»   » ವಿಡಿಯೋ: ಸೋನಾಕ್ಷಿ 'ಇಷ್ಕಾಲಿಕ್' ಹಾಡು ನೋಡಿದ್ರಾ?

ವಿಡಿಯೋ: ಸೋನಾಕ್ಷಿ 'ಇಷ್ಕಾಲಿಕ್' ಹಾಡು ನೋಡಿದ್ರಾ?

Posted By:
Subscribe to Filmibeat Kannada

ಬಿಟೌನ್ ನಲ್ಲಿ ನಾಯಕಿಯರೇ, ಗಾಯಕಿಯರಾಗುತ್ತಿರುವ ಹೊಸ ಟ್ರೆಂಡ್ ಶುರುವಾಗಿರುವ ವಿಚಾರ ನಿಮಗೆ ತಿಳಿದೇ ಇದೆ. ನಂ.1 ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ಗಾಯಕಿಯಾಗಿ ಭಡ್ತಿ ಪಡೆದು, ಬಾಲಿವುಡ್ ನಲ್ಲಿ ಫೇಮಸ್ಸಾಗಿ ಇದೀಗ ಹಾಲಿವುಡ್ ಗೂ ಪಾದಾರ್ಪಣೆ ಮಾಡಿದ್ದಾರೆ.

ತದನಂತರ ಬಿಟೌನ್ ನಟಿಮಣಿಯರಾದ ಆಲಿಯಾ ಭಟ್, ಶ್ರದ್ಧಾ ಕಪೂರ್ ಅವರು ಕೂಡ ತಮ್ಮ ತಮ್ಮ ಚಿತ್ರಗಳಿಗೆ ತಾವೇ ಧ್ವನಿ ನೀಡಿ ಎಲ್ಲರ ಮೆಚ್ಚುಗೆ ಗಳಿಸಿದರು. ಇದೀಗ ಇವರೆಲ್ಲರ ಸಾಲಿಗೆ ಹೊಸ ಸೇರ್ಪಡೆ ನಮ್ಮ 'ಪಟ್ನಾಕಿ ಪುಲ್ಜಾರಿ' ನಟಿ ಸೋನಾಕ್ಷಿ ಸಿನ್ಹಾ.[#meatban ಬಗ್ಗೆ ಮಾತಾಡಿ ಬಣ್ಣಗೆಡಿಸಿಕೊಂಡ ಸೋನಾಕ್ಷಿ]

Sonakshi Sinha debut song 'Aaj Mood Ishqholic' with uc browser

ಹೌದು 'ರಾ..ರಾಜ್ ಕುಮಾರ್' ನಟಿ ಸೋನಾಕ್ಷಿ ಸಿನ್ಹಾ ಅವರು ಗುಲ್ಶನ್ ಕುಮಾರ್ ಅರ್ಪಿಸುವ 'ಆಜ್ ಮೂಡ್ ಇಷ್ಕಾಲಿಕ್ ಹೈ' ಎಂದು ಆಲ್ಬಂ ಸಾಂಗ್ ಗೆ ತಮ್ಮ ಸುಂದರ ಧ್ವನಿ ನೀಡುವ ಜೊತೆಗೆ ಸಖತ್ ಸ್ಟೆಪ್ ಕೂಡ ಹಾಕಿದ್ದಾರೆ.

ಟಿ-ಸೀರಿಸ್ (T-Series) ಈ ಹಾಡನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದು, ಜನಪ್ರಿಯ ಮೊಬೈಲ್ ಆಪ್ ಯುಸಿ ಬ್ರೌಸರ್ (UC Browser) ಈ ಹಾಡಿನ ಟೀಸರ್ ಅನ್ನು ರಿಲೀಸ್ ಮಾಡುವುದರ ಜೊತೆಗೆ ಈ ಹಾಡಿನ ಪ್ರಾಯೋಜಕತ್ವವವನ್ನು ವಹಿಸಿದೆ.

