»   » ರಸಿಕರ ಮನತಣಿಸುವ ಸೋನಂ ಕಪೂರ್ ಗೆಟಪ್

ರಸಿಕರ ಮನತಣಿಸುವ ಸೋನಂ ಕಪೂರ್ ಗೆಟಪ್

By: ರವಿಕಿಶೋರ್
Subscribe to Filmibeat Kannada

ಬಾಲಿವುಡ್ ನ ಮೋಸ್ಟ್ ಫ್ಯಾಷನಬಲ್ ತಾರೆ ಎಂದು ಕರೆಸಿಕೊಂಡಿರುವ ಸೋನಂ ಕಪೂರ್ ಇದೀಗ ಹೊಸ ಗೆಟಪ್ ನಲ್ಲಿ ರಸಿಕರ ಹೃದಯಕ್ಕೆ ಲಗ್ಗೆ ಹಾಕಿದ್ದಾರೆ. ಫೆಮೀನಾ ಲಗ್ಜುರಿ ಸಂಚಿಕೆಗಾಗಿ ತಮ್ಮ ಅಂದಚೆಂದವನ್ನು ತೆರೆದಿಟ್ಟಿದ್ದಾರೆ ಸೋನಂ.

ಪಾತ್ರಗಳ ಆಯ್ಕೆಯಲ್ಲಿ ಅಳೆದುತೂಗುವ ಸ್ವಭಾವ ಸೋನಂ ಅವರದು. ಹಾಗಾಗಿ ಅಭಿನಯಿಸಿದ್ದು ಕೆಲವೇ ಚಿತ್ರಗಳಾದರೂ ಎಲ್ಲವೂ ನೆನಪಿನಲ್ಲಿ ಉಳಿಯುವಂತಹ ಪಾತ್ರಗಳು. ಚಿತ್ರಗಳ ಆಯ್ಕೆಯಲ್ಲಿ ಬಹಳ ಚೂಸಿಯಾಗಿದ್ದಕ್ಕೋ ಏನೋ ಸೋನಂಗೆ ಅವಕಾಶಗಳ ಕೊರತೆಯೂ ಕಾಡುತ್ತಿದೆ.

ಆದರೆ ಈ ಬಿಡುವಿನ ವೇಳೆಯಲ್ಲಿ ಸುಖಾಸುಮ್ಮನೆ ಕಾಲಹರಣ ಮಾಡದೆ ಆದಷ್ಟು ತಮ್ಮ ಸೌಂದರ್ಯವನ್ನು ಪ್ರದರ್ಶಿಸುತ್ತಾ ನಿರ್ದೇಶಕ, ನಿರ್ಮಾಪಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಈ ಹಿಂದೆಯೂ ಸಾಕಷ್ಟು ಬಾರಿ ತಮ್ಮ ಅಂದಚೆಂದವನ್ನು ನಿಯತಕಾಲಿಕೆಯಲ್ಲಿ ತೆರೆದಿಟ್ಟಿದ್ದರು. ಇದೀಗ ಇನ್ನೊಂದು ಗೆಟಪ್ ನೋಡಿ...

ಯಾವ ಬಿಂಕದ ಬೆಡಗಿಗಿಂತಲೂ ಕಮ್ಮಿ ಇಲ್ಲ

ಜತಿನ್ ಕಂಪಾನಿ ಅವರ ಅವರು ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದಿರುವ ಚಿತ್ರಗಳಿವು. ತಾನೂ ಯಾವ ಬಿಂಕದ ಬೆಡಗಿಗಿಂತಲೂ ಕಮ್ಮಿ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಬಾಲಿವುಡ್ ಚಿತ್ರಜಗತ್ತಿನಲ್ಲಿ ಬಿಚ್ಚಾಟದಲ್ಲಿ ಸಿಕ್ಕಾಪಟ್ಟೆ ಕಾಂಪಿಟೇಷನ್ ಶುರುವಾಗಿರುವುದು ಗೊತ್ತೇ ಇದೆಯಲ್ಲಾ.

