಯವನ್ನು ತಮ್ಮ ಚಿತ್ರದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟಿ ಶ್ರೆಯಾ ಘೋಷಾಲ್ 'ಮಗು, 'ಶ್ರೆಯಾದಿತ್ಯ' ಆಗಮಿಸುತ್ತಿದೆ. ಶಿಲಾದಿತ್ಯ ಹಾಗೂ ನಾನು ಈ ಸಿಹಿಸುದ್ದಿಯನ್ನು ಹಂಚಿಕೊಳ್ಳಲು ಬಹಳ ರೋಮಾಂಚಿತಗೊಂಡಿದ್ದೇವೆ. ನಮ್ಮ ಜೀವನದ ಈ ಹೊಸ ಅಧ್ಯಾಯಕ್ಕೆ ನಾವು ಸಿದ್ಧರಾಗಲು ನಿಮ್ಮ ಶುಭಹಾರೈಕೆ ಹಾಗೂ ಆಶೀರ್ವಾದಗಳು ಬೇಕಿವೆ' ಎಂದಿದ್ದಾರೆ ಶ್ರೆಯಾ ಘೋಷಾಲ್.

  ಗಾಯಕಿ ಶ್ರೆಯಾ ಘೋಷಾಲ್ ಹಾಗೂ ಶಿಲಾದಿತ್ಯ ಮುಖೋಪಾಧ್ಯಾಯ ಅವರುಗಳು 2015 ರ ಫೆಬ್ರವರಿ 05 ರಂದು ವಿವಾಹವಾಗಿದ್ದರು. ಮದುವೆಗೆ ಮುನ್ನಾ ಈ ಇಬ್ಬರೂ ಹತ್ತು ವರ್ಷಗಳ ಕಾಲ ಪ್ರೀತಿಸಿದ್ದರು.

  2000 ರಲ್ಲಿ 'ಸಾರೆಗಾಮಪಾ' ರಿಯಾಲಿಟಿ ಶೋ ನಲ್ಲಿ ಹಾಡಲು ಆರಂಭಿಸಿದ ಶ್ರೆಯಾ ಘೋಷಾಲ್ ಈ 21 ವರ್ಷಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಕನ್ನಡದಲ್ಲಿಯೂ ಹಲವಾರು ಹಿಟ್ ಹಾಡುಗಳಿಗೆ ಶ್ರೆಯಾ ಘೋಷಾಲ್ ದನಿ ಇದೆ.

  Yash Next Movie : ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು? | Filmibeat Kannada

  ಭಾರತದ ಹಲವಾರು ಭಾಷೆಗಳಲ್ಲಿ ಶ್ರೆಯಾ ಘೋಷಾಲ್ ಹಾಡಿದ್ದಾರೆ. ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಶ್ರೆಯಾ ಘೋಷಾಲ್ ಭಾಜನರಾಗಿದ್ದಾರೆ. ಹಲವಾರು ಹೊಸ ಹಾಡುಗಾರ್ತಿಯರು ಉದ್ಯಮಕ್ಕೆ ಬಂದಿದ್ದರೂ ಶ್ರೆಯಾ ಘೋಷಾಲ್ ಈಗಲೂ ಟಾಪ್ ಹಾಡುಗಾರ್ತಿಯಾಗಿ ಉಳಿದುಕೊಂಡಿದ್ದಾರೆ.

  English summary
  Singer Sshreya Ghoshal announce she and her husband expecting baby soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X