ಇದೀಗ ಆ ಹಾಡಿನ ವಿಡಿಯೋ ಯೂಟ್ಯೂಬ್ ನಲ್ಲಿ ವೈರಲ್ ಆಗಿದ್ದು ಎಲ್ಲರ ಮೆಚ್ಚುಗೆ ಗಳಿಸುತ್ತಿದೆ. ಸದ್ಯಕ್ಕೆ ಸುಮಾರು 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿರುವ ಈ ವಿಡಿಯೋ ಎಲ್ಲರ ಹಾಟ್ ಫೇವರಿಟ್ ಆಗಿದೆ.[ಸೋನಾಕ್ಷಿ, ಇಶಾ ಕೊಪ್ಪಿಕರ್ ಮೇಲೆ ಬಿತ್ತು ಎಫ್ ಐಆರ್]

ಯುಸಿ ಬ್ರೌಸರ್ (UC Browser) ಟಿ-ಸೀರಿಸ್ (T-Series) ಜೊತೆಗೆ ಕೈ ಜೋಡಿಸಿರುವ 'ಆಜ್ ಮೂಡ್ ಇಷ್ಕಾಲಿಕ್ ಹೈ' ಹಾಡನ್ನು ಸೋನಾಕ್ಷಿ ಅವರು ಹೇಗೆ ಹಾಡಿದ್ದಾರೆ ಹಾಗೂ ಹಾಡಿಗೆ ಯಾವ ರೀತಿ ಸ್ಟೆಪ್ ಹಾಕಿದ್ದಾರೆ ಅನ್ನೋದನ್ನ ನೋಡಲು ಈ ವಿಡಿಯೋ ನೋಡಿ..

ಸಖತ್ ಹಿಪ್-ಹಾಪ್ ಸ್ಟೆಪ್ ನಲ್ಲಿ ಸೋನಾಕ್ಷಿ ಸಿನ್ಹಾ ಅವರು ಹಾಲಿಡೇ ಮೂಡ್ ನಲ್ಲಿರುವ ಪ್ರೇಕ್ಷಕರಿಗೆ ಭರ್ಜರಿ ಟ್ರೀಟ್ ನೀಡಿದ್ದಾರೆ. ಗೋವಾ ಬೀಚ್ ನ ಸುಂದರ ಪರಿಸರದಲ್ಲಿ ಈ ಹಾಡಿನ ಚಿತ್ರೀಕರಣ ಮಾಡಲಾಗಿದ್ದು, ನೃತ್ಯಕ್ಕೆ 'ಡಾನ್ಸ್ ಇಂಡಿಯಾ ಡಾನ್ಸ್' ಖ್ಯಾತಿಯ ಸಲ್ಮಾನ್ ಯೂಸುಫ್ ಖಾನ್ ಅವರು ಕೊರಿಯೋಗ್ರಫಿ ಮಾಡಿದ್ದಾರೆ.

ಈ 'ಇಷ್ಕಾಲಿಕ್' ಹಾಡಿಗೆ 'ಬೇಬಿ ಡಾಲ್' ಮತ್ತು 'ಚಿತ್ತಿಯಾನ್ ಕಲೈ ಯಾವೇ' ಯಂತಹ ಸೂಪರ್ ಹಿಟ್ ಹಾಡುಗಳನ್ನು ನೀಡಿರುವ ಮೀಟ್ ಬ್ರದರ್ಸ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಕುಮಾರ್ ಸಾಹಿತ್ಯ ಬರೆದಿರುವ ಈ ಹಾಡನ್ನು ನಟಿ ಸೋನಾಕ್ಷಿ ಸಿನ್ಹಾ ಹಾಗೂ ಮೀಟ್ ಬ್ರದರ್ಸ್ ಹಾಡಿದ್ದಾರೆ. ಹಾಡಿನ ತುಂಬಾ ಫುಲ್ ಜೋಶ್ ನಲ್ಲಿ ಹೆಜ್ಜೆ ಹಾಕಿರುವ ನಟಿ ಸಖತ್ ಎಂಜಾಯ್ ಮಾಡಿದ್ದಾರೆ.

Sonakshi Sinha debut song 'Aaj Mood Ishqholic' with uc browser

ಬೋಹೆಮಿಯನ್ ಶೈಲಿಯ ನೃತ್ಯದ ಮೂಲಕ ಸುಂದರವಾಗಿ ಕಾಣಿಸಿಕೊಂಡಿರುವ ನಟಿಯ ಈ ಹಾಡನ್ನು ಇಡೀ ಬಾಲಿವುಡ್ ಚಿತ್ರತಂಡವೇ ಹೊಗಳಿದೆ. ನಟ ಜಾನ್ ಅಬ್ರಾಹಂ, ರಣವೀರ್ ಸಿಂಗ್, ಪ್ರಿಯಾಂಕ ಚೋಪ್ರಾ ಮುಂತಾದವರು ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

English summary
After her contemporaries Alia Bhatt and Shraddha Kapoor, it's now Sonakshi Sinha's turn to prove her mettle as a singer. Yes, her new song 'Aaj Mood Ishqholic Hai', has been launched by T-Series, in association with UCWeb, maker behind India's most popular mobile browser - UC Browser.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada