»   » ವೇದಿಕೆಯಲ್ಲೇ ಬಾಲಿವುಡ್ ನಿರ್ದೇಶಕನಿಗೆ ಕಪಾಳಮೋಕ್ಷ

ವೇದಿಕೆಯಲ್ಲೇ ಬಾಲಿವುಡ್ ನಿರ್ದೇಶಕನಿಗೆ ಕಪಾಳಮೋಕ್ಷ

Subscribe to Filmibeat Kannada

ಮುಂಬೈ, ಡಿ. 12 : ವೇದಿಕೆಯಲ್ಲಿ ನಟಿಯ ಗೆಳತಿಯೊಬ್ಬಳು ನಿರ್ದೇಶಕನಿಗೆ ಕಪಾಳ ಮೋಕ್ಷ ಮಾಡಿದಳು. ಇದಕ್ಕೆ ನಟಿಯೂ ಸಾಥ್ ನೀಡಿದಳು. ನಂತರ ನಡೆದಿದ್ದೆಲ್ಲ ದೊಡ್ಡ ಡ್ರಾಮಾ.

ಐಟಂ ಗರ್ಲ್ ರಾಖಿ ಸಾವಂತ್ ಸ್ನೇಹಿತೆ ಮನಿಶಾ ನಿರ್ದೇಶಕ ಸಚೇಂದ್ರ ಶರ್ಮಾ ಕನ್ನೆಗೆ ಬಾರಿಸಿದ್ದಾಳೆ. ನಿರ್ದೇಶಕನೂ ತಿರುಗಿ ನಟಿಯ ಗೆಳತಿಯ ಕೆನ್ನೆಗೆ ಬಾರಿಸಿದ್ದು ಪ್ರಕರಣ ಪೊಲೀಸರ ಕೈ ಸೇರಿದೆ.['ಡಿ.ಡಿ.ಎಲ್.ಜೆ' ಚಿತ್ರಕ್ಕಿಂದು ಸಹಸ್ರ ಸಂಭ್ರಮ]

bollywood

ಅಷ್ಟಕ್ಕೂ ಆಗಿದ್ದೇನು?
'ಮುಂಬೈ ಕಾನ್ಟ್ ಡಾನ್ಸ್ ಸಾಲಾ' ಎಂಬ ಚಿತ್ರದಲ್ಲಿ ರಾಖಿ ಸಾವಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ. ಮುಂಬೈನಲ್ಲಿ ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ರಾಖಿ ತನ್ನ ಗೆಳತಿ ಮನೀಶಾಳನ್ನು ವೇದಿಕೆಗೆ ಕರೆತಂದಿದ್ದಾಳೆ.

ಮನೀಶಾ ಇದೇ ಅವಕಾಶ ಬಳಸಿಕೊಂಡು ನಿರ್ದೇಶಕನಿಗೆ ಕಪಾಳ ಮೋಕ್ಷ ಮಾಡಿದ್ದಾಳೆ. ಕಾರಣ ಕೇಳಿದರೆ 'ಮಂಚಕ್ಕೆ ಬಾ (ಕಾಸ್ಟಿಂಗ್ ಕೋಚ್) ನಿನಗೆ ಅವಕಾಶ ಕೊಡಿಸುತ್ತೇನೆ' ಎಂದು ನಿರ್ದೇಶಕ ಹೇಳಿದ್ದ. ಹಾಗಾಗೆ ತಕ್ಕ ಉತ್ತರ ನೀಡಿದ್ದೇನೆ ಎನ್ನುತ್ತಾಳೆ.

ಘಟನೆ ಬಳಿಕ ರಾಖಿ ಹಾಗೂ ಆಕೆಯ ಸ್ನೇಹಿತೆ ಮನೀಶಾ ಸಾಂತಾಕ್ರೂಜ್ ಪೊಲೀಸ್ ಠಾಣೆಗೆ ತೆರಳಿ ನಿರ್ದೇಶಕನ ವಿರುದ್ಧ ದೂರು ನೀಡಿದ್ದಾರೆ.

English summary
High drama and utter chaos prevailed at J W Mariott during the music launch of Rakhi Sawant starrer Mumbai Can Dance Saala when a certain aspiring actress and 'friend' of Rakhi, Manisha, slapped director Sachindra Sharma in full public view and accused him of casting couch while a bewildered audience looked on.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada