»   » ಸ್ಟಂಟ್ಸ್ ಮಾಡಲು ಹೋಗಿ ಕೈ ಗಾಯ ಮಾಡಿಕೊಂಡ ಸೋನಾಕ್ಷಿ

ಸ್ಟಂಟ್ಸ್ ಮಾಡಲು ಹೋಗಿ ಕೈ ಗಾಯ ಮಾಡಿಕೊಂಡ ಸೋನಾಕ್ಷಿ

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನ ಬೋಲ್ಡ್ ನಟಿ ಸೋನಾಕ್ಷಿ ಸಿನ್ಹಾ ಅವರು ಜಬರ್ದಸ್ತ್ ಆಕ್ಷನ್ ಪ್ಯಾಕೇಜ್ 'ಅಕಿರ' ಚಿತ್ರದ ಮೂಲಕ ಮತ್ತೆ ತಮ್ಮ ಅಭಿಮಾನಿಗಳಿಗೆ ಮೋಡಿ ಮಾಡಲು ತಯಾರಿ ನಡೆಸಿದ್ದಾರೆ.

ಇದೇ ಮೊದಲ ಬಾರಿಗೆ ಆಕ್ಷನ್ ದೃಶ್ಯಗಳಿರುವ 'ಅಕಿರ' ಚಿತ್ರದಲ್ಲಿ ನಟಿಸುತ್ತಿರುವುದರಿಂದ ಇದಕ್ಕಾಗಿ ಭರ್ಜರಿ ಕಸರತ್ತು ಮಾಡುವ ಭರದಲ್ಲಿ ಸೋನಾಕ್ಷಿ ಅವರು ತಮ್ಮ ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ.[ವಿಡಿಯೋ: ಸೋನಾಕ್ಷಿ 'ಇಷ್ಕಾಲಿಕ್' ಹಾಡು ನೋಡಿದ್ರಾ?]

Sonakshi Sinha Got Injured While Shooting For An Action Scene In 'Akira'

ತುಂಬಾ ಆಕ್ಷನ್-ಫೈಟ್ ಸೀನ್ ಗಳು ಇರೋದ್ರಿಂದ ಶೂಟಿಂಗ್ ಸಂದರ್ಭದಲ್ಲಿ ಸೋನಾಕ್ಷಿ ಅವರು ಪದೇ ಪದೇ ಗಾಯ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಸೋನಾಕ್ಷಿ ಅವರು ತಮ್ಮ ಕೈಗೆ ಏಟು ಮಾಡಿಕೊಂಡಿದ್ದು, ಕೈಗೆ ಗಾಯವಾದ ಚಿತ್ರವನ್ನು ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.[ಮ್ಯಾಗಜೀನ್ ಜಾಹೀರಾತಿನಲ್ಲಿ ಸೋನಾಕ್ಷಿ ಸಿನ್ಹಾ ಹಾಟ್, ಹಾಟ್]

Sonakshi Sinha Got Injured While Shooting For An Action Scene In 'Akira'

ಬಲಗೈಗೆ ಚಚ್ಚಿದ ರೀತಿಯಲ್ಲಿ ಗಾಯವಾಗಿದ್ದು, ಇದರಿಂದ ಅವರ ಕೈಯಲ್ಲಿ ಟ್ಯಾಟೂ ಹಾಕಿಕೊಂಡ ರೀತಿಯಲ್ಲಿ ಮಾರ್ಕ್ ಆಗಿದೆ. ಇದಕ್ಕೆ ನಟಿ ಸೋನಾಕ್ಷಿ ಅವರು "ನನ್ನ ಕೈಯಲ್ಲಿರುವುದು ಯುಎಸ್ ಎ ಮ್ಯಾಪ್ ನ ಟ್ಯಾಟೂ ಅಲ್ಲ, ಬದ್ಲಾಗಿ 'ಅಕಿರ' ಚಿತ್ರದ ಶೂಟಿಂಗ್ ವೇಳೆ ಆಗಿರೋ ಗಾಯ." ಅಂತ ತಮಾಷೆಯಾಗಿ ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.[ದೀಪಿಕಾ 'Mychoice'ಗೆ ಸೋನಾಕ್ಷಿ ಸಿನ್ಹಾ ತಿರುಗೇಟು]


ನಿರ್ದೇಶಕ ಎ.ಆರ್ ಮುರುಗದಾಸ್ ನಿರ್ದೇಶನ ಮಾಡಿರುವ 'ಅಕಿರ' ಚಿತ್ರದಲ್ಲಿ ನಟಿ ಸೋನಾಕ್ಷಿ ಅವರು ಹಿಂದೆಂದು ಕಂಡಿರದ ವಿಭಿನ್ನ ಅವತಾರದಲ್ಲಿ ಅಭಿಮಾನಿಗಳಿಗೆ ದರ್ಶನ ನೀಡಲಿದ್ದಾರೆ. ಸದ್ಯಕ್ಕೆ ಚಿತ್ರದ ಟ್ರೈಲರ್ ಒಂದ್ಸಾರಿ ನೋಡ್ಕೊಂಡು ಬನ್ನಿ...


English summary
Bollywood Actress Sonakshi Sinha, who is geared up to stun the audience with her action-packed avtar for the upcoming film, 'Akira', got injured while shooting an action scene for the movie. The movie is directed by A.R.Murugadoss.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada