For Quick Alerts
  ALLOW NOTIFICATIONS  
  For Daily Alerts

  ಸೊನಾಲಿ ಪೋಗಟ್ ಕೊಲೆ: ದಿನಕ್ಕೊಂದು ತಿರುವು, ಯಾರ ಪಾಲಾಗಲಿದೆ ನೂರಾರು ಕೋಟಿ ಆಸ್ತಿ?

  |

  ನಟಿ, ಸಾಮಾಜಿಕ ಜಾಲತಾಣ ತಾರೆ ಹಾಗೂ ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ತನಿಖೆ ಮುಂದುವರೆದಂತೆ ಹೊಸ-ಹೊಸ ಸತ್ಯಗಳು ಹೊರ ಬೀಳುತ್ತಿವೆ.

  ಸೊನಾಲಿ ಪೋಗಟ್ ಕೊಲೆಯನ್ನು ಆಕೆಯ ಆಸ್ತಿಯ ಮೇಲಿನ ಆಸೆಯಿಂದಲೇ ಮಾಡಲಾಗಿದೆ ಎಂಬ ಅಂಶ ಇದೀಗ ಹೊರಬಿದ್ದಿದೆ. ಸೊನಾಲಿ ಪೋಗಟ್‌ರ ಆಸ್ತಿಯ ಕೆಲವು ಭಾಗಗಳನ್ನು ಪಿಎ ಸುಧೀರ್ ತನ್ನ ಹೆಸರಿಗೆ ಮಾಡಿಸಿಕೊಳ್ಳಲು ಯತ್ನಿಸಿದ್ದ, ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

  ಸುಧೀರ್‌ ಇಂದ ನೇಮಕವಾಗಿದ್ದ ಸೊನಾಲಿ ಪೋಗಟ್‌ರ ಕಂಪ್ಯೂಟರ್ ಆಪರೇಟರ್, ಸೊನಾಲಿ ಸಾವು ಸಂಭವಿಸುತ್ತಲೆ, ಕೆಲವು ಸಿಸಿಟಿವಿ ಫುಟೇಜ್ ಹಾಗೂ ಲ್ಯಾಪ್‌ಟಾಪ್ ಜೊತೆ ಪರಾರಿಯಾಗಿದ್ದ ಆತನನ್ನು ಪೊಲೀಸರು ಬಂಧಿಸಿದ್ದು, ಆತನಿಂದ ಲ್ಯಾಪ್‌ಟಾಪ್ ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

  ಇನ್ನು ಮರಣೋತ್ತರ ಪರೀಕ್ಷೆ ಸಮಯದಲ್ಲಿ ಸೊನಾಲಿ ಪೋಗಟ್ ದೇಹದ ಮೇಲೆ ಕಂಡು ಬಂದ 46 ಗಾಯದ ಗುರುತುಗಳ ಬಗ್ಗೆ ಪೊಲೀಸರು ಸ್ಪಷ್ಟನೆ ನೀಡಿದ್ದು, ಗೋವಾದ ರೆಸ್ಟಾರೆಂಟ್‌ನಲ್ಲಿ ಮಾದಕ ವಸ್ತು ಸೇವಿಸಿದ ಬಳಿಕ ಆಕೆ ಸ್ವಾಧೀನದಲ್ಲಿರದೇ ಓಡಾಡಲು ಕಷ್ಟಪಡುವಾಗ ಆದ ಗಾಯಗಳವು ಎಂದಿದ್ದಾರೆ. ಗೋವಾ ಪೊಲೀಸರು ಸೊನಾಲಿಯ ಹರಿಯಾಣದ ಮನೆ, ಅಪಾರ್ಟ್‌ಮೆಂಟ್, ಫಾರ್ಮ್‌ ಹೌಸ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

