twitter
    For Quick Alerts
    ALLOW NOTIFICATIONS  
    For Daily Alerts

    ಕೋಟಿಗಟ್ಟಲೆ ಹಣದ ಬದಲು ಬಡ ಜನರಿಗೆ ಉಚಿತ ಕಿಡ್ನಿ ಕಸಿ ಮಾಡಿಸಿದ ಸೋನು ಸೂದ್!

    |

    ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ದೇಶದ ಮೂಲೆ-ಮೂಲೆಯಲ್ಲಿ ಸಿಲುಕಿದ್ದ ಸಾವಿರಾರು ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ಹಿಂದಿರುಗುವಂತೆ ಮಾಡಿದ ಸೋನು ಸೂದ್ ಆ ನಂತರವೂ ತಮ್ಮ ಸಾಮಾಜಿಕ ಕಾರ್ಯವನ್ನು ಜಾರಿಯಲ್ಲಿಟ್ಟಿದ್ದಾರೆ. ಈವರೆಗೆ ಸಾವಿರಾರು ಮಂದಿಗೆ ಅವರ ಅವಶ್ಯಕತೆಗೆ ಅನುಗುಣವಾಗಿ ವಿವಿಧ ರೀತಿಯ ಸಹಾಯಗಳನ್ನು ಮಾಡುತ್ತಲೇ ಬಂದಿದ್ದಾರೆ. ಇಷ್ಟೆಲ್ಲ ಸಹಾಯ ಮಾಡುವ ಸೋನು ಸೂದ್‌ಗೆ ಹಣ ಎಲ್ಲಿಂದ ಬರುತ್ತದೆ ಎಂದು ಹಲವರು ಅನುಮಾನವನ್ನೂ ವ್ಯಕ್ತಪಡಿಸಿದ್ದರು.ಕೋಟಿಗಟ್ಟಲೆ ಹಣದ ಬದಲು ಬಡ ಜನರಿಗೆ ಉಚಿತ ಕಿಡ್ನಿ ಕಸಿ ಮಾಡಿಸಿದ ಸೋನು ಸೂದ್!

    ನಟ ಸೋನು ಸೂದ್‌ರಿಂದ ಸಹಾಯ ಪಡೆದ ಜನ ಅವರನ್ನು 'ಮಸೀಹ' (ದೇವರು) ಎಂದೇ ಕರೆಯುತ್ತಾರೆ. ಅನ್ವರ್ಥ ನಾಮಕ್ಕೆ ತಕ್ಕಂತೆ ಕಾರ್ಯಗಳನ್ನು ಸೋನು ಸೂದ್ ಮಾಡುತ್ತಿದ್ದಾರೆ.

    Real Hero Sonu Sood: ಸಹಾಯಕ್ಕಾಗಿ 'ಸೋನು ಸೂದ್' ಮನೆ ಮುಂದೆ ಜನರ ದಂಡು!Real Hero Sonu Sood: ಸಹಾಯಕ್ಕಾಗಿ 'ಸೋನು ಸೂದ್' ಮನೆ ಮುಂದೆ ಜನರ ದಂಡು!

    ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ದೇಶದ ಮೂಲೆ-ಮೂಲೆಯಲ್ಲಿ ಸಿಲುಕಿದ್ದ ಸಾವಿರಾರು ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ಹಿಂದಿರುಗುವಂತೆ ಮಾಡಿದ ಸೋನು ಸೂದ್ ಆ ನಂತರವೂ ತಮ್ಮ ಸಾಮಾಜಿಕ ಕಾರ್ಯವನ್ನು ಜಾರಿಯಲ್ಲಿಟ್ಟಿದ್ದಾರೆ.

    ಈವರೆಗೆ ಸಾವಿರಾರು ಮಂದಿಗೆ ಅವರ ಅವಶ್ಯಕತೆಗೆ ಅನುಗುಣವಾಗಿ ವಿವಿಧ ರೀತಿಯ ಸಹಾಯಗಳನ್ನು ಮಾಡುತ್ತಲೇ ಬಂದಿದ್ದಾರೆ. ಇಷ್ಟೆಲ್ಲ ಸಹಾಯ ಮಾಡುವ ಸೋನು ಸೂದ್‌ಗೆ ಹಣ ಎಲ್ಲಿಂದ ಬರುತ್ತದೆ ಎಂದು ಹಲವರು ಅನುಮಾನವನ್ನೂ ವ್ಯಕ್ತಪಡಿಸಿದ್ದರು. ಐಟಿ ಅಧಿಕಾರಿಗಳು ಪರಿಶೀಲನೆ ಸಹ ಮಾಡಿದರು. ಏನೇ ಆದರೂ ಸೋನು ಸೂದ್‌ರ ಸಮಾಜ ಸೇವೆ ನಿಲ್ಲುತ್ತಿಲ್ಲ. ಇತ್ತೀಚಿಗಿನ ಸಂದರ್ಶನವೊಂದರಲ್ಲಿ ತಾವು ಸಾಮಾಜಿಕ ಕಾರ್ಯ ಮಾಡಲು ಹಣ ಹೊಂದಿಸುವುದು ಹೇಗೆ ಎಂಬುದರ ಬಗ್ಗೆಯೂ ಅವರೇ ಮಾತನಾಡಿದ್ದಾರೆ.

    ಜಾಹೀರಾತುಗಳ ಸಂಭಾವನೆ ಸಾಮಾಜಿಕ ಕಾರ್ಯಕ್ಕೆ

    ಜಾಹೀರಾತುಗಳ ಸಂಭಾವನೆ ಸಾಮಾಜಿಕ ಕಾರ್ಯಕ್ಕೆ

    ''ನಾನು ನಟಿಸಿದ ಈ ಹಿಂದಿನ ಐದು ಜಾಹೀರಾತುಗಳ ಸಂಭಾವನೆ ಸಾಮಾಜಿಕ ಕಾರ್ಯಕ್ಕೆ ಬಳಕೆ ಆಗಿದೆ. ಕೆಲವೊಮ್ಮೆ ಅಂತೂ ಕಂಪೆನಿಗಳವರು ನೇರವಾಗಿ ಹಣವನ್ನು ಶಾಲೆ, ಸರ್ಕಾರಿ ಆಸ್ಪತ್ರೆಗಳಿಗೆ ಕೊಟ್ಟು ಬಿಡುತ್ತಾರೆ. ಕೆಲವರು ನಮ್ಮ ಚಾರಿಟಿ ಮೂಲಕ ಅದನ್ನು ಸಾಮಾಜಿಕ ಕಾರ್ಯಕ್ಕೆ ಬಳಸುತ್ತಾರೆ'' ಎಂದಿದ್ದಾರೆ ನಟ ಸೋನು ಸೂದ್.

    ಸೋನು ಸೂದ್ ಶ್ರಮ ವ್ಯರ್ಥ, ಸಹೋದರಿಗೆ ಸೋಲುಸೋನು ಸೂದ್ ಶ್ರಮ ವ್ಯರ್ಥ, ಸಹೋದರಿಗೆ ಸೋಲು

    50 ಮಂದಿ ಬಡವರಿಗೆ ಲಿವರ್ ಕಸಿ

    50 ಮಂದಿ ಬಡವರಿಗೆ ಲಿವರ್ ಕಸಿ

    ''ಒಮ್ಮೆ ವಿಮಾನದಲ್ಲಿ ಪ್ರಯಾಣಿಸುವಾಗ ಆಸ್ಟರ್ ಆಸ್ಪತ್ರೆಯ ಮುಖ್ಯಾಧಿಕಾರಿಗಳು ಸಿಕ್ಕಿದ್ದರು. ನನ್ನೊಂದಿಗೆ ಕೊಲ್ಯಾಬರೇಟ್ ಆಗುವ ಇಚ್ಛೆಯನ್ನು ವ್ಯಕ್ತಪಡಿಸಿದರು. ನಾನು ಒಪ್ಪಿಕೊಂಡೆ ಆದರೆ ಒಂದು ಷರತ್ತು ಹಾಕಿದೆ. ನಾನು ನಿಮ್ಮ ಆಸ್ಪತ್ರೆಗಳಿಗೆ ಪ್ರಚಾರ ನೀಡುತ್ತೇನೆ, ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತೇನೆ ಆದರೆ ಐವತ್ತು ಜನ ಬಡವರಿಗೆ ಉಚಿತವಾಗಿ ಲಿವರ್ ಕಸಿ ಮಾಡಿಕೊಡಿ ಎಂದೆ ಅದಕ್ಕೆ ಅವರು ಒಪ್ಪಿದರು. 12 ಕೋಟಿ ವೆಚ್ಚ ಆಗಬಹುದಾಗಿದ್ದ ಲಿವರ್ ಕಸಿಯನ್ನು ಉಚಿತವಾಗಿ ಮಾಡಿಸಿದಂತಾಯಿತು'' ಎಂದಿದ್ದಾರೆ ಸೋನು ಸೂದ್.

    ಹಲವಾರು ಮಂದಿಗೆ ಸಹಾಯ ಮಾಡುತ್ತಲೇ ಇದ್ದಾರೆ

    ಹಲವಾರು ಮಂದಿಗೆ ಸಹಾಯ ಮಾಡುತ್ತಲೇ ಇದ್ದಾರೆ

    ಸೋನು ಸೂದ್ ಈವರೆಗೆ ಹಲಾವರು ಮಂದಿಗೆ ಅವರ ಅಗತ್ಯಗಳಿಗೆ ಅನುಸಾರ ನೆರವಾಗಿದ್ದಾರೆ. ಮೊದಲ ಲಾಕ್‌ಡೌನ್‌ನಲ್ಲಿ ಕಾರ್ಮಿಕರನ್ನು ಮನೆಗಳಿಗೆ ತಲುಪಿಸಿದ್ದ ಸೋನು ಸೂದ್, ಎರಡನೇ ಲಾಕ್‌ಡೌನ್‌ನಲ್ಲಿ ಆಮ್ಲಜನಕ ವಿತರಣೆ, ರೆಮ್‌ಡಿಸಿವಿರ್ ಔಷಧ ವಿತರಣೆ ಇನ್ನಿತರೆ ಸಹಾಯಗಳನ್ನು ಮಾಡಿದ್ದರು. ಆ ನಂತರವೂ ತಮ್ಮನ್ನು ನೆರವು ಕೇಳಿ ಬರುವ ಹಲವಾರು ಮಂದಿಗೆ ನೆರವು ನೀಡುತ್ತಲೇ ಇದ್ದಾರೆ. ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಆರೋಗ್ಯದ ಕುರಿತಾಗಿ ನೆರವು ಕೇಳಿದವರಿಗೆ ಸತತವಾಗಿ ನೆರವು ನೀಡುತ್ತಿದ್ದಾರೆ.

    ರಂಗಕ್ಕಿಳಿದ ಸೋನು ಸೂದ್: ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ನೆರವುರಂಗಕ್ಕಿಳಿದ ಸೋನು ಸೂದ್: ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ನೆರವು

    ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಸೋನು ಸೂದ್

    ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಸೋನು ಸೂದ್

    ಸೋನು ಸೂದ್‌ ಮಾಡುತ್ತಿರುವ ಮಾನವೀಯ ಕಾರ್ಯದಿಂದಾಗಿ ಅವರಿಗೆ ಸಿಗುತ್ತಿದ್ದ ಪಾತ್ರಗಳಲ್ಲಿ ಬದಲಾವಣೆ ಆಗಿದೆ. ಹಿಂದೆಲ್ಲ ವಿಲನ್ ರೋಲ್‌ಗಳು ಸೋನು ಸೂದ್‌ಗೆ ಹೆಚ್ಚಾಗಿ ದೊರಕುತ್ತಿತ್ತು. ಈಗ ನಾಯಕ ನಟನ ಪಾತ್ರಗಳು ಸೋನು ಸೂದ್ ಅನ್ನು ಅರಸಿ ಬರುತ್ತಿವೆ. ಅಕ್ಷಯ್ ಕುಮಾರ್ ನಟನೆಯ 'ಪೃಥ್ವಿರಾಜ್' ಸಿನಿಮಾದಲ್ಲಿ ಸೋನು ಸೂದ್ ನಟಿಸಿದ್ದು, ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. 'ಫತೇಹ್' ಹೆಸರಿನ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ, ಅದೂ ಸಹ ಬಿಡುಗಡೆ ಆಗಬೇಕಿದೆ. ತಮಿಳಿನ 'ಮದ ಗಜ ರಾಜ', 'ಪೊಲೀಸ್ ಟೈಗರ್' ಸಿನಿಮಾಗಳು ಸಹ ತೆರೆಗೆ ಬರಲು ಸಜ್ಜಾಗಿವೆ.

    English summary
    Sonu Sood asks hospital to make 50 liver transplant for free instead of taking remuneration for acting in advertisement.
    Wednesday, May 11, 2022, 15:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X