»   » ಪ್ರಪ್ರಥಮ ಬಾರಿಗೆ ತುಟಿಗೆ ತುಟಿ ಬೆರೆಸಿದ ಸೋನಂ

ಪ್ರಪ್ರಥಮ ಬಾರಿಗೆ ತುಟಿಗೆ ತುಟಿ ಬೆರೆಸಿದ ಸೋನಂ

By: ಉದಯರವಿ
Subscribe to Filmibeat Kannada

ಇದೇ ಮೊದಲ ಬಾರಿಗೆ ಸೋನಂ ಕಪೂರ್ ಮಡಿವಂತಿಕೆ ಬಿಟ್ಟು ತೆರೆಯ ಮೇಲೆ ಕಾಣಿಸುತ್ತಿದ್ದಾರೆ. ಈಗಾಗಲೆ ಸಾಕಷ್ಟು ಬಾಲಿವುಡ್ ನಟಿಯರು ಕಿಸ್ಸಿಂಗ್ ಸನ್ನಿವೇಶಗಳಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದಾರೆ. ಇದೀಗ ಆ ವಿಭಾಗಕ್ಕೆ ಸೋನಂ ಹೊಸ ಸೇರ್ಪಡೆ.

ಇದೇ ಮೊದಲ ಸಲ ಅವರು ತುಟಿಗೆ ತುಟಿ ಬೆರೆಸುತ್ತಿದ್ದಾರೆ. ಇದೀಗ ಬಿಡುಗಡೆಯಾಗುತ್ತಿರುವ 'ಬೇವಕೂಫಿಯಾನ್'ಗಾಗಿ ಅವರು ಈ ರೋಮ್ಯಾಂಟಿಕ್ ಸನ್ನಿವೇಶವನ್ನು ಮಾಡಿದ್ದಾರೆ. ಚಿತ್ರದ ನಾಯಕ ನಟ ಆಯುಷ್ಮಾನ್ ಖುರಾನಾ ಜೊತೆಗಿನ ಲಿಪ್ ಲಾಕ್ ಸೀನ್ ಈಗ ಬಾಲಿವುಡ್ ನಲ್ಲಿ ಕುತೂಹಲ ಮೂಡಿಸಿದೆ. [ನಟಿ ಸೋನಂ ಕಪೂರ್ 'ಎಲ್ಲೇ' ಮೀರಿದ ಚಿತ್ರಗಳು]


ಇದು ಅವರ ಮೊಟ್ಟ ಮೊದಲ ಚುಂಬನ ಸನ್ನಿವೇಶ. ಈ ಹಿಂದೆ ಎರಡು ಚಿತ್ರಗಳಲ್ಲಿ ಸೋನಂ ಕಪೂರ್ ಕಿಸ್ಸಿಂಗ್ ಸೀನ್ ನಲ್ಲಿ ಅಭಿನಯಿಸಿದ್ದರಂತೆ. ಆದರೆ ಅದು ಸೆನ್ಸಾರ್ ನಲ್ಲಿ ಕಟ್ ಆಗಿ ಅಭಿಮಾನಿಗಳಿಗೆ ಅಧರಾಮೃತ ಮಿಸ್ ಆಗಿತ್ತು. ಈಗ ಮಾತ್ರ ಕೆಂದುಟಿಯ ಪಕ್ಕದಲ್ಲಿ ತುಂಬ ಹತ್ತಿರ ನಿಂತು ಗುರಿಯಿಟ್ಟು ಕಾಡಿಗೆಯ ಬೊಟ್ಟಿಡಲಾ ಎಂಬಂತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸೋನಂ ಕಪೂರ್ ಅವರ ವಕ್ತಾರ, "ಈ ಹಿಂದೆ ಸೋನಂ ಅವರ ಕಿಸ್ಸಿಂಗ್ ಸೀನ್ ಗಳನ್ನು ಕಾರಣಾಂತರಗಳಿಂದ ಡಿಲೀಟ್ ಮಾಡಲಾಗಿತ್ತು. ಇದು ತೆರೆಯ ಮೇಲೆ ಅವರ ಪ್ರಥಮ ಚುಂಬನ. ಇದೇ ಮಾರ್ಚ್ 14ಕ್ಕೆ ಚಿತ್ರ ತೆರೆಕಾಣುತ್ತಿದ್ದು ಸೋನಂ ಲಿಪ್ ಲಾಕ್ ನೋಡಿ" ಎಂದಿದ್ದಾರೆ. ಅಭಿಮಾನಿಗಳು ಆನಂದಿಸಬಹುದು ಇನ್ನೂ ಕೆಲವರು ಪರಿತಪಿಸಲೂಬಹುದು.

ಈ ಚಿತ್ರದಲ್ಲಿ ಬಿಕಿನಿಯಲ್ಲೂ ಸೋನಂ ದರ್ಶನ ನೀಡುತ್ತಿರುವುದು ಇನ್ನೊಂದು ವಿಶೇಷ. ದೀಪಿಕಾ ಪಡುಕೋಣೆ, ಕತ್ರಿಕಾ ಕೈಫ್, ಆಲಿಯಾ ಭಟ್ ರಂತಹ ತಾರೆಗಳು ಕಿಸ್ಸಿಂಗ್ ಸೀನ್ ನಲ್ಲಿ ಬಹಳಷ್ಟು ನುರಿತಿದ್ದಾರೆ. ಈಗ ಸೊನಂ ಕಿಸ್ಸಿಂಗ್ ಸೀನ್ ಮುಂದಿನ ಚಿತ್ರಗಳಿಗೆ ನಾಂದಿ ಬರೆಯಲಿದೆ.

English summary
Being inspired from several other contemporary actresses, Sonam Kapoor has also got an on screen kissing scene in her upcoming movie Bewakoofiyaan, which is scheduled to release on March 14 will offer the audience with a sizzling view of Sonam Kapoor in a bikini.
Please Wait while comments are loading...