Don't Miss!
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- News
Budget 2023: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಖರೀದಿಸುವವರಿಗೆ ಶುಭ ಸುದ್ದಿ
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Automobiles
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ಸಲ್ಮಾನ್ ಖಾನ್ ಒಬ್ಬ ಸ್ಯಾಡಿಸ್ಟ್.. ಸಿಗರೇಟ್‌ನಿಂದ ಸುಡುತ್ತಿದ್ದ": ನಟಿ ಸೋಮಿ ಅಲಿ
ಬಾಲಿವುಡ್‌ನ ಮಾಜಿ ನಟಿ ಸೋಮಿ ಅಲಿ ಮತ್ತೊಮ್ಮೆ ನಟ ಸಲ್ಮಾನ್ ಖಾನ್ ವಿರುದ್ಧ ಗಂಬೀರ ಆರೋಪಗಳನ್ನು ಮಾಡಿದ್ದಾರೆ. 90ರ ದಶಕದಲ್ಲಿ ಸಲ್ಲು- ಸೋಮಿ ಡೇಟಿಂಗ್ ಮಾಡಿದ್ದರು. ಆದರೆ ನಂತರ ದೂರಾಗಿದ್ದರು. ಇದೀಗ ಸಲ್ಲು ಕರಾಳ ಮುಖವನ್ನು ಆಕೆ ಬಹಿರಂಗ ಪಡಿಸಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ವಯಸ್ಸು 50 ದಾಟಿದ್ರು ಸಲ್ಮಾನ್ ಖಾನ್ ಇನ್ನು ಮದುವೆ ಆಗಿಲ್ಲ. ಸಂಗೀತಾ ಬಿಜಲಾನಿಯಿಂದ ಐಶ್ವರ್ಯಾ ರೈವರೆಗೆ ಹಲವರ ಜೊತೆ ಸಲ್ಲು ಹೆಸರು ತಳುಕು ಹಾಕಿಕೊಂಡಿತ್ತು. ಆದರೆ ಯಾರೊಟ್ಟಿಗೂ ಲವ್ ಸ್ಟೋರಿ ಬಹಳ ದಿನ ನಡೆಯಲಿಲ್ಲ. ಪಾಕಿಸ್ತಾನಿ - ಅಮೇರಿಕನ್ ನಟಿ ಸೋಮಿ ಅಲಿ 90ರ ದಶಕದಲ್ಲಿ ಕೆಲ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದರು. ಬಾಲಿವುಡ್ ಬ್ಯಾಡ್‌ಬಾಯ್ ಜೊತೆ ಲವ್ವಿ ಡವ್ವಿ ಕೂಡ ನಡೆದಿತ್ತು. ಡೇಟಿಂಗ್ ಸಮಯದಲ್ಲಿ ಸಲ್ಮಾನ್ ಖಾನ್ ನನಗೆ ದೈಹಿಕವಾಗಿ ಹಿಂಸೆ ನೀಡಿದ್ದ ಎಂದು ಆಕೆ ಆರೋಪಿಸಿದ್ದಾರೆ. 8 ವರ್ಷಗಳ ಕಾಲ ನಾನು, ಸಲ್ಮಾನ್ ಖಾನ್ ಡೇಟಿಂಗ್‌ನಲ್ಲಿ ಇದ್ದೆವು ಎಂದು ನಟಿ ಸೋಮಿ ಅಲಿ ವಿವರಿಸಿದ್ದಾರೆ.
ಮಾಜಿ
ಪ್ರೇಯಸಿಗೆ
ಮುತ್ತಿಟ್ಟು
ಸಲ್ಮಾನ್
ಖಾನ್
ಹೇಳಿದ್ದೇನು?
10
ವರ್ಷ
ಪ್ರೀತಿ
ಮುರಿದುಬಿದ್ದಿದ್ದೇಕೆ?
ಇತ್ತೀಚಿಗೆ ತಮ್ಮ 'ಫೈಟ್ ಅಂಡ್ ಫ್ಲೈಟ್' ವೆಬ್ ಸೀರಿಸ್‌ನ ಬ್ಯಾನ್ ಮಾಡಲು ಸಲ್ಲಾನ್ ಖಾನ್ ಪ್ರಯತ್ನಿಸಿದ್ದಾರೆ ಎಂದು ಹೇಳಿದ್ದಾರೆ. ಗೃಹ ಹಿಂಸೆ ಹಾಗೂ ಮಾನವ ಕಳ್ಳಸಾಗಾಣಿಕೆಯ ಸಂತ್ರಸ್ತರನ್ನು ರಕ್ಷಿಸಲು ಈ ಡಾಕ್ಯೂಮೆಂಟರಿ ಸೀರಿಸ್ ಮಾಡಿದ್ದೀನಿ. ಸಲ್ಮಾನ್ ಜೊತೆಗಿದ್ದ ದಿನಗಳ ಕಹಿ ನೆನಪುಗಳು ಇನ್ನು ಕಾಡುತ್ತಿದೆ ಎಂದು ಸೋಮಿ ಹೇಳಿದ್ದಾರೆ.
ಸಿಗರೇಟ್‌ನಿಂದ ಸುಟ್ಟು ಖುಷಿಪಡುತ್ತಿದ್ದ
"ನಾನು ಮುಂಬೈನಲ್ಲಿ ಇದ್ದಾಗ ಸಲ್ಮಾನ್ ಖಾನ್ ನನ್ನನ್ನು ದೈಹಿಕವಾಗಿ ಹಿಂಸಿಸಿದ್ದ. ನಮ್ಮ ಮನೆಯ ಕೆಲಸದಾಕೆ ಕೂಡ ನನ್ನನ್ನು ಹೊಡೆಯದಂತೆ ಸಲ್ಲು ಬಳಿ ಕೇಳಿಕೊಂಡಿದ್ದಳು. ಆತನ ಹೊಡೆತದಿಂದ ಆದ ಗಾಯಗಳನ್ನು ಮೇಕಪ್‌ನಿಂದ ಮುಚ್ಚಿಕೊಳ್ಳುವಂತಾಗಿತ್ತು. ಸಿನಿಮಾ ನಿರ್ಮಾಪಕರು ಕೂಡ ನನ್ನ ಮೈಮೇಲೆ ಆಗಿದ್ದ ಗಾಯಗಳನ್ನು ನೋಡಿದ್ದರು. ಸಿಗರೇಟ್‌ನಿಂದ ಸುಟ್ಟ ಗಾಯಗಳನ್ನು ನೋಡಿ ಸಲ್ಮಾನ್ ಖಾನ್ ಖುಷಿಪಡುತ್ತಿದ್ದ. ಬಹಳ ಗಂಭೀರವಾದ ದೈಹಿಕ, ಲೈಂಗಿಕ ಕಿರುಕುಳಕ್ಕೆ ಗುರಿಯಾಗಿದ್ದೆ."

ನಟಿ ತಬು ನನ್ನ ನೋಡಿ ಅತ್ತಿದ್ದರು
"ತೀವ್ರವಾದ ಬೆನ್ನು ನೋವಿನ ಕಾರಣಕ್ಕೆ ನಾನು ತಿಂಗಳುಗಳ ಕಾಲ ಹಾಸಿಗೆಯಲ್ಲಿ ಕಳೆಯುವಂತಾಯಿತು. ಸಲ್ಮಾನ್ ಖಾನ್ ಒಮ್ಮೆ ಕೂಡ ಒಂದು ವಿಚಾರಿಸಲಿಲ್ಲ. ನಟಿ ತಬು ಕೂಡ ನನ್ನ ಆರೋಗ್ಯ ವಿಚಾರಿಸಲು ಬಂದಿದ್ದರು. ನಾನು ನೋವಿನಿಂದ ಅಳುತ್ತಿದ್ದರೆ ತಾಳಲಾರದೇ ಆಕೆ ಕೂಡ ಕಣ್ಣೀರಾಗಿದ್ದರು. 2018ರಲ್ಲಿ ನನನಗೆ ಬೆನ್ನಿನ ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬಂತು. ಆ ಸಮಯದಲ್ಲಿ ವೈದ್ಯರು 'ನೀವು ದೈಹಿಕವಾಗಿ ಕಿರುಕುಳಕ್ಕೆ ಒಳಗಾಗಿದ್ರಾ?' ಎಂದು ಕೇಳಿದ್ದರು"

ನನ್ನ ಮೇಲೆ ಮದ್ಯ ಸುರಿದಿದ್ದ
"ಸಲ್ಮಾನ್ ಖಾನ್ ನನ್ನ ಮೇಲೆ ಮದ್ಯವನ್ನು ಸುರಿದಿದ್ದ ಎಂದು ಸೋಮಿ ಆರೋಪಿಸಿದ್ದಾರೆ. ಸಲ್ಲು ಒಬ್ಬ ವಕೀಲನ ಮೂಲಕ ನನ್ನನ್ನು ಬೆದರಿಸಲು ಪ್ರಯತ್ನಿಸಿದ. ಈಗಲೂ ನನಗೆ ಸಾಕಷ್ಟು ಬೆದಿರಿಕೆ ಮೇಲ್‌ಗಳು ಬರುವ ಸಾಧ್ಯತೆಯಿದೆ. ನನಗೆ ಯಾವುದೇ ಪ್ರಚಾರದ ಅವಶ್ಯಕತೆ ಇಲ್ಲ. ಸತ್ಯ ಜನರಿಗೆ ಗೊತ್ತಾಗಬೇಕು ಎನ್ನುವುದಷ್ಟೆ ನನ್ನ ಆಶಯ" ಎಂದಿದ್ದಾರೆ.

ಸಲ್ಲು ಕ್ಷಮೆ ಕೇಳಬೇಕು
"ನಾನು ಸೇಡು ತೀರಿಸಿಕೊಳ್ಳುತ್ತಿಲ್ಲ. ಆದರೆ ಆತ ಬಹಿರಂಗವಾಗಿ ಕ್ಷಮೆ ಕೇಳಬೇಕು ಎನ್ನುವುದು ನನ್ನ ಮನವಿ. ಸಲ್ಮಾನ್ ಖಾನ್‌ನಂತಹ ವ್ಯಕ್ತಿ ಅದೆಲ್ಲಾ ಮಾಡಲ್ಲ ಎಂದು ಗೊತ್ತು. ಆತ ಅಂಹಕಾರಿ, ಸಲ್ಮಾನ್ ಖಾನ್ ಇನ್ನು ಮುಂದೆ ನನ್ನನ್ನು ಭಯಪಡಿಸಲು ಸಾಧ್ಯವಿಲ್ಲ" ಎಂದು ಸೋಮಿ ಇನ್‌ಸ್ಟಾ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಸಲ್ಮಾನ್ ಖಾನ್ ಹಾಗೂ ಸೋಮಿ 'ಬುಲಂದ್' ಎನ್ನುವ ಚಿತ್ರದಲ್ಲಿ ನಟಿಸಿದ್ದರು. ಕಾರಣಾಂತರಗಳಿಂದ ಆ ಸಿನಿಮಾ ಕಂಪ್ಲೀಟ್ ಆಗಲಿಲ್ಲ.