  ಈ ನಡುವೆ ಸೊನಾಲಿ ಪೋಗಟ್‌ರ ಒಟ್ಟು ಆಸ್ತಿ ಹಾಗೂ ಅದರ ಮುಂದಿನ ವಾರಸುದಾರರ ಬಗ್ಗೆ ಚರ್ಚೆ ನಡೆದಿದೆ. ಸೊನಾಲಿ ಪೋಗಟ್‌ಗೆ 100 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಇದೆ. ಈ ಆಸ್ತಿಗೆ ಇನ್ನು ಮುಂದೆ ಸೊನಾಲಿ ಪೋಗಟ್‌ರ ಮಗಳು ವಾರಸುದಾರಳಾಗಿರುತ್ತಾರೆ ಎನ್ನಲಾಗಿದೆ. ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಸೊನಾಲಿ ಪೋಗಟ್‌ರ ಪುತ್ರಿ ಯಶೋಧರಾ, ಅಮ್ಮನ ಸಾವಿನ ತನಿಖೆ ತೃಪ್ತಿ ತಂದಿಲ್ಲ, ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದಿದ್ದಾರೆ.

  ಸೊನಾಳಿ ಪೋಗಟ್‌ರ ಪುತ್ರಿ ವಯಸ್ಸು ಇನ್ನೂ ಹದಿನೈದು ವರ್ಷ ಆಗಿದ್ದು, ಯಶೋಧಾಳ ತಂದೆ, ಸೊನಾಲಿಯ ಪತಿ ಸಂಜಯ್ ಪೋಗಟ್ ಸಹ 2016 ರಲ್ಲಿ ಅನುಮಾನಕರ ರೀತಿಯಲ್ಲಿ ಸಾವನ್ನಪ್ಪಿದರು. ಈಗ ಸೊನಾಲಿ ಸಹ ಸಾವನ್ನಪ್ಪಿದ್ದಾರೆ. ಇದೀಗ ಎಲ್ಲ ಆಸ್ತಿಗೆ ಯಶೋಧಾ ವಾರಸುದಾರರಾಗುತ್ತಿದ್ದು ಆಕೆಯ ಜೀವಕ್ಕೂ ಬೆದರಿಕೆ ಇದೆ ಎಂದು ಕುಟುಂಬದವರು ಆತಂಕ ವ್ಯಕ್ತಪಡಿಸಿದ್ದಾರೆ.

  ಸೊನಾಲಿ ಪೋಗಟ್ ಕೆಲವು ದಿನಗಳ ಹಿಂದೆ ಗೋವಾಕ್ಕೆ ಶೂಟಿಂಗ್‌ಗೆಂದು ತೆರಳಿದ್ದರು. ಮನೆಯಲ್ಲಿ ಏಳು ದಿನದ ಶೂಟಿಂಗ್ ಎಂದು ಹೇಳಿದ್ದರು. ಆದರೆ ಎರಡು ದಿನಕ್ಕೆ ಮಾತ್ರವೇ ಹೋಟೆಲ್ ಬುಕ್ ಮಾಡಲಾಗಿತ್ತು. ಗೋವಾದ ರೆಸ್ಟೊರೆಂಟ್‌ ಒಂದರಲ್ಲಿ ಪಾರ್ಟಿ ಮಾಡಿದ್ದ ಸೊನಾಲಿ ಪೋಗಟ್ ಅಲ್ಲಿಯೇ ಸುಸ್ತಾಗಿದ್ದರು. ಆಕೆಯನ್ನು ಆಕೆಯ ಸಹಾಯಕರು ಹೋಟೆಲ್‌ ರೂಂಗೆ ಕರೆದಯ್ದಿದ್ದರು. ಅಲ್ಲಿಂದ ಆಸ್ಪತ್ರೆಗೆ ಕರೆದೊಯ್ದರಾದರೂ ಮಾರ್ಗ ಮಧ್ಯೆ ಸೊನಾಲಿ ನಿಧನ ಹೊಂದಿದರು.

  ಪೊಲೀಸ್ ತನಿಖೆಯಲ್ಲಿ ಸೊನಾಲಿಯ ಸಹಾಯಕರು ಸೊನಾಲಿಗೆ ಗೋವಾದ ರೆಸ್ಟೊರೆಂಟ್‌ನಲ್ಲಿಯೇ ಮಾದಕ ವಸ್ತು ನೀಡಿದ್ದ ವಿಷಯ ಬಹಿರಂಗವಾಗಿದೆ.

  English summary
  Actress, BJP leader Sonali Phogat murder case in taking new turns every day. She had 110 crore worth asset who will look after that asset.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X