For Quick Alerts
  ALLOW NOTIFICATIONS  
  For Daily Alerts

  ನಟಿಯ ಹಠಾತ್ ಸಾವಿಗೆ ತಿರುವು: ಕೊಲೆ ಎಂದ ಸಹೋದರ

  |

  ನಟಿ ಹಾಗೂ ರಾಜಕಾರಣಿ ಸೊನಾಲಿ ಪೋಗಟ್ ನಿನ್ನೆಯಷ್ಟೆ ಗೋವಾದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಾಜಿ ಬಿಗ್‌ಬಾಸ್ ಸ್ಪರ್ಧಿಯೂ ಆಗಿದ್ದ ಸೊನಾಲಿಯ ಸಾವು ಮನೊರಂಜನಾ ಲೋಕದಲ್ಲಿ ಸೂತಕದ ಛಾಯೆ ಮೂಡಿಸಿತ್ತು.

  ಆದರೆ ನಟಿಯ ಸಾವಿಗೆ ತಿರುವು ದೊರೆತಿದ್ದು, ''ನನ್ನ ಅಕ್ಕನದ್ದು ಹೃದಯಾಘಾತವಲ್ಲ ಬದಲಿಗೆ ಕೊಲೆ'' ಎಂದು ಆರೋಪಿಸಿದ್ದಾರೆ ಮೃತ ಸೊನಾಲಿಯ ಸಹೋದರ ರಿಂಕು ಢಾಕಾ.

  ಸೊನಾಲಿ ಸಾವಿನ ಬಳಿಕ ಮಾತನಾಡಿದ್ದ ಆಕೆಯ ಸಹೋದರಿಯರು, ''ಸೊನಾಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದರೆ ನಮ್ಮ ಕುಟುಂಬದವರಿಗೆ ನಂಬಲು ಸಾಧ್ಯವಾಗುತ್ತಿಲ್ಲ. ಸೊನಾಲಿ ಸಾಯುವ ಕೆಲವು ಗಂಟೆಗಳ ಹಿಂದೆಯಷ್ಟೆ ಅಮ್ಮನಿಗೆ ಕರೆ ಮಾಡಿ ಏನೋ ಕೆಲವು ಕುತಂತ್ರಗಳು ತಮ್ಮ ಸುತ್ತ ನಡೆಯುತ್ತಿರುವುದಾಗಿ ಹೇಳಿಕೊಂಡಿದ್ದರು'' ಎಂದಿದ್ದರು.

  ಇದೀಗ ಸೊನಾಲಿಯ ಸಹೋದರ ಸಹ ಇದೇ ರೀತಿಯ ಅನುಮಾನ ವ್ಯಕ್ತಪಡಿಸಿದ್ದು, ''ನನ್ನ ಸಹೋದರಿ ಸೊನಾಲಿ ಹೃದಯಾಘಾತದಿಂದ ಸಾವನ್ನಪ್ಪಿಲ್ಲ. ಆಕೆಯನ್ನು ಗೋವಾದಲ್ಲಿ ಕೊಲ್ಲಲಾಗಿದೆ. ಅಲ್ಲಿನ ಸಿಸಿಟಿವಿ ಫುಟೇಜ್ ಕಾಣೆಯಾಗಿದೆ. ಹಾಗೂ ಆಕೆಯ ಹರ್ಯಾಣದ ಫಾರಂ ಹೌಸ್‌ನಲ್ಲಿದ್ದ ಲ್ಯಾಪ್‌ಟಾಪ್ ಈಗ ಕಾಣುತ್ತಿಲ್ಲ'' ಎಂದಿದ್ದಾರೆ.

  ''ನನ್ನ ಸಹೋದರಿ ಸಾಯುವ ಕೆಲವು ಗಂಟೆಗಳ ಮುಂಚೆ ನನ್ನ ತಾಯಿ, ಸಹೋದರಿ, ಅಣ್ಣನಿಗೆ ಕರೆ ಮಾಡಿ ಮಾತನಾಡಿದ್ದರು. ಆಕೆಯ ಇಬ್ಬರು ಸಿಬ್ಬಂದಿಗಳ ಬಗ್ಗೆ ಅನುಮಾನ ಮತ್ತು ಅಸಮಾಧಾನ ವ್ಯಕ್ತಪಡಿಸಿದ್ದರು. ಹಾಗೆ ಹೇಳಿದ ಕೆಲವೇ ಗಂಟೆಗಳಲ್ಲಿ ಆಕೆ ಸಾವನ್ನಪ್ಪಿದ್ದಾರೆ'' ಎಂದಿದ್ದಾರೆ.

  ''ಆಕೆಯ ಖಾಸಗಿ ಸಹಾಯಕ ಸೇರಿದಂತೆ ಇಬ್ಬರು ವ್ಯಕ್ತಿಗಳ ಮೇಲೆ ನಮಗೆ ಅನುಮಾನ ಇದೆ. ಹಾಗಾಗಿ ನಾವು ಉತ್ತರ ಗೋವಾದ ಅಂಜುಮ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ. ಆಕೆಯ ಸಾವಿನ ಬಗ್ಗೆ ಹಲವು ಅನುಮಾನಗಳಿದ್ದು, ಆಕೆಯ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕುಟುಂಬ ಸದಸ್ಯರಾದ ನಾವು ಒತ್ತಾಯಿಸುತ್ತಿದ್ದೆವೆ'' ಎಂದಿದ್ದಾರೆ.

  ''ಆದರೆ ಪೊಲೀಸರು ನಾವು ಹೇಳಿದ ಇಬ್ಬರು ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರಾಕರಿಸಿದ್ದಾರೆ. ಹಾಗಾಗಿ ನಾವು ಆಕೆಯ ಮರಣೋತ್ತರ ಪರೀಕ್ಷೆಯನ್ನು ಗೋವಾದಲ್ಲಿ ನಡೆಸಲು ಸಮ್ಮತಿಸುವುದಿಲ್ಲ. ಆಕೆಯ ಮರಣೋತ್ತರ ಪರೀಕ್ಷೆಯು ದೆಹಲಿಯಲ್ಲಿ ಅಥವಾ ಜೈಪುರದಲ್ಲಿಯೇ ನಡೆಯಬೇಕು. ಆಕೆ ಕಳೆದ ಹದಿನೈದು ವರ್ಷದಿಂದಲೂ ಬಿಜೆಪಿ ಸಕ್ರಿಯ ಸದಸ್ಯೆ, ಈ ಪ್ರಕರಣದಲ್ಲಿ ಪ್ರಧಾನ ಮಂತ್ರಿಯವರು ಮಧ್ಯ ಪ್ರವೇಶಿಸಲು ಒತ್ತಾಯಿಸುತ್ತೇವೆ'' ಎಂದಿದ್ದಾರೆ.

  ಸೊನಾಲಿ ಪೋಗಟ್ ಅವರ ಕುಟುಂಬದ ವಿರೋಧದ ನಡುವೆಯೂ ಗೋವಾದಲ್ಲಿಯೇ ಅವರ ಮರಣೋತ್ತರ ಪರೀಕ್ಷೆ ನಡೆದಿದ್ದು, ಮರಣೋತ್ತರ ಪರೀಕ್ಷೆಯ ವಿಡಿಯೋ ಚಿತ್ರೀಕರಣವನ್ನು ಮಾಡಲಾಗಿದೆ.

  English summary
  Actress, BJP leader Sonali Phogat's brother claimed his sister Murdered in Goa. He said family demand CBI inquiry.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X