ವೃತ್ತಿ ಬದುಕಿನ ಹಾದಿಯನ್ನು ಇನ್ನಷ್ಟು ಸುಗಮ

ಕಪೂರ್ ಖಾನ್ ದಾನಿಗೆ ಸೇರಿದ ಈ ಬೆಡಗಿ ತನ್ನ ಓರಗೆಯ ಬೆಡಗಿಯನ್ನು ಹಿಂದಿಕ್ಕಿ ಮುಂದೆ ಹೆಜ್ಜೆ ಹಾಕುತ್ತಿದ್ದಾರೆ. ಈ ಹಿಂದೊಮ್ಮೆ ತಮ್ಮ ದೇಹಸಿರಿಯನ್ನು 'ಜಿಕ್ಯು' ನಿಯತಕಾಲಿಕೆಯಲ್ಲಿ ಬಿಚ್ಚಿಟ್ಟಿದ್ದು ತಮ್ಮ ವೃತ್ತಿ ಬದುಕಿನ ಹಾದಿಯನ್ನು ಇನ್ನಷ್ಟು ಸುಗಮವಾಗಿಸಿಕೊಳ್ಳಲು ಹೊರಟಿದ್ದಾರೆ.

ಸೋನಂ ಮಾತ್ರ ಪಕ್ಕಾ ಪ್ರೊಫೆಷನಲ್

ಬಹಳಷ್ಟು ಸಿನಿಮಾ ತಾರೆಗಳು ಹಾಟ್ ಫೋಟೋಗಳನ್ನು ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಪ್ರಕಟಿಸುತ್ತಿದ್ದರೆ ಸೋನಂ ಮಾತ್ರ ಪಕ್ಕಾ ಪ್ರೊಫೆಷನಲ್. ಕೇವಲ ನಿಯತಕಾಲಿಕೆಗಳಲ್ಲಿ ಮಾತ್ರ ತಮ್ಮ ಮೈಮಾಟ ಪ್ರದರ್ಶಿಸುತ್ತಿದ್ದಾರೆ.

ಅಪ್ಪನ ಸಲಹೆ ಸೂಚನೆಗಳನ್ನು ಮೀರದಂತೆ

ಈ ರೀತಿ ತಮ್ಮ ವೈಯಾರ ಪ್ರದರ್ಶಿಸಲು ಅಪ್ಪ ಅನಿಲ್ ಕಪೂರ್ ಸಲಹೆ ಸೂಚನೆಗಳು ಇವೆ. ಅಪ್ಪನ ಸಲಹೆ ಸೂಚನೆಗಳನ್ನು ಮೀರದಂತೆ ಸೋನಂ ಮಿಂಚುತ್ತಿದ್ದಾರೆ.

ಈಜುಡುಗೆಯಲ್ಲಿ ಪಡ್ಡೆಗಳನ್ನು ಮೈಮರೆಸಲಿದ್ದಾರೆ

ತಮ್ಮ ಸಹೋದರಿ ರಿಯಾ ಕಪೂರ್ ನಿರ್ಮಿಸುತ್ತಿರುವ 'ಖೂಬ್ ಸೂರತ್' ಚಿತ್ರದಲ್ಲಿ ಸಖತ್ ಹಾಟ್ ಪಾತ್ರವನ್ನು ಪೋಷಿಸುತ್ತಿದ್ದಾರೆ ಸೋನಂ. ಈಜುಡುಗೆಯಲ್ಲಿ ಪಡ್ಡೆಗಳನ್ನು ಮೈಮರೆಸಲಿದ್ದಾರೆ ಎಂಬುದು ಬಾಲಿವುಡ್ ಬಾತ್.

ದೇಹದ ತೂಕವನ್ನು ಕಾಪಾಡಿಕೊಳ್ಳುವುದರಲ್ಲೂ ಜಾಣೆ

ಬಹುತೇಕ ತಾರೆಗಳು ತಮ್ಮ ದೇಹದ ತೂಕದಲ್ಲಿ ಬಹಳಷ್ಟು ಜಾಗ್ರತೆ ವಹಿಸುತ್ತಾರೆ. ಈ ವಿಚಾರದಲ್ಲಿ ಸೋನಂ ಕಪೂರ್ ಸಹ ಹೊರತಲ್ಲ. ದೇಹದ ತೂಕವನ್ನು ಕಾಪಾಡಿಕೊಳ್ಳುವುದರಲ್ಲೂ ಜಾಣೆ.

English summary
Bollywood beauty Sonam Kapoor once again shows how effortlessly she carries her fashion in this latest shoot for the luxury issue of Femina. Sonam was shot by lensman Jatin Kampani for the shoot.
Please Wait while comments are loading...