For Quick Alerts
  ALLOW NOTIFICATIONS  
  For Daily Alerts

  'ನೀರ್ಜಾ'ಳ ಫಸ್ಟ್ ಡೇ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಗೊತ್ತಾ?

  By ಸೋನು ಗೌಡ
  |

  1986ರಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ಉಗ್ರಗಾಮಿಗಳಿಂದ ಹೈಜಾಕ್ ಆದ ಪ್ಯಾನ್ ಆಮ್ 73 ವಿಮಾನದ ಪ್ರಯಾಣಿಕರ ಜೀವ ರಕ್ಷಣೆಗಾಗಿ ತಾನೇ ಉಗ್ರರ ಗುಂಡಿಗೆ ಬಲಿಯಾದ ನೀರ್ಜಾ ಭಾನೊಟ್ ಎಂಬ ದಿಟ್ಟ ಹುಡುಗಿಯ ನಿಜ ಬದುಕಿನ ಸಾಹಸ ಮತ್ತು ಸೈರಣೆಯ ಕಥೆಯನ್ನು ಯಥಾವತ್ತಾಗಿ ತೆರೆಯ ಮೇಲೆ ನಿರ್ದೇಶಕ ರಾಮ್ ಮಧ್ವಾನಿ ಅವರು ತಂದಿದ್ದು, ಇದೀಗ ಬಾಲಿವುಡ್ ಸಿನಿಮಾ 'ನೀರ್ಜಾ' ಶುಕ್ರವಾರ (ಫೆಬ್ರವರಿ 19) ಬಿಡುಗಡೆ ಆಗಿ, ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

  ಬಾಲಿವುಡ್ ನಟಿ ಸೋನಂ ಕಪೂರ್, ಶಬಾನಾ ಅಜ್ಮಿ ಮತ್ತು ಯೋಗೇಂದ್ರರ ಟಿಕ್ಕು ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 80ರ ದಶಕದ 'ನೀರ್ಜಾ' ಸಿನಿಮಾ ಬಿಡುಗಡೆ ಆದ ಒಂದೇ ದಿನದಲ್ಲಿ ಬಾಕ್ಸಾಫೀಸ್ ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

  ಇಡೀ ಭಾರತದಾದ್ಯಂತ ಸುಮಾರು 700 ಸ್ಕ್ರಿನ್ ನಲ್ಲಿ ತೆರೆ ಕಂಡ 'ನೀರ್ಜಾ' ಸಿನಿಮಾ 21 ಕೋಟಿ ರೂಪಾಯಿ ಬಜೆಟ್ ನಲ್ಲಿ ನಿರ್ಮಾಣ ಆಗಿತ್ತು. ಇದರಲ್ಲಿ ಸುಮಾರು ಶೇ.40% ಚಿತ್ರಮಂದಿರಗಳಲ್ಲಿ ಫಸ್ಟ್ ಡೇ ಫಸ್ಟ್ ಶೋ ಹೌಸ್ ಫುಲ್ ಆಗಿತ್ತು.

  ಅಂದಹಾಗೆ ನಟಿ ಸೋನಂ ಕಪೂರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ 'ನೀರ್ಜಾ' ಚಿತ್ರದ ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತಾ? ಬರೋಬ್ಬರಿ 4.70 ಕೋಟಿ ರೂಪಾಯಿ. ಅದೂ 700 ಚಿತ್ರಮಂದಿರಗಳಲ್ಲಿ ಕೇವಲ ಲಿಮಿಟೆಡ್ ಪ್ರದರ್ಶನ ಕಂಡು ಇಷ್ಟು ಕಲೆಕ್ಷನ್ ಮಾಡಿದೆ.

  ಒಂದು ವೇಳೆ ತೆರೆಕಂಡ ಎಲ್ಲಾ ಚಿತ್ರಮಂದಿರಗಳಲ್ಲಿ ದಿನಕ್ಕೆ 3 ರಿಂದ 4 ಅಂತ ಪ್ರದರ್ಶನ ಕಂಡಿದ್ದರೆ, ಇನ್ನೆಷ್ಟು ಕಲೆಕ್ಷನ್ ಆಗುತ್ತಿತ್ತು ಏನೋ. ಇನ್ನು ಇದೇ ರೀತಿ ಶನಿವಾರ ಮತ್ತು ಭಾನುವಾರ ಕೂಡ ಒಳ್ಳೆ ರೆಸ್ಪಾನ್ಸ್ ಸಿಕ್ಕರೆ 3 ದಿನದಲ್ಲಿ ಸುಮಾರು 10 ರಿಂದ 15 ಕೋಟಿ ರೂಪಾಯಿ ತನಕ ಸಿನಿಮಾ ಗಳಿಕೆ ಮಾಡಬಹುದು ಎಂಬ ಲೆಕ್ಕಾಚಾರ ಹಾಕಲಾಗಿದೆ.

  ನಟಿ ಸೋನಂ ಕಪೂರ್ ಅವರೇ ಈ ಸಿನಿಮಾದಲ್ಲಿ ಮುಖ್ಯ ಆಕರ್ಷಣೆಯಾಗಿರುವುದರಿಂದ ಅವರ ಸಿನಿಪಯಣದಲ್ಲಿ 'ನೀರ್ಜಾ' ಸಿನಿಮಾ ಒಂದೊಳ್ಳೆ ಬ್ರೇಕ್ ಕೊಡೋದು ಪಕ್ಕಾ ಅಂತ ಬಿಟೌನ್ ನ ಸಿನಿಪಂಡಿತರು ಈಗಿನಿಂದಲೇ ಲೆಕ್ಕಾಚಾರ ಹಾಕುತ್ತಿದ್ದಾರೆ.

  ಸದ್ಯಕ್ಕೆ ಫಸ್ಟ್ ಡೇ ಅದೂ ಶುಕ್ರವಾರ ಇಷ್ಟು ಕಲೆಕ್ಷನ್ ಮಾಡಿದೆ, ಇನ್ನು ಈ ವೀಕೆಂಡ್ ನಲ್ಲಿ ಒಳ್ಳೆ ಕಲೆಕ್ಷನ್ ಮಾಡೋದು ಪಕ್ಕಾ. ಆದ್ದರಿಂದ ಸೋನಂ ಕಪೂರ್ 'ನೀರ್ಜಾ' ಈ ಬಾರಿ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸೋದು ಗ್ಯಾರಂಟಿ ಅಂತ ಬಾಕ್ಸಾಫೀಸ್ ಪಂಡಿತರು ಮಾತನಾಡಿಕೊಳ್ಳುತ್ತಿದ್ದಾರೆ.

  English summary
  Actress Sonam Kapoor's Neerja has fared very well on the opening day at the Indian Box Office. The film directed by Ram Madhvani and jointly produced by Atul Kasbekar and Fox Star Hindi is being loved by one and all. Day one collections, "Fri ₹ 4.70 cr [700 theatres/limited shows]. India biz... Expect biz to zoom upwards on Sat and Sun... Quality cinema triumphs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X