»   » ಬಾಲಿವುಡ್ ನಟಿ ಸೋನಂ ಕಪೂರ್ ಗೆ ಹಂದಿ ಜ್ವರ

ಬಾಲಿವುಡ್ ನಟಿ ಸೋನಂ ಕಪೂರ್ ಗೆ ಹಂದಿ ಜ್ವರ

Posted By:
Subscribe to Filmibeat Kannada

ಮಾರಕ ಹಂದಿ ಜ್ವರ ಮತ್ತೆ ವಕ್ಕರಿಸಿದೆ. ಎಲ್ಲೆಡೆ ಹಂದಿ ಜ್ವರ ವ್ಯಾಪಕವಾಗಿ ಹರಡುತ್ತಿದೆ. ಎಚ್ 1 ಎನ್ 1 ಸೋಂಕಿನಿಂದ ಅನೇಕರು ಬಳಲುತ್ತಿದ್ದಾರೆ. ಅದ್ರಲ್ಲಿ ಬಾಲಿವುಡ್ ನಟಿ ಸೋನಂ ಕಪೂರ್ ಕೂಡ ಒಬ್ಬರು.

ಹೌದು, ನಟಿ ಸೋನಂ ಕಪೂರ್ ಗೆ ಎಚ್ 1 ಎನ್ 1 ಇರುವುದು ದೃಢಪಟ್ಟಿದೆ. ಶೀತ, ಕೆಮ್ಮು, ಜ್ವರದಿಂದ ಬಳಲುತ್ತಿದ್ದ ಸೋನಂ ಕಪೂರ್ ರನ್ನ ರಾಜ್ ಕೋಟ್ ನಲ್ಲಿರುವ ಸ್ಟೆರ್ಲಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೈರಲ್ ಫೀವರ್ ಇದ್ದ ಕಾರಣ ರಕ್ತ ಪರೀಕ್ಷೆಗೆ ಒಳಪಟ್ಟ ಸೋನಂಗೆ ಹಂದಿ ಜ್ವರ ಇರುವುದು ಪತ್ತೆಯಾಗಿದೆ. ತಕ್ಷಣ ಎಚ್ಚೆತುಕೊಂಡಿರುವ ಸ್ಟೆರ್ಲಿಂಗ್ ಆಸ್ಪತ್ರೆಯ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ.

sonam kapoor

''ಜ್ವರ ಇದ್ದ ಕಾರಣ ಆಸ್ಪತ್ರೆಗೆ ದಾಖಲಾದರು. ಅವರ ಬ್ಲಡ್ ಸ್ಯಾಂಪಲ್ ಗಳನ್ನ ಪರೀಕ್ಷೆಗೆ ಒಳ್ಳಪಡಿಸಿದ್ವಿ. ಸ್ವೈನ್ ಫ್ಲೂ ಪಾಸಿಟಿವ್ ಇದೆ. ಚಿಕಿತ್ಸೆ ನೀಡುತ್ತಿದ್ದೇವೆ. ಮುಂಬೈ ಟ್ರೇನರ್ ನಿಂದ ಇನ್ಫೆಕ್ಷನ್ ಆಗಿದೆ ಅಂತ ತಿಳಿದುಬಂದಿದೆ.'' ಅಂತ ಸ್ಪೆರ್ಲಿಂಗ್ ಆಸ್ಪತ್ರೆ ವೈದ್ಯ ಚಿರಾಗ್ ಮಾತ್ರವಾಡಿಯಾ ತಿಳಿಸಿದ್ದಾರೆ.

'ಪ್ರೇಮ್ ರತನ್ ಧನ್ ಪಾಯೋ' ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಂಡಿರುವ ಸೋನಂ ಕಪೂರ್, ಕಳೆದ ಕೆಲ ದಿನಗಳ ಹಿಂದೆ ಚಿತ್ರೀಕರಣ ನಡೆಯುತ್ತಿದ್ದ ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ಉಸಿರಾಟದ ತೊಂದರೆ ಮತ್ತು ದೈಹಿಕ ಬಳಲಿಕೆಯಿಂದ ಬಳಲಿದ್ದ ಸೋನಂಗೆ ತಕ್ಷಣವೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.[ಸೆಟ್ ನಲ್ಲೇ ಕುಸಿದು ಬಿದ್ದ ಸೋನಮ್ ಕಪೂರ್ ]

ಅದಾದ ಬಳಿಕ ಸೋನಂಗೆ ಶೀತ, ಕೆಮ್ಮು, ವಾಂತಿ ಮತ್ತು ಜ್ವರ ಕಾಣಿಸಿಕೊಂಡಿದೆ. ಸೋನಂ ಫಿಟ್ನೆಸ್ ಟ್ರೇನರ್ ನಿಂದ ಸೋಂಕು ಹರಡಿದೆ ಅಂತ ಮೂಲಗಳು ತಿಳಿಸಿವೆ. ಸದ್ಯ ಸ್ಟೆರ್ಲಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋನಂ ಆದಷ್ಟು ಬೇಗ ಗುಣಮುಖವಾಗಲಿ ಅಂತ ಆಶಿಸೋಣ. (ಏಜೆನ್ಸೀಸ್)

English summary
Bollywood Actress Sonam Kapoor was tested H1N1 virus positive, after she was admitted into Sterling Hospital in Rajkot